Health tips: ತರಕಾರಿ, ಹಣ್ಣು, ಡ್ರೈಫ್ರೂಟ್ಸ್ ಸೇವನೆ ಆರೋಗ್ಯಕ್ಕೆ ಎಷ್ಟು ಮುಖ್ಯವೋ, ಸೊಪ್ಪಿನ ಸೇವನೆಯೂ ಅಷ್ಟೇ ಮುಖ್ಯ. ನಮ್ಮಲ್ಲಿ ಹಲವಾರು ಆರೋಗ್ಯಕರ ಸೊಪ್ಪು ಸಿಗುತ್ತದೆ. ಇಂದು ನಾವು ಯಾವ ಸೊಪ್ಪು ಸೇವಿಸಿದರೆ, ಏನು ಲಾಭವೆಂದು ಹೇಳಲಿದ್ದೇವೆ.
ಸಬ್ಬಸಿಗೆ ಸೊಪ್ಪು. ನಿಮಗೆ ಸರಿಯಾಗಿ ನಿದ್ರೆ ಬರುತ್ತಿಲ್ಲವೆಂದಲ್ಲಿ, ಸಬ್ಬಸಿಗೆ ಸೊಪ್ಪಿನ ಸೇವನೆ ಮಾಡಿ. ಸಬ್ಬಸಿಗೆ ಸೊಪ್ಪು ನಿದ್ರಾಹೀನತೆಯನ್ನು ತಡೆಗಟ್ಟಿ, ಸರಿಯಾಗಿ ನಿದ್ರೆ ಬರುವಂತೆ ಮಾಡುತ್ತದೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗಬೇಕು ಎಂದಲ್ಲಿ, ಸಬ್ಬಸಿಗೆ ಸೊಪ್ಪಿನ ಉಪಯೋಗ ಮಾಡಬೇಕು. ಶುಗರ್ ನಿಯಂತ್ರಣದಲ್ಲಿರಬೇಕು ಅಂದ್ರೆ, ಸಬ್ಬಸಿಗೆ ಸೊಪ್ಪಿನ ಸೇವನೆ ಮಾಡಬೇಕು. ಬಾಣಂತಿಗೆ ಸಬ್ಬಸಿಗೆ ಸೊಪ್ಪಿನ ಪದಾರ್ಥ ಮಾಡಿಕೊಟ್ಟರೆ, ಹಾಲು ಹೆಚ್ಚಾಗುತ್ತದೆ. ಸ್ತನಪಾನಕ್ಕೆ ಸಹಕಾರಿಯಾಗುತ್ತದೆ.
ಮೆಂತ್ಯೆ ಸೊಪ್ಪು. ಇದೂ ಕೂಡ ಸಕ್ಕರೆ ಖಾಯಿಲೆ ಕಂಟ್ರೋಲ್ ಮಾಡಲು ಸಹಾಯಕವಾಗಿದೆ. ಅಲ್ಲದೇ, ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾಗಿದ್ದಲ್ಲಿ, ಮೆಂತ್ಯೆ ಸೊಪ್ಪಿನ ಸೇವನೆ ಮಾಡಬೇಕು. ಇದರಿಂದ ಮೂಳೆಗಳು ಕೂಡ ಗಟ್ಟಿಯಾಗುತ್ತದೆ. ಇನ್ನು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ತೆಗೆದು ಹಾಕಿ, ಉತ್ತಮ ಕೊಲೆಸ್ಟ್ರಾಲ್ ಇರಿಸುವುದರಲ್ಲಿ ಸಹಕಾರಿಯಾಗಿದೆ.
ಪಾಲಕ್ ಸೊಪ್ಪು. ಪಾಲಕ್ ಸೊಪ್ಪಿನ ಸೇವನೆ ಮಾಡುವುದರಿಂದ, ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಾಗುತ್ತದೆ. ಯಾರಿಗೆ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆ ಇದ್ದಲ್ಲಿ, ವಾರಕ್ಕೆ ಎರಡು ಬಾರಿ ಪಾಲಕ್ ಸೊಪ್ಪಿನ ಪದಾರ್ಥ ಸೇವಿಸಿ. ಇದರಲ್ಲಿ ಕ್ಯಾಲ್ಶಿಯಂ ಅಂಶವಿದ್ದು, ಮೂಳೆ ಗಟ್ಟಿಗೊಳಿಸಲು ಇದು ಸಹಕಾರಿಯಾಗಿದೆ.
ನುಗ್ಗೆ ಸೊಪ್ಪು. ವಾರಕ್ಕೊಮ್ಮೆಯಾದರೂ ನುಗ್ಗೆಸೊಪ್ಪಿನ ಪಲ್ಯ, ಸಾರು, ತಂಬುಳಿ ಮಾಡಿ ಸೇವಿಸಿದರೆ, ಹಲವು ರೋಗಗಳಿಂದ ಮುಕ್ತಿ ಸಿಗುತ್ತದೆ. ಕ್ಯಾನ್ಸರ್ ಬರದಂತೆ ತಡೆಯಲು ನುಗ್ಗೆ ಸೊಪ್ಪು ಸಹಕಾರಿಯಾಗಿದೆ. ಲಿವರ್ ಆರೋಗ್ಯವನ್ನು ಸರಿಯಾಗಿ ಇರಿಸುವಲ್ಲಿ ನುಗ್ಗೆಸೊಪ್ಪು ಸಹಕಾರಿಯಾಗಿದೆ.
ವಿಶೇಷ ಸೂಚನೆ ಅಂದ್ರೆ ವಾರದಲ್ಲಿ ಎರಡೇ ಎರಡು ಬಾರಿ ಮೂರು ದಿನಕ್ಕೊಮ್ಮೆ ಸೊಪ್ಪಿನ ಸೇವನೆ ಮಾಡಿ. ಪ್ರತಿದಿನ ಅಥವಾ ವಾರಕ್ಕೆ ನಾಲ್ಕು ಬಾರಿ ಸೊಪ್ಪಿನ ಸೇವನೆ ಮಾಡಿದರೆ, ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇರುತ್ತದೆ. ಕೆಲವರಿಗೆ ಹೆಚ್ಚು ಸೊಪ್ಪಿನ ಸೇವನೆ ಮಾಡಿದರೆ, ಉಷ್ಣ ಹೆಚ್ಚಾಗಿ, ಮಲವಿಸರ್ಜನೆಗೆ ತೊಂದರೆಯಾಗುತ್ತದೆ. ಅಥವಾ ಬೇಧಿಯೂ ಆಗಬಹುದು. ಇನ್ನು ನಿಮಗೆ ಈ ಸೊಪ್ಪಿನಲ್ಲಿ ಯಾವುದಾದರೂ ಸೊಪ್ಪನ್ನು ಸೇವಿಸಿದರೆ, ಅಲರ್ಜಿ ಎಂದಾದಲ್ಲಿ ವೈದ್ಯರ ಬಳಿ ವಿಚಾರಿಸಿ, ಬಳಿಕ ಸೇವಿಸುವುದು ಉತ್ತಮ.
ಹಲವು ದೇಶಗಳ ಡ್ರೈ ಫ್ರೂಟ್ಸ್ ಮತ್ತು ಖರ್ಜೂರಗಳು ಬೇಕೆಂದಲ್ಲಿ ಇಲ್