ಬೆಂಗಳೂರು: ಸಮ್ಮಿಶ್ರ ಸರ್ಕಾರ ಪತನವಾದ ಬೆನ್ನಲ್ಲೇ ಇದೀಗ ದೋಸ್ತಿಗಳಿಗೆ ಮೈತ್ರಿ ಮುಂದುವರಿಸಬೇಕೋ ಬೇಡವೋ ಎನ್ನುವ ಪ್ರಶ್ನೆ ಎದುರಾಗಿದೆ. ಇನ್ನು ಮೈತ್ರಿ ಮುಂದುವರಿಸುವ ಬಗ್ಗೆ ಕಾಂಗ್ರೆಸ್ ನಾಯಕರು ಯಾವ ನಿರ್ಧಾರ ಕೈಗೊಳ್ಳುತ್ತಾರೋ ಗೊತ್ತಿಲ್ಲ ಅಂತ ನಿರ್ಗಮಿತ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನ ಜೆಡಿಎಸ್ ಪ್ರಧಾನ ಕಚೇರಿ ಜೆಪಿ ಭವನದ ಬಳಿ ಮಾತನಾಡಿದ ನಿರ್ಗಮಿತ ಸಿಎಂ...
ಬೆಂಗಳೂರು: ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತ್ತು. ಇದೀಗ ಸಮ್ಮಿಶ್ರ ಸರ್ಕಾರ ಪತನವಾಗಿರೋ ಹಿನ್ನೆಲೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮುಂದುವರಿಸಬೇಕೋ ಬೇಡವೋ ಎನ್ನುವ ಬಗ್ಗೆ ಕಾಂಗ್ರೆಸ್ ನಾಯಕರು ಚರ್ಚೆ ನಡೆಸ್ತಿದ್ರೆ, ಕೆಲವರು ಎಲ್ಲಾ ಮುಗಿದ ಮೇಲೆ ಇನ್ಯಾವ ಮೈತ್ರಿ ಅಂತ ನಿರಾಸಕ್ತಿ ತೋರಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ...
ಮೈಸೂರು: ಎಚ್.ಡಿ ರೇವಣ್ಣ ಸರ್ಕಾರ ಉಳಿಸೋದಕ್ಕೆ ಬರಿಗಾಲಲ್ಲಿ ನಡೆದ್ರೂ, ನಿಂಬೆಹಣ್ಣು ಇಟ್ಟುಕೊಂಡು ಓಡಾಡಿದ್ರೂ ಸರ್ಕಾರ ಉಳಿಸೋಕೆ ಆಗಲಿಲ್ಲ ಅಂತ ಬಿಜೆಪಿ ಮುಖಂಡ ಎ.ಮಂಜು ಲೇವಡಿ ಮಾಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಎ.ಮಂಜು, ದೇವೇಗೌಡರ ಕುಟುಂಬಕ್ಕೆ ಸಂಖ್ಯೆ 9 ಆಗಿಬರೋದಿಲ್ಲ. ಇದನ್ನು ನಾನು ದೇವೇಗೌಡರಿಗೆ ಮೊದಲೇ ಹೇಳಿದ್ದೆ. ಇದಕ್ಕೆ 1999,2009ರಲ್ಲಿ ಸೋಲು ಕಂಡಿದ್ದು ಹಾಗೂ ಇದೀಗ 2019ರಲ್ಲೂ...
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮೊದಲೇ ಮುಖ್ಯಮಂತ್ರಿಯಾಗಬೇಕಿತ್ತು. ಆದರೆ ಮೈತ್ರಿ ಪಕ್ಷಗಳು ಅವರನ್ನು ಅಧಿಕಾರದಿಂದ ದೂರವಿಟ್ಟಿತ್ತು ಅಂತ ಬಿಜೆಪಿಯ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ರಾಜ್ಯ ಸಮ್ಮಿಶ್ರ ಸರ್ಕಾರ ಪತನವಾಗುತ್ತಿದ್ದಂತೆಯೇ ಬಿಜೆಪಿ ಪಾಳಯದಲ್ಲಿ ಹೊಸ ಹುರುಪು ಮೂಡಿದೆ. ದೋಸ್ತಿ ವಿರುದ್ಧ ತಮ್ಮ ಆರೋಪ ಮುಂದುವರಿಸಿರೋ ಬಿಜೆಪಿ ಎಂಎಲ್...
