ಯಾದಗಿರಿ: ಗ್ರಾಮ ವಾಸ್ತವ್ಯ ಮಾಡಿ ಸೈ ಎನಿಸಿಕೊಂಡಿದ್ದ ಕುಮಾರಸ್ವಾಮಿ ಇದೀಗ ತಮ್ಮ ಎರಡನೇ ಅವಧಿಯಲ್ಲೂ ಮುಂದುವರಿಸುತ್ತಿದ್ದು ಯಾದಗಿರಿ ಜಿಲ್ಲೆಯ ಗ್ರಾಮವೊಂದವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಕಳೆದ ಬಾರಿಯ 20-20 ಸರ್ಕಾರದಲ್ಲಿ ಗ್ರಾಮವಾಸ್ತವ್ಯ ನಡೆಸಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದ್ದ ಸಿಎಂ ಇದೀಗ ಮತ್ತೆ ಗ್ರಾಮ ವಾಸ್ತವ್ಯ ಶುರುಮಾಡಲಿದ್ದಾರೆ. ಅನಾರೋಗ್ಯ ಹಾಗೂ ನಾನಾ ಕಾರಣಗಳಿಂದಾಗಿ ಇಷ್ಟುದಿನ ಗ್ರಾಮ ವಾಸ್ತವ್ಯದಿಂದ...
ಚಿಕ್ಕಮಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಸಾಕಷ್ಟು ಸುದ್ದಿ ಮಾಡಿದ್ದ ಗೌರಿಗದ್ದೆಯ ದತ್ತಾಶ್ರಮದ ವಿನಯ್ ಗುರೂಜಿ ಇನ್ನು ಮುಂದೆ ಗುಹೆ ವಾಸ ಮಾಡಲಿದ್ದು, ತಮ್ಮ ಲಕ್ಷಾಂತರ ಭಕ್ತರಿಂದ ದೂರ ಉಳಿಯೋ ನಿರ್ಧಾರ ತೆಗೆದುಕೊಂಡಿದ್ದಾರೆ.
ಚಿಕ್ಕಮಗಳೂರಿನ ಶೃಂಗೇರಿ ತಾಲೂಕಿನ ಗೌರಿಗದ್ದೆಯ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ ಇನ್ನು ಮುಂದೆ ಗುಹೆಯಲ್ಲಿ ವಾಸ ಮಾಡೋ ನಿರ್ಧಾರ ತೆಗೆದುಕೊಂಡು ಧ್ಯಾನಕ್ಕೆ...
ತುಮಕೂರು: ಇಷ್ಟವಿಲ್ಲದ ಹುಡುಗನೊಂದಿಗೆ ಮದುವೆ ತಪ್ಪಿಸಿಕೊಳ್ಳಲು ವಧು ವಿಷ ಕುಡಿದಂತೆ ನಾಟಕವಾಡಿ ಪ್ರಿಯಕರನೊಂದಿಗೆ ಪರಾರಿಯಾಗಿರೋ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರಿನ ಮಳೆಕೋಟೆ ಗ್ರಾಮದ ಯುವತಿಗೆ ಮಂಜುನಾಥ್ ಎಂಬಾತನೊಂದಿಗೆ ಇಂದು ಮದುವೆ ನಿಶ್ಚಯವಾಗಿತ್ತು. ಆದ್ರೆ ಬೇರೊಬ್ಬನನ್ನು ಪ್ರೀತಿಸುತ್ತಿದ್ದ ಯುವತಿಗೆ ಈ ಮದುವೆ ಇಷ್ಟವಿರಲಿಲ್ಲ. ಮನೆಯವರನ್ನು ಒಪ್ಪಿಸಲಾಗದೆ ಇಷ್ಟು ದಿನ ಸುಮ್ಮನಿದ್ದ ಹುಡುಗಿ ನಿನ್ನೆ ರಾತ್ರಿ ಮನೆಯಿಂದ...
ಬೆಂಗಳೂರು: ನಗರದಲ್ಲಿ ಎಟಿಎಂ ಲೂಟಿಕೋರರು ಹೆಚ್ಚಾಗ್ತಿದ್ದು ಇದೀಗ ನಗರದಲ್ಲಿ ವಾಸವಿರೋ ಕೆಲ ವಿದೇಶಿ ಖದೀಮರು ಈ ಕುಕೃತ್ಯವೆಸಗುತ್ತಿರೋ ಬಗ್ಗೆ ಮಾಹಿತಿ ಸಿಕ್ಕಿದ್ದು ಪೊಲೀಸರಿಗೆ ತಲೆನೋವಾಗಿ ಕಾಡ್ತಿದ್ದಾರೆ.
