Health Tips: ನಾವು ಈಗಾಗಲೇ ಸ್ತನಪಾನ ಮಾಡಿಸುವುದರಿಂದ ತಾಯಿಯ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ಹೇಳಿದ್ದೇವೆ. ಅಲ್ಲದೇ, ಶಿಶುವಿಗೆ ಸ್ತನಪಾನ ಎಷ್ಟು ಮುಖ್ಯ ಎಂಬ ಬಗ್ಗೆಯೂ ಹೇಳಿದ್ದೇವೆ. ಅದೇ ರೀತಿ ಎದೆಹಾಲು ಉಣಿಸುವುದರಿಂದ ನಾವು ಕ್ಯಾನ್ಸರ್ ಬರುವುದನ್ನು ಕೂಡ ತಡೆಗಟ್ಟಬಹುದು. ಅದು ಹೇಗೆ ಅಂತಾ ತಿಳಿಯೋಣ ಬನ್ನಿ..
ಈ ವಿಷಯದ ಬಗ್ಗೆ ಡಾ.ಶಿವಕುಮಾರ್ ಉಪ್ಪಳ ಮಾತನಾಡಿದ್ದು, ಎದೆಹಾಲುಣಿಸುವ ಲಾಭದ ಬಗ್ಗೆ ಮಾಹಿತಿ ನೀಡಿದ್ದಾರೆ. ತಾಯಿ ಮಗುವಿಗೆ ಯಾಕೆ ಸ್ತನಪಾನ ಮಾಡಿಸಬೇಕು ಅಂದ್ರೆ, ಮಗುವಿನ ಬೆಳವಣಿಗೆಗೆ ಬೇಕಾದ ಅತ್ಯುತ್ತಮ ಆಹಾರವೆಂದರೆ ತಾಯಿಯ ಎದೆ ಹಾಲು. 6 ತಿಂಗಳಾದರೂ ಮಗುವಿಗೆ ತಾಯಿಯ ಎದೆ ಹಾಲು ಸಿಕ್ಕರೆ, ಆ ಮಗುವಿನ ಬೆಳವಣಿಗೆ ಉತ್ತಮವಾಗಿರುತ್ತದೆ. ಅದು ಆರೋಗ್ಯವಾಗಿ ಬೆಳೆಯುತ್ತದೆ. ಮಗುವಿನ ದೇಹದಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.
ಇನ್ನು ತಾಯಿಯ ಹಾಲು ಮಗುವಿಗೆ ಎಷ್ಟು ಮುಖ್ಯವೋ, ಹಾಲು ಕುಡಿಸುವುದು ತಾಯಿಗೂ ಅಷ್ಟೇ ಮುಖ್ಯ. ಇದರಿಂದ ಆಕೆಯ ಆರೋಗ್ಯವೂ ಸುಧಾರಿಸುತ್ತದೆ. ಮಗುವಿಗೆ ಹಾಲುಣಿಸದಿದ್ದಲ್ಲಿ, ಬ್ರೀಸ್ಟ್ ಕ್ಯಾನ್ಸರ್ ಬರುತ್ತದೆ. ಕೆಲವರು ಹಾಲು ಬರಲೇಬಾರದು ಅಂತಾ ಮಾತ್ರೆ ತೆಗೆದುಕೊಳ್ಳುತ್ತಾರೆ. ಇದರಿಂದಲೂ ಸೈಡ್ ಎಫೆಕ್ಟ್ ಆಗುತ್ತದೆ. ಹಾಗಾಗಿ ತಾಯಿಯಾದವಳು ಮಗುವಿಗೆ ಎದೆ ಹಾಲು ಉಣಿಸಬೇಕು. ಇದರಿಂದ ನಾವು ಕ್ಯಾನ್ಸರ್ ಬರುವುದನ್ನು ತಡೆಗಟ್ಟಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ವೀಡಿಯೋ ನೋಡಿ..