ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ
ಅಭ್ಯರ್ಥಿ ನಿಖಿಲ್ ಕುಮಾರ್ ಸೋಲಿನಿಂದ ಬೇಸರಗೊಂಡ ಅಭಿಮಾನಿಯೊಬ್ಬ ತನ್ನ ಬೆರಳನ್ನೇ ಕತ್ತರಿಸಿಕೊಂಡಿದ್ದಾನೆ.
ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ಸ್ಪರ್ಧಿಸಿ ಸೋತಿರುವ ನಿಖಿಲ್ ಗೌಡ ಅಭಿಮಾನಿಯೊಬ್ಬ ನಿಖಿಲ್ ಸೋತಿದ್ದಾರೆ, ಹೀಗಾಗಿ ಅವರಿಗಾಗಿ ಮತದಾನ ಮಾಡಿ ಶಾಹಿ ಹಾಕಿಸಿಕೊಂಡ ಬೆರಳೇ ಇರಬಾರದು ಅಂತ ತಮ್ಮ ಬೆರಳನ್ನೇ ಕತ್ತರಿಸಿಕೊಂಡಿದ್ದಾನಂತೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ...
ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ದೇವೇಗೌಡ ವಿರುದ್ಧ ಗೆಲುವು ಸಾಧಿಸಿರೋ
ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜು ತಮ್ಮ ಗೆಲುವಿಗೆ ಕಾರಣ ಏನು ಅನ್ನೋದನ್ನ
ಬಿಚ್ಚಿಟ್ಟಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಬಸವರಾಜು, ನನ್ನ ಗೆಲುವಿಗೆ ದೇವೇಗೌಡರು ವರವಾದ್ರು. ಒಂದುವೇಳೆ ಮುದ್ದಹನುಮೇಗೌಡರು ಸ್ಪರ್ಧಿಸಿದ್ದರೆ ನನ್ನ ಗೆಲುವು ಕಷ್ಟವಾಗುತ್ತಿತ್ತು. ಆದರೆ ಗೌಡರು ಸ್ಪರ್ಧೆ ಮಾಡಿದ್ದರಿಂದ ನನಗೆ ಇನ್ನೂ ಸುಲಭವಾಯ್ತು ಅಂತ...
ವಿಜಯಪುರ: ದೇಶದಲ್ಲಿ ಮೋದಿ ಅಭೂತಪೂರ್ವ
ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಯೊಬ್ಬರು ಇಂದು ಇಡೀ ದಿನ ಉಚಿತವಾಗಿ ಹೇರ್
ಕಟ್ಟಿಂಗ್ ಮಾಡಲಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ರಮೇಶ್ ಹಡಪದ್ ಎಂಬುವರೇ ಉಚಿತ ಹೇರ್ ಕಟ್ಟಿಂಗ್ ಮಾಡುತ್ತಿರುವ ಮೋದಿ ಅಭಿಮಾನಿ. ರಮೇಶ್ ಹಡಪದ್, ವಿಜಯಪುರದಲ್ಲಿ ಜಿಗಜಿಣಗಿ ಮತ್ತು ದೇಶದಲ್ಲಿ ಮೋದಿ ಅಧಿಕಾರಕ್ಕೆ ಬಂದ್ರೆ ಇಂದು ಫ್ರೀ ಹೇರ್...
ಮಂಡ್ಯ: ನಿಂತಿದ್ದ ಲಾರಿಗೆ ಕಾರು
ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅತಿ ವೇಗವಾಗಿ ಚಲಿಸುತ್ತಿದ್ದ ಸ್ವಿಫ್ಟ್ ಕಾರು ಅಲ್ಲಿಯೇ ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಕಿರಣ್ ಅಶೋಕ್, ಜಯದೇವ್ ಮತ್ತು ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಮೃತರೆಲ್ಲರೂ ಕೇರಳ ಮೂಲದವರು ಎಂದು ತಿಳಿದು ಬಂದಿದೆ.ಮದ್ದೂರು...
ಲೋಕಸಭಾ ಮಹಾಸಮರದಲ್ಲಿ ಪ್ರಚಂಡ ಗೆಲುವು ಸಾಧಿಸಿದ ಬಿಜೆಪಿ ಇದೀಗ 2ನೇ ಬಾರಿ ಅಧಿಕಾರಕ್ಕೇರಲು ಸಜ್ಜಾಗಿದೆ. ಒಟ್ಟು 542 ಕ್ಷೇತ್ರಗಳಲ್ಲಿ ಎನ್ ಡಿಎ 300ಕ್ಕೂ ಹೆಚ್ಚು ಸ್ಥಾನ ಗೆದ್ದರೆ, ಕರ್ನಾಟಕದ 24 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ಬೀಗಿದೆ.
ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ವಿಜಯೋತ್ಸವ
ಭಾಷಣ ಮಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಜಾತ್ಯತೀತ ಎಂಬ...
ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡಿ ಗಮನ ಸೆಳೆದಿದ್ದ ಚಾಲೆಂಜಿಂಗ್ ಸ್ಟಾರ್ ಮಂಡ್ಯ ಜನತೆಗೆ ಧನ್ಯವಾದ ಹೇಳಿದ್ದಾರೆ.
