Friday, July 11, 2025

Latest Posts

ಯಾರಿಗೆ ಇಂಥ ಯೋಗವಿರುತ್ತದೆಯೋ, ಅವರು ಅಸಮಾನ್ಯರು ಎನ್ನುತ್ತಾರೆ ಚಾಣಕ್ಯರು..

- Advertisement -

Spiritual: ಯೋಗ ಮತ್ತು ಯೋಗ್ಯತೆ ಜೀವನದಲ್ಲಿ ಅಪರೂಪಕ್ಕೆ ಬರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಯೋಗ್ಯತೆ ಇದ್ದಾಗ ಮಾತ್ರ, ಕೆಲವೊಂದು ಯೋಗಗಳು ಬರುತ್ತದೆ. ಅದೇ ರೀತಿ ಅಸಮಾನ್ಯರಾಗಿ ಬದುಕಲು ಕೂಡ ಕೆಲ ಯೋಗಗಳು ಕಾರಣವಾಗುತ್ತದೆ ಎನ್ನುತ್ತಾರೆ ಚಾಣಕ್ಯರು. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಯಾರಿಗೆ ಸಮೃದ್ಧವಾಗಿ ದಾನ ಮಾಡುವ ಗುಣ ಮತ್ತು ಯೋಗ್ಯತೆ ಇರುತ್ತದೆಯೋ ಅವರು ಅಸಮಾನ್ಯರು. ಕೆಲವೊಮ್ಮೆ ಯಾರ ಬಳಿ ಹೆಚ್ಚು ದುಡ್ಡಿರುವುದಿಲ್ಲವೋ, ಅಂಥವರಿಗೆ ದಾನ ಮಾಡುವ ಗುಣವಿರುತ್ತದೆ. ಮನಸ್ಸಿರುತ್ತದೆ. ಅಂಥವರು ತಮ್ಮಲ್ಲಿರುವ ದುಡ್ಡಲ್ಲಿ, ಕೊಂಚ ದುಡ್ಡನ್ನು ದಾನ ಮಾಡುತ್ತಾರೆ. ಇನ್ನು ಶ್ರೀಮಂತರಲ್ಲಿ ಕೆಲವರಿಗೆ ಒಂದು ರೂಪಾಯಿ ದಾನ ಮಾಡಲು ಕೂಡ ಮನಸ್ಸಾಗುವುದಿಲ್ಲ. ಅಷ್ಟು ಕಂಜೂಸುತನವಿರುತ್ತದೆ. ಅವರ ಬಳಿ ಸಾಕಷ್ಟು ಹಣವಿದ್ದರೂ, ನಾವ್ಯಾಕೆ ಬೇರೆಯವರಿದೆ ದಾನ ಮಾಡಬೇಕು ಎನ್ನುವ ಅಹಂ ಇರುತ್ತದೆ. ಆದರೆ ನಿಮಗೆ ಶ್ರೀಮಂತಿಕೆ ಮತ್ತು ದಾನ ಮಾಡುವ ಗುಣ ಎರಡೂ ಇದ್ದಲ್ಲಿ, ನೀವು ಅಸಮಾನ್ಯರು ಎಂದರ್ಥ ಎನ್ನುತ್ತಾರೆ ಚಾಣಕ್ಯರು.

ಸಿದ್ಧಪಡಿಸಿದ ಭಕ್ಷ್ಯ ಭೋಜನವನ್ನು ತಿನ್ನುವ ಸಾಮರ್ಥ್ಯ ಹೊಂದಿರುವವರು ಅಸಮಾನ್ಯರು. ಬಡವರ ಮನೆಯಲ್ಲಿ ಭಕ್ಷ್ಯ ಭೋಜನವನ್ನು ಸಿದ್ಧಪಡಿಸುವಷ್ಟು ಅನುಕೂಲವಿರುವುದಿಲ್ಲ. ಆದರೆ ಅವರಿಗೆ ರುಚಿ ರುಚಿಯಾದ ತಿನಿಸು ತಿನ್ನಬೇಕು ಎನ್ನಿಸುತ್ತದೆ. ಇನ್ನು ಶ್ರೀಮಂತರ ಮನೆಯಲ್ಲಿ ವಿವಿಧ ರೀತಿಯ ಪಕ್ವಾನ್ನವಿರುತ್ತದೆ. ಆದರೆ ಅದನ್ನು ತಿನ್ನುವ ಆಸಕ್ತಿಯಾಗಲಿ, ಆಸೆಯಾಗಲಿ ಆ ಶ್ರೀಮಂತರಿಗೆ ಇರುವುದಿಲ್ಲ. ಇನ್ನು ಕೆಲವರ ಮನೆಯಲ್ಲಿ ಭಕ್ಷ್ಯ ಭೋಜನ ಸಿದ್ಧವಾಗಿರುತ್ತದೆ. ತಿನ್ನಬೇಕು ಎನ್ನುವ ಆಸೆಯೂ ಇರುತ್ತದೆ. ಆದರೆ ಅನಾರೋಗ್ಯ ಅಡ್ಡಿಯಾಗುತ್ತದೆ. ವೈದ್ಯರು ಅಂಥ ಪಕ್ವಾನ್ನವನ್ನು ತಿನ್ನಬಾರದು ಎಂದಿರುತ್ತಾರೆ. ಹೀಗೆ ಮಾಡಿದ ಭಕ್ಷ್ಯ ಭೋಜನವನ್ನು ಯಾವುದೇ ಭೀತಿ ಇಲ್ಲದೇ, ತಿನ್ನುವುದಕ್ಕೂ ಯೋಗ ಬೇಕು. ಇಂಥ ಯೋಗ ಇದ್ದವರು ಅಸಮಾನ್ಯರು ಎನ್ನುತ್ತಾರೆ ಚಾಣಕ್ಯರು.

ಓರ್ವ ಸ್ತ್ರೀಯನ್ನು ಧಾರ್ಮಿಕವಾಗಿ ವಿವಾಹವಾಗಿ, ಆಕೆಯೊಂದಿಗೆ ಉತ್ತಮವಾಗಿ ಸಂಸಾರ ನಡೆಯುವರು ಅಸಮಾನ್ಯರು. ಯಾವ ವ್ಯಕ್ತಿ ಓರ್ವ ಉತ್ತಮ ಗುಣವಿರುವ ಹೆಣ್ಣನ್ನು, ಎಲ್ಲರ ಸಮಕ್ಷಮದಲ್ಲಿ, ಧಾರ್ಮಿಕ ರೀತಿ ರಿವಾಜುಗಳನ್ನು ಅನುಸರಿಸಿ, ವಿವಾಹವಾಗಿ, ಅವಳೊಂದಿಗೆ ಉತ್ತಮವಾಗಿ ಜೀವನ ನಡೆಸುತ್ತಾನೋ, ಅವಳಿಂದ ಉತ್ತಮ ಸಂತಾನವನ್ನು ಪಡೆಯುತ್ತಾನೋ, ಅಂಥ ಪುರುಷ ಅಸಮಾನ್ಯ ಎನ್ನುತ್ತಾರೆ ಚಾಣಕ್ಯರು.

ದಾನ ಮಾಡುವಾಗ ಇಂಥ ತಪ್ಪು ಮಾಡಬೇಡಿ, ಇಂಥ ವಸ್ತುಗಳನ್ನು ದಾನ ಮಾಡಬೇಡಿ..

ಮಂತ್ರಾಲಯದಲ್ಲಿ ರಾಯರ 352ನೇ ಆರಾಧನೆಗೆ ಶೇಷವಸ್ತ್ರ ಸಮರ್ಪಣೆ.. ಏನಿದರ ವಿಶೇಷ..?

ಈ ನಾಲ್ಕು ಸ್ಥಳಗಳು ನಿಮ್ಮ ಜೀವಕ್ಕೆ ಅಪಾಯ ತರಬಹುದು ಎನ್ನುತ್ತಾರೆ ಚಾಣಕ್ಯರು..

- Advertisement -

Latest Posts

Don't Miss