ಬೆಂಗಳೂರು: ವಿಶ್ವಾಸಮತ ಯಾಚನೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಸಿಎಂ ಎಚ್.ಡಿ ಕುಮಾರಸ್ವಾಮಿ ಸದನದಲ್ಲಿ ತಮ್ಮ ಕೊಡುಗೆ, ಯೋಜನೆಗಳ ಕುರಿತಾಗಿ ಮಾತನಾಡಿದ್ದಾರೆ. ಈ ಮಧ್ಯೆ ಕಳೆದ ಬಾರಿ 20-20 ಸರ್ಕಾರದ ಕುರಿತಾಗಿ ಮಾತನಾಡಿದ ಎಚ್ಡಿಕೆ, ಪದೇ ಪದೇ ನನ್ನನ್ನು ವಚನಭ್ರಷ್ಟ ಎನ್ನಬೇಡಿ ಅಂತ ಪ್ರತಿಪಕ್ಷ ಬಿಜೆಪಿಗೆ ಮನವಿ ಮಾಡಿದ್ದಾರೆ.
ಸದನದಲ್ಲಿ ತಾವು ರಾಜ್ಯದ ಜನತೆಗೆ ನೀಡಿದ ಯೋಜನೆಗಳ...
ಬೆಂಗಳೂರು: ಇನ್ನು ಕೆಲವೇ ನಿಮಿಷಗಳಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಆರಂಭವಾಗಲಿರುವ ಮಧ್ಯೆ ರಾಜ್ಯ ಮತ್ತೊಂದು ಹೈಡ್ರಾಮಾಗೆ ಸಾಕ್ಷಿಯಾಗಿದೆ. ಪಕ್ಷೇತರ ಶಾಸಕರನ್ನು ತಮ್ಮ ಪರ ಮತ ಚಲಾಯಿಸಲು ಬಿಜೆಪಿ ಮುಖಂಡರು ಮುಂಬೈನಿಂದ ಬೆಂಗಳೂರಿಗೆ ಕರೆದಂತಿರುವ ಹಿನ್ನೆಲೆಯಲ್ಲಿ ಪಕ್ಷೇತರರು ತಂಗಿರುವ ಅಪಾರ್ಟ್ ಮೆಂಟ್ ಬಳಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಜಮಾವಣೆಯಾಗಿ ಪರಸ್ಪರ ಮಾತಿನ ಚಕಮಕಿಯಲ್ಲಿ ತೊಡಗಿದ್ದಾರೆ....
ಬೆಂಗಳೂರು: ಆಪರೇಷನ್ ಕಮಲದ ಕುರಿತು ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಭರ್ಜರಿ ಚರ್ಚೆಗಿಳಿದಿದ್ದಾರೆ. ಅಧಿಕಾರದ ಆಸೆಯಿಂದ ಶಾಸಕರನ್ನು ಕೊಂಡುಕೊಳ್ಳಲು ಹೋಲ್ ಸೇಲ್ ರೀಟೇಲ್ ವ್ಯಾಪಾರ ಮಾಡ್ತಿರೋದು ನಾಚಿಕೆಗೇಡಿನ ಸಂಗತಿ ಅಂತ ಆಕ್ರೋಶ ಹೊರಹಾಕಿದ್ರು.
ತಮ್ಮ ಶಾಸಕರನ್ನು ಸೆಳೆದು ಮುಂಬೈನಲ್ಲಿಟ್ಟಿಕೊಂಡಿರುವ ಬಿಜೆಪಿ ಅಧಿಕಾರದ ಮೇಲೆ ಅತಿಯಾದ ವ್ಯಾಮೋಹ ಹೊಂದಿದೆ ಎಂದ ಸಿದ್ದರಾಮಯ್ಯ, ನೀವು ಇವರನ್ನೆಲ್ಲಾ ನಂಬಿಕೊಂಡು 1...
ಬೆಂಗಳೂರು: ವಿಶ್ವಾಸಮತ ಯಚನೆಗೆ ಇನ್ನು ಕೆಲವೇ ಹೊತ್ತು ಬಾಕಿಯಿರುವಂತೆ ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಸದನದಲ್ಲಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿ.ಎಸ್ ಯಡಿಯೂರಪ್ಪ ಸರ್ಕಾರ ರಚನೆ ಮಾಡೋದಾಗಿ ಹಕ್ಕು ಮಂಡನೆ ಮಾಡಲೇಬಾರದಿತ್ತು ಅಂತ ಸಿದ್ದು ವಾಗ್ದಾಳಿ ನಡೆಸಿದ್ದಾರೆ.
ಸಮ್ಮಿಶ್ರ ಸರ್ಕಾರ ಅಸ್ಥಿತ್ವಕ್ಕೆ ಬಂದ ಕ್ಷಣದಿಂದಲೂ ಸರ್ಕಾರ ಪತನಗೊಳಿಸೋದಕ್ಕೆ ಬಿಜೆಪಿ ಇನ್ನಿಲ್ಲದ...
ಬೆಂಗಳೂರು: ನಾನು ಬಿಜೆಪಿಗೆ ಯಾವುದೇ ಅನ್ಯಾಯ ಮಾಡಿಲ್ಲ, ಬಿಜೆಪಿ ಕೂಡ ನನಗೆ ಯಾವುದೇ ಅನ್ಯಾಯ ಮಾಡಿಲ್ಲ. ಆದ್ರೆ ನಾನು ಶಾಸಕನಾಗಬೇಕೆಂಬ ಉದ್ದೇಶದಿಂದ ಜೆಡಿಎಸ್ ಸೇರ್ಪಡೆಗೊಂಡೆ ಅಂತ ಸಚಿವ ಸಾ.ರಾ ಮಹೇಶ್ ಸದನದಲ್ಲಿ ಹೇಳಿದ್ದಾರೆ.
ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಶಾಸಕರ ಕುರಿತು ಮಾತನಾಡಿದ ಸಚಿವ ಸಾ.ರಾ ಮಹೇಶ್, ನಮ್ಮ ಜೊತೆ ಇಲ್ಲದವರು ನಿಮ್ಮ ಜೊತೆಗೆ ಎಷ್ಟು...
ಬೆಂಗಳೂರು: ಅತೃಪ್ತ ಶಾಸಕರನ್ನು ಸಂಪರ್ಕಮಾಡಲು ವಿಫಲರಾಗಿ ಕೈಚೆಲ್ಲಿ ಕುಳಿತಿರುವ ಡಿಕೆಶಿ ಬಿಜೆಪಿ ಅವರನ್ನು ಕೂಡಿಹಾಕಿದೆ. ಮನಸ್ಸು ಮಾಡಿದ್ದರೆ ನಾನೇ ಅವರನ್ನು ಕೂಡಿಹಾಕಬಹುದಿತ್ತು ಆದರೆ ನಾನು ಆ ಕೆಲಸ ಮಾಡಲು ಹೋಗಲಿಲ್ಲ ಅಂತ ಡಿಕೆಶಿ ಹೇಳಿದ್ರು.
ಸದನದಲ್ಲಿ ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್, ಅತೃಪ್ತ ಶಾಸಕರನ್ನು ಯಾರ ಸಂಪರ್ಕಕ್ಕೂ ಸಿಗದಂತೆ ಬಿಜೆಪಿ ನೋಡಿಕೊಂಡಿದೆ. ಅವರು...