ವಿಡಿಯೋ ಮೂಲಕ ಧನ್ಯವಾದ ಹೇಳಿರೋ ಡಿ ಬಾಸ್, ಮಂಡ್ಯ ಲೋಕಸಭಾ ಕ್ಷೇತ್ರದ ಪ್ರತಿ ಹಳ್ಳಿಯ ಪ್ರತಿಯೊಬ್ಬರಿಗೂ ನನ್ನ ಸಾಷ್ಠಾಗ ನಮಸ್ಕಾರ. ನಮ್ಮ ಸಣ್ಣ ಅಳಿಲು ಸೇವೆಗೆ ನೀವು ಅಮ್ಮನಿಗೆ...
ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಸುಮಲತಾ ಅಂಬರೀಶ್, ಸಂಸದೆಯಾಗಿ ಪ್ರಮೋಟ್ ಆಗಿದ್ದಾರೆ. ತಮ್ಮ ಗೆಲುವನ್ನೇ ಅರಗಿಸಿಕೊಳ್ಳೋದಕ್ಕೆ ಆಗ್ತಿಲ್ಲ ಅಂತ ಸುಮಲತಾ ಹೇಳಿದ್ದಾರೆ. ಅಲ್ಲದೆ ಈ ಗೆಲುವು ಮಂಡ್ಯದ ಸ್ವಾಭಿಮಾನ , ಅಂಬಿ ಮೇಲಿನ ಅಭಿಮಾನ ಮತ್ತು ಮಂಡ್ಯ ಮಹಿಳೆಯರ ಗೆಲುವು ಅಂತ ಹೇಳಿದ್ರು. ತಮ್ಮ ಮುಂದಿನ ನಿರ್ಧಾರವೇನು ಎಂದು ಕೇಳಿದ ಪ್ರಶ್ನೆಗೆ...
ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಸ್ವಾಭಿಮಾನವನ್ನ ಎತ್ತಿಹಿಡಿದಿದೆ
ಅಂತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹೇಳಿದ್ದಾರೆ.
ಚುನಾವಣೆಯಲ್ಲಿ ಸುಮಲತಾ ಗೆಲುವು ಕುರಿತಾಗಿ ಮಾತನಾಡಿದ ರಾಕ್ ಲೈನ್, ಮಂಡ್ಯದ ಮತದಾರರು ಸುಮಲತಾರಿಗೆ ಗೆಲುತಂದುಕೊಟ್ಟಿದ್ದಾರೆ, ಮಂಡ್ಯ ಜನತೆಗೆ ನನ್ನ ಧನ್ಯವಾದ. ಇವತ್ತು ಅಂಬರೀಶ್ ಇದ್ದಿದ್ದರೆ ಬಹಳ ಖುಷಿ ಪಡುತ್ತಿದ್ದರು. ರೈತರ ಸಂಘ, ಬಿಜೆಪಿ, ಕಾಂಗ್ರೆಸ್, ಯಶ್, ದರ್ಶನ್ ಸೇರಿದಂತೆ...
ಚಾಮರಾಜನಗರ: ಲೋಕಸಭಾ ಚುನಾವಣೆಯಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದ್ದ ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಜಯಭೇರಿ ಬಾರಿಸಿದ್ದಾರೆ.
ಮತಎಣಿಕೆಯ ಬಹುತೇಕ ಸುತ್ತುಗಳಲ್ಲೂ ಕೆಲವೇ ಮತಗಳ ಅಂತರ ಕಾಯ್ದುಕೊಂಡಿದ್ದ ಉಭಯ ಪಕ್ಷದ ಅಭ್ಯರ್ಥಿಗಳ ಜಿದ್ದಾಜಿದ್ದಿಗೆ ತೆರೆ ಬಿದ್ದು, ಬಿಜೆಪಿಯ ಶ್ರೀನಿವಾಸ ಪ್ರಸಾದ್ ಗೆದ್ದಿದ್ದಾರೆ. ಆದ್ರೆ ಕೇವಲ 341 ಮತಗಳಿಂದ ಕಾಂಗ್ರೆಸ್ ನ ಧ್ರುವನಾರಾಯಣ್...
ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿರೋ ಮೈತ್ರಿ ಸರ್ಕಾರದ ಸಿಎಂ
ಕುಮಾರಸ್ವಾಮಿ ಫಲಿತಾಂಶದ ಕುರಿತಾಗಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಲೋಕಸಭಾ ಚುನಾವಣೆಯ ಫಲಿತಾಂಶ ಅನಿರೀಕ್ಷಿತ. ಈ ಫಲಿತಾಂಶವನ್ನು ಗೌರವಿಸುತ್ತೇನೆ ಹಾಗೂ ಮತ್ತೊಮ್ಮೆ ಜನಾದೇಶ ಪಡೆದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ರಾಜ್ಯದಲ್ಲಿ ಗೆಲುವು ಸಾಧಿಸಿದ ಎಲ್ಲ ಅಭ್ಯರ್ಥಿಗಳಿಗೂ ನನ್ನ ಶುಭಾಶಯಗಳು ಎಂದು ಕುಮಾರಸ್ವಾಮಿ ಟ್ವೀಟ್...