Spiritual: ನಾವು ಯಾವ ರೀತಿ ಬದುಕಿದರೆ, ನಮ್ಮ ಜೀವನ ಉತ್ತಮವಾಗಿರುತ್ತದೆ ಅನ್ನೋ ಬಗ್ಗೆ ಚಾಣಕ್ಯರು ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಜೀವನದಲ್ಲಿ ಎಂಥ ಕೆಲಸಗಳನ್ನು ಮಾಡಬಾರದು. ಮಾಡಿದರೆ ಎಂಥ ಕಷ್ಟ ಅನುಭವಿಸಬೇಕಾಗುತ್ತದೆ ಅನ್ನೋ ಬಗ್ಗೆಯೂ ಹೇಳಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ..
ಮೊದಲನೇಯ ಕೆಲಸ, ತಂದೆ ತಾಯಿಯನ್ನು ದ್ವೇಷಿಸಬೇಡಿ. ತಂದೆ ತಾಯಿ ಮಕ್ಕಳಿಗಿಂತಲೂ ಕಡಿಮೆ ಕಲಿತಿರಬಹುದು. ಅಥವಾ ಮಕ್ಕಳಿಗಿರುವಷ್ಟು ಬುದ್ಧಿವಂತಿಕೆ ಅವರಲ್ಲಿ ಇಲ್ಲದಿರಬಹುದು. ಅವರಿಗೆ ಚೆಂದವಾಗಿ ಡ್ರೆಸ್ ಮಾಡಿಕೊಳ್ಳಲು ಬಾರದಿರಬಹುದು. ಆದರೆ ನೀವು ಇಷ್ಟು ಬುದ್ಧಿವಂತರು, ಉತ್ತಮರಾಗಲು ಕಾರಣವೇ, ಅವರು. ಅವರಿಂದಲೇ ನೀವು ಈ ಭೂಮಿಗೆ ಬಂದಿದ್ದು ಅನ್ನೋದನ್ನ ಮಾತ್ರ ಮರಿಯಬೇಡಿ. ಹಾಗಾಗಿ ತಂದೆ ತಾಯಿಯನ್ನು ಎಂದಿಗೂ ದ್ವೇಷಿಸಬೇಡಿ. ಅವಮಾನಿಸಬೇಡಿ.
ಎರಡನೇಯದಾಗಿ ಕೋಪದಲ್ಲಿದ್ದಾಗ, ಮೌನವಹಿಸಿ. ಕೋಪ ಬಂದಾಗ, ನಾವು ಯಾವ ಕೆಲಸ ಮಾಡಿದರೂ, ಏನೇ ಹೇಳಿದರೂ, ಅದರ ಬಗ್ಗೆ ನಾವು ಪಶ್ಚಾತಾಪ ಪಡಬೇಕಾಗುತ್ತದೆ. ಏಕೆಂದರೆ, ಕೋಪ ಕುದಿಯುತ್ತಿರುವ ನೀರಿದ್ದಂತೆ, ಅಂಥ ನೀರಿನಲ್ಲಿ ನಮ್ಮ ಬಿಂಬ ಕಾಣುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಮೌನ ವಹಿಸುವುದು ಉತ್ತಮ. ಇಲ್ಲವಾದಲ್ಲಿ, ಕ್ಷಮೆ ಕೇಳಲಾಗದ ತಪ್ಪು ಕೂಡ ನಮ್ಮಿಂದ ನಡೆದು ಹೋಗಬಹುದು.
ಮೂರನೇಯದಾಗಿ ಮನೆಜನರನ್ನು ಬೇರೆಯವರ ಎದುರು ಬಿಟ್ಟುಕೊಡಬೇಡಿ. ಪತಿ-ಪತ್ನಿ, ಸಹೋದರ- ಸಹೋದರಿ, ತಂದೆ ಮಕ್ಕಳ ಮಧ್ಯೆ ಜಗಳವಾಗುವುದು ಸಹಜ. ಅಂಥ ಜಗಳಗಳ ಬಗ್ಗೆ ಹೊರಗಿನವರ ಬಳಿ ಎಂದಿಗೂ ಚರ್ಚಿಸಬಾರದು. ಹಾಗೆ ಹೇಳಿದಾಗ, ಅವರು ಇನ್ನೊಬ್ಬರ ಎದುರು ನಿಮ್ಮ ಮನೆಯ ಜಗಳದ ಬಗ್ಗೆ ತಮಾಷೆ ಮಾಡುತ್ತಾರೆ. ಕೆಲವೊಮ್ಮೆ ಅದನ್ನೇ ಹೇಳಿ, ಹಂಗಿಸಿ, ನಿಮ್ಮನ್ನು ಅವಮಾನಿಸಬಹುದು. ಆಗ ನಿಮಗೆ ನಮ್ಮ ಮನೆಯ ವಿಚಾರ ನಾನು ಇವರಲ್ಲಿ ಹೇಳಬಾರದಿತ್ತು ಎಂದೆನ್ನಿಸುತ್ತದೆ. ಹಾಗಾಗಿ ಅವಮಾನವಾಗುವ ಮುನ್ನ ಎಚ್ಚೆತ್ತುಕೊಂಡು ಮನೆಯ ಗುಟ್ಟನ್ನು ಎಲ್ಲಿಯೂ ರಟ್ಟು ಮಾಡಬೇಡಿ..
ಪತಿ ಆರೋಗ್ಯವಾಗಿ, ಆರ್ಥಿಕವಾಗಿ ಉತ್ತಮನಾಗಿರಬೇಕು ಅಂದ್ರೆ ಪತ್ನಿ ಈ ಕೆಲಸ ಮಾಡಬೇಕು..
ಈ ವಸ್ತುಗಳು ಬಿಟ್ಟಿಯಾಗಿ ಸಿಕ್ಕರೂ ತೆಗೆದುಕೊಳ್ಳಬೇಡಿ.. ಇಲ್ಲದಿದ್ದಲ್ಲಿ ಆರ್ಥಿಕ ಸಂಕಷ್ಟ ಬರುತ್ತದೆ..