ಜೇನುತುಪ್ಪ, ಹಣ್ಣು ಹಂಪಲು, ತರಕಾರಿ ಇವೆಲ್ಲ ನಿಸರ್ಗದಿಂದ ನಮಗೆ ಸಿಕ್ಕ ವರಂತಾನೇ ಹೇಳಬಹುದು. ಇಂಥ ವರಗಳಲ್ಲಿ ನೆಲ್ಲಿಕಾಯಿ ಕೂಡ ಒಂದು. ನೆಲ್ಲಿಕಾಯಿ ತಿನ್ನುವುದರಿಂದ ಹಲವಾರು ಆರೋಗ್ಯ ಲಾಭಗಳು ಸಿಗುತ್ತದೆ. ಅದೇ ರೀತಿ ಇದರ ಜ್ಯೂಸ್ ಕೂಡ ಆರೋಗ್ಯಕರವಾಗಿದೆ. ಹಾಗಾಗಿ ಇಂದು ನಾವು ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಸಲಿದ್ದೇವೆ.
ಹಲಸಿನ ಹಣ್ಣಿನ ಬೀಜದಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ..?
ವಿಟಾಮಿನ್ ಸಿಯಿಂದ ಭರಪೂರವಾಗಿರು ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಕೂದಲಿನ ಆರೋಗ್ಯ ಉತ್ತಮವಾಗುತ್ತದೆ. ಕೂದಲು ಉದುರುವ ಸಮಸ್ಯೆ ಇದ್ದರೆ, ನಿಮ್ಮ ಕೂದಲಿನ ಬುಡ ಗಟ್ಟಿಯಾಗಬೇಕು. ಕೂದಲಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಬರಬಾರದು ಅಂದ್ರೆ, ಆಮ್ಲಾ ಜ್ಯೂಸ್ ಕುಡಿಯಿರಿ. ಕೂದಲು ಬೇಗ ಬೆಳ್ಳಗಾಗುವುದು, ಕೂದಲ ಬುಡದಲ್ಲಿ ಗುಳ್ಳೆಗಳಾಗುವುದೆಲ್ಲ ಆದ್ರೂ ಕೂಡ ನೀವು ನೆಲ್ಲಿಕಾಯಿ ಜ್ಯೂಸ್ ಬಳಕೆ ಮಾಡಬಹುದು.
ಇನ್ನು ನಿಮ್ಮ ತ್ವಚೆ ಮೇಲೆ ಗುಳ್ಳೆ, ಮೊಡವೆ ಇದ್ದರೆ. ಅಥವಾ ಮೊಡವೆ ಕಲೆಗಳಿದ್ದರೆ, ಮುಖ ಸುಕ್ಕುಗಟ್ಟುತ್ತಿದ್ದರೆ, ನೆವೆ ಇದ್ದರೆ, ನೀವು ಪ್ರತಿದಿನ ಆಮ್ಲಾ ಜ್ಯೂಸ್ ಕುಡಿದರೆ ಸಾಕು. ನಿಮ್ಮೆಲ್ಲಾ ತ್ವಚೆಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇನ್ನು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇದ್ದಲ್ಲಿ, ನೆಲ್ಲಿಕಾಯಿ ಜ್ಯೂಸ್ ಕುಡಿಯಿರಿ. ಜೀರ್ಣಕ್ರಿಯೆ ಸಮಸ್ಯೆ, ಹೊಟ್ಟೆನೋವು, ಮಲಬದ್ಧತೆ ಸಮಸ್ಯೆ, ಇವೆಲ್ಲದಕ್ಕೂ ನೆಲ್ಲಿಕಾಯಿ ಜ್ಯೂಸ್ ಪರಿಹಾರ.
ಕರಬೂಜಾ ಹಣ್ಣನ್ನು ಇಷ್ಟಪಡುವವರು ಮೊದಲು ಈ ಸ್ಟೋರಿ ಓದಿ..
ಇನ್ನು ಆಮ್ಯಾ ಜ್ಯೂಸ್ ಕುಡಿದರೆ, ಹಲವು ಆರೋಗ್ಯಕರ ಪ್ರಯೋಜನಗಳಿದೆ ಅನ್ನೋದು ನಿಜ. ಆದ್ರೆ ಅದನ್ನ ಹೇಗೆ ಕುಡಿಯಬೇಕು ಅಂದ್ರೆ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮಿತವಾಗಿ ಕುಡಿಯಬೇಕು. ಒಂದು ಚಿಕ್ಕ ಗ್ಲಾಸಿನಲ್ಲಿ ನೀವು ಜ್ಯೂಸ್ ಕುಡಿದರೂ ಸಾಕು. ನೀವು ಮಾರುಕಟ್ಟೆಯಲ್ಲಿ ಸಿಗುವ ಸಿರಪ್‌ನ್ನು ನೀರಿನಲ್ಲಿ ಮಿಕ್ಸ್ ಮಾಡಿ ಕುಡಿಯಬಹುದು. ಆದ್ರೆ ಅದಕ್ಕಿಂತ, ಫ್ರೆಶ್ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದು ಉತ್ತಮ. ಇನ್ನು ನಿಮಗೆ ನೆಲ್ಲಿಕಾಯಿ ಜ್ಯೂಸ್ ಕುಡಿದರೆ, ಅಲರ್ಜಿ ಎಂದಾದಲ್ಲಿ, ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಬಳಸುವುದು ಉತ್ತಮ.