ಎಟಿಎಂಗೆ ಬರುವ ಗ್ರಾಹಕರನ್ನು ಟಾರ್ಗೆಟ್ ಮಾಡೋ ಈ ವಿದೇಶಿ ಖದೀಮರು ಪಾಸ್ ವರ್ಡ್ ನೋಡಿಕೊಂಡು ತಮ್ಮ ಕೈಚಳಕ ತೋರುತ್ತಿದ್ದಾರೆ. ಹಣ ಡ್ರಾ ಮಾಡೋಕೆ ಬರುವವರ ಎಟಿಎಂ ಪಾಸ್...
ಚಿಕ್ಕಮಗಳೂರು: ಗೌರಿಗದ್ದೆಯ ದತ್ತಾಶ್ರಮದ ವಿನಯ್ ಗುರೂಜಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಆರೋಪಿ ಕಣ್ಣೀರು ಹಾಕಿ ಕ್ಷಮೆ ಕೋರಿದ್ದಾನೆ.
ಗುರೂಜಿ ಹೇಳಿಕೆಯನ್ನ ತಪ್ಪಾಗಿ ಗ್ರಹಿಸಿ ನಾನು ತಿಳುವಳಿಕೆ ಇಲ್ಲದೆ ತಪ್ಪು ಮಾಡಿದ್ದೇನೆ. ಗುರೂಜಿಯವರ ಹೇಳಿಕೆಯ ಅರ್ಧಂಬರ್ಧ ವಿಡಿಯೋ ನೋಡಿದ್ದೇ ಇದಕ್ಕೆ ಕಾರಣವಾಗಿದೆ. ಆಶ್ರಮಕ್ಕೆ ಬರುತ್ತಿದ್ದಂತೆಯೇ ನನ್ನ ತಪ್ಪಿನ ಅರಿವಾಗಿದೆ, ಗುರೂಜಿಯವರು ನಾಗಾರಾಧನೆ ಬಗ್ಗೆ ತಪ್ಪಾಗಿ...
ಮೈಸೂರು: ಮೈಸೂರು-ಬೆಂಗಳೂರು ನಡುವೆ ವಿಮಾನ ಸಂಚಾರ ಪ್ರಾರಂಭಿಸಲಾಗಿದೆ. ಇಂದು ವಿಮಾನ ಸಂಚಾರಕ್ಕೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಚಾಲನೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮಹತ್ವಾಕಾಂಕ್ಷಿ ಪ್ರಾದೇಶಿಕ ವಿಮಾನ ಸಂಚಾರ ಯೋಜನೆ ಉಡಾನ್ 3ರ ಯೋಜನೆಯಡಿಯಲ್ಲಿ ಮೈಸೂರಿನಿಂದ ಫ್ಲೈಟ್ ಸೇಲೆ ಪ್ರಾರಂಭಿಸಲಾಗಿದೆ. ಪ್ರತಿದಿನ ಬೆಳಗ್ಗೆ 11.145ಕ್ಕೆ ಮೈಸೂರಿಗೆ ಆಗಮಿಸೋ ಇಂಡಿಯನ್ ಏರ್ ಲೈನ್ಸ್ ಸಂಸ್ಥೆಯ...
ಬಳ್ಳಾರಿ: ಗಣಿ ಧಣಿ ಜನಾರ್ದನ ರೆಡ್ಡಿ ಬಳ್ಳಾರಿಗೆ ಪ್ರವೇಶಿಸಲು ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ತಮ್ಮ ಮಾವನ ಅನಾರೋಗ್ಯ ಕಾರಣ ಕೊಟ್ಟು ಬಳ್ಳಾರಿಗೆ ಹೋಗಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದ ರೆಡ್ಡಿಗೆ ಇದೀಗ ಬಳ್ಳಾರಿ ಪ್ರವೇಶಾವಕಾಶ ಸಿಕ್ಕಿದೆ.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ರೂ ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ಹೋಗಲು...
ಬೆಂಗಳೂರು: ರಾಜ್ಯದಲ್ಲಿ ತಿಮ್ಮಪ್ಪನ ಬೃಹತ್ ದೇವಸ್ಥಾನ ತಲೆಯೆತ್ತಲಿದೆ. ಈ ಬಗ್ಗೆ ಮುಜರಾಯಿ ಇಲಾಖೆ ಸಚಿವ ಪರಮೇಶ್ವರ್ ನಾಯ್ಕ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸ್ಥಳ ಕೂಡ ನಿಗದಿಪಡಿಸಿದ್ದಾರೆ.
ತಿರುಮಲ ತಿರುವತಿ ದೇವಸ್ಥಾನದಂತೆಯೇ ರಾಜ್ಯದಲ್ಲೂ ತಿಮ್ಮಪ್ಪನ ಬೃಹದಾಕಾರದ ದೇಗುಲ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ದೇಗುಲ ನಿರ್ಮಾಣಕ್ಕಾಗಿ ಸಿಎಂ ಕುಮಾರಸ್ವಾಮಿ ರಾಮನಗರದಲ್ಲಿ 15 ಎಕರೆ ಪ್ರದೇಶವನ್ನ ಮಂಜೂರು ಮಾಡಿ...
ಬೆಂಗಳೂರು: ಚುನಾವಣೆ ಯಾವಾಗ ಬೇಕಾದ್ರೂ
ಎದುರಾಗಬಹುದು ಯಾವುದಕ್ಕೂ ಜೆಡಿಎಸ್ ಕಾರ್ಯಕರ್ತರು ಸಿದ್ಧವಾಗಿರಿ ಅಂತ ಕಾರ್ಯಕರ್ತರಿಗೆ ನಿಖಿಲ್
ಹೇಳಿದ್ದ ಮಾತಿಗೆ ತಂದೆ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಲ್ಲಿ ಮಧ್ಯಂತರ
ಚುನಾವಣೆ ಎದುರಾಗೋದು ಸುಳ್ಳು ಅಂತ ಸಿಎಂ ಹೇಳಿದ್ದಾರೆ.
ಮಂಡ್ಯದಲ್ಲಿ ಕಾರ್ಯಕರ್ತರಿಗೆ ನಿಖಿಲ್ ಚುನಾವಣೆಗೆ ಸಿದ್ಧವಾಗುವಂತೆ ಪಕ್ಷದ ಕಾರ್ಯಕರ್ತರಿಗೆ ನೀಡಿದ್ದ ಸೂಚನೆಗೆ ಸಿಎಂ ಇದೀಗ ತಮ್ಮದೇ ಆದ ವಿವರಣೆ ನೀಡಿದ್ದಾರೆ....
ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ವಿತರಿಸಲಾಗುತ್ತಿರೋ ಅಕ್ಕಿಯ ಪ್ರಮಾಣವನ್ನು ಏರಿಕೆ ಮಾಡುವ ಕುರಿತಂತೆ ಇಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಿತು. ಅಕ್ಕಿ ವಿತರಣೆ ಜಾಸ್ತಿ ಮಾಡಿ ಅಂತ ಕಾಂಗ್ರೆಸ್, ಇಲ್ಲ ಜಾಸ್ತಿ ಮಾಡೋ ಚಾನ್ಸೇ ಇಲ್ಲ, ಅಂತ ಜೆಡಿಎಸ್ ಸಚಿವರು. ಹೀಗೆ ಚೌಕಾಸಿ ಮಾಡಿ ಕೊನೆಗೆ ಯಥಾವತ್ತಾಗಿ ಯೋಜನೆ ಮುಂದುವರಿಸಲು ತೀರ್ಮಾನ ಮಾಡಲಾಯ್ತು.
ಸಚಿವ...
ಕಳೆದ ಒಂದು ತಿಂಗಳಿಂದ ಕರ್ನಾಟಕದಲ್ಲಿ ನಿರಂತರವಾಗಿ ಮಳೆಯಾಗುತ್ತಿತ್ತು. ಜುಲೈ ತಿಂಗಳ ಕೊನೆ ಭಾಗಕ್ಕೆ ಬರುತ್ತಿರುವ ಈ ಹೊತ್ತಿನಲ್ಲಿ, ಕರ್ನಾಟಕದಲ್ಲಿ ಮುಂಗಾರು ದುರ್ಬಲಗೊಳ್ಳುತ್ತಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗುವ...