Sunday, September 8, 2024

Latest Posts

ಈ ಮೂರು ಕೆಲಸ ಮಾಡುವುದರಿಂದ ಆಯುಷ್ಯ ಕಡಿಮೆಯಾಗುತ್ತದೆ..

- Advertisement -

ಜೀವನದ ಬಗ್ಗೆ ಚಾಣಕ್ಯ ಹಲವಾರು ವಿಷಯಗಳನ್ನ ಹೇಳಿದ್ದಾರೆ. ತಮ್ಮ ಚಾಣಕ್ಯ ನೀತಿಯಲ್ಲಿ ಈ ಬಗ್ಗೆ ವಿವರಿಸಿದ್ದಾರೆ. ನಾವು ಈವರೆಗೆ ಚಾಣಕ್ಯ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿರುವ ಹಲವಾರು ವಿಷಯಗಳ ಬಗ್ಗೆ ನಿಮಗೆ ವಿವರಿಸಿದ್ದೇವೆ. ಇಂದು ಕೂಡ ಚಾಣಕ್ಯರ ಪ್ರಕಾರ, ಯಾವ 3 ಕೆಲಸಗಳನ್ನು ಮಾಡಿದ್ರೆ ಆಯಸ್ಸು ಕಡಿಮೆಯಾಗತ್ತೆ. ಹಾಗಾದ್ರೆ ಆ ಮೂರು ಕೆಲಸಗಳು ಯಾವುದು ಅಂತಾ ತಿಳಿಯೋಣ ಬನ್ನಿ..

ಜ್ಯೋತಿಷ್ಯದ ಪ್ರಕಾರ ಗುರುವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ …?

ಮೊದಲನೇಯ ಕೆಲಸ, ದಕ್ಷಿಣ ದಿಕ್ಕಿಗೆ ಮುಖ ಮಾಡಿ ಊಟ ಮಾಡುವುದು. ಹಿಂದೂ ಧರ್ಮದಲ್ಲಿ ದಕ್ಷಿಣ ದಿಕ್ಕನ್ನು ಯಮರಾಜನ ದಿಕ್ಕು ಅಂತಾ ಕರಿಯಲಾಗತ್ತೆ. ಹಾಗಾಗಿ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಕುಳಿತು ಊಟ ಮಾಡುವುದನ್ನು ನಿಲ್ಲಿಸಿ. ಇಲ್ಲವಾದಲ್ಲಿ ನಿಮ್ಮ ಆಯಸ್ಸು ಕಡಿಮೆಯಾಗುತ್ತದೆ.  ಮೆಟ್ಟಿಲ ಮೇಲೆ, ಬೆಡ್, ಸೋಫಾ ಮೇಲೆ ಕುಳಿತು ಊಟ ಮಾಡಬಾರದು. ದೇವರ ಕೋಣೆಯಲ್ಲಿ ಕುಳಿತು ಊಟ ಮಾಡಬಾರದು. ಊಟ ಮಾಡುವಾಗ ಒಮ್ಮೆ ಎದ್ದು ಹೋಗಿ, ತುಂಬ ಹೊತ್ತು ಬಿಟ್ಟು ಎದ್ದು ಬಂದು ಮತ್ತೆ ಅದೇ ತಟ್ಟೆಯಲ್ಲಿ ಉಣ್ಣಬಾರದು. ಊಟದ ತಟ್ಟೆಯಲ್ಲಿ ಅನ್ನ ಬಿಟ್ಟು ಏಳಬಾರದು. ಹೀಗೆ ಮಾಡುವುದರಿಂದ ಅನ್ನಪೂರ್ಣೆಗೆ ಅಪಮಾನ ಮಾಡಿದಂತಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ರೊಮ್ಯಾಂಟಿಕ್ ಲೈಫ್‌‌‌‌‌‌ಗಾಗಿ ಗುಟ್ಟು…!

ಎರಡನೇಯ ಕೆಲಸ, ಗುರುವಾರ, ಮಂಗಳವಾರ ಮತ್ತು ಶನಿವಾರ ಉಗುರು ಮತ್ತು ಕೂದಲು ಕತ್ತರಿಸಬಾರದು. ಹಿಂದೂ ಧರ್ಮದ ಪ್ರಕಾರ, ಆಯಾಯ ವಾರಗಳಲ್ಲಿ ಆಯಾ ಕೆಲಸಗಳನ್ನು ಮಾಡಬಾರದು ಅನ್ನೋ ನಿಯಮವಿದೆ. ರವಿವಾರ ತುಳಸಿ ಮುಟ್ಟಬಾರದು, ಬುಧವಾರ ಹೊಸಬಟ್ಟೆ ತೊಳೆಯಲು ಹಾಕಬಾರದು ಹೀಗೆ ಹಲವು ನಿಯಮಗಳಿದೆ. ಅದೇ ರೀತಿ ಗುರುವಾರ, ಮಂಗಳವಾರ ಮತ್ತು ಶನಿವಾರ ಉಗುರು ಮತ್ತು ಕೂದಲು ಕತ್ತರಿಸಬಾರದು. ಶೇವಿಂಗ್ ಮಾಡಬಾರದು. ಹೀಗೆ ಮಾಡುವುದರಿಂದ ಆಯಸ್ಸು ಕಡಿಮೆಯಾಗುತ್ತದೆ.

ಮೂರನೇಯ ಕೆಲಸ, ಸೂರ್ಯಾಸ್ತ ಮತ್ತು ಸೂರ್ಯೋದಯದಲ್ಲಿ ನಿದ್ದೆ ಮಾಡುವುದು. ಚಾಣಕ್ಯರ ಪ್ರಕಾರ, ಯಾವಾಗಲೂ ಸೂರ್ಯಾಸ್ತ ಮತ್ತು ಸೂರ್ಯೋದಯದ ಸಮಯದಲ್ಲಿ ನಿದ್ದೆ ಮಾಡುವವರು ಅನಾರೋಗ್ಯದಿಂದ ಬಳಲುತ್ತಾರೆ. ಅವರ ಜೀವನಕ್ಕೆ ದರಿದ್ರ ತಗಲುತ್ತದೆ. ಮತ್ತು ಅವರಿಗೆ ಬೇಗ ಸಾವು ಬರುತ್ತದೆ.

- Advertisement -

Latest Posts

Don't Miss