Friday, December 6, 2024

Latest Posts

ಬಿಜೆಪಿ ಭದ್ರಕೋಟೆ ಛಿದ್ರ ಛಿದ್ರ: ಶಿಗ್ಗಾಂವಿಯಲ್ಲಿ ಕಾಂಗ್ರೆಸ್ಸಿನಲ್ಲಿ ವಿಜಯೋತ್ಸವ

- Advertisement -

Political News: ಹಾವೇರಿ: ಶಿಗ್ಗಾಂವ-ಸವಣೂರ ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿರುವ ಬೆನ್ನಲ್ಲೇ ಕಾಂಗ್ರೆಸ್ಸಿನ ಸಂಭ್ರಮ ಮನೆ ಮಾಡಿದ್ದು, ಮಾಜಿ ಸಿಎಂ ಸಾಮ್ರಾಜ್ಯವನ್ನು ಛಿದ್ರ ಮಾಡಿದ ಕಾಂಗ್ರೆಸ್ಸಿನ ಅಭ್ಯರ್ಥಿಯ ಗೆಲುವು ಕಾಂಗ್ರೆಸ್ಸಿನ ಕಾರ್ಯಕರ್ತರಲ್ಲಿ ಹರ್ಷೋದ್ಘಾರ ಇಮ್ಮಡಿಗೊಂಡಿದೆ.

ಹೌದು.. ಮಾಜಿ ಸಿಎಂ ಪುತ್ರ ಭರತ್ ಬೊಮ್ಮಾಯಿ ಕಾಂಗ್ರೆಸ್ಸಿನ ಯಾಸಿರ್ ಖಾನ್ ಪಠಾಣ ವಿರುದ್ಧ ಸೋಲು ಅನುಭವಿಸಿದ್ದು, ಹಾವೇರಿ ಜಿಲ್ಲೆಯ ಶಿಗ್ಗಾಂವ ಪಟ್ಟಣದಲ್ಲಿ ಕಾಂಗ್ರೆಸ್ಸಿನ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.

ಪರಸ್ಪರ ಬಣ್ಣ ಹಚ್ಚಿಕೊಂಡು ಸಿಹಿ ಹಂಚಿ ಅದ್ದೂರಿಯಾಗಿ ಸಂಭ್ರಮಾಚರಣೆ ಮಾಡಿದ್ದು, ಬಿಜೆಪಿ ಭದ್ರಕೋಟೆಯಲ್ಲಿ ಕಾಂಗ್ರೆಸ್ಸಿನ ಬಾವುಟ ಹಾರಿದೆ.

- Advertisement -

Latest Posts

Don't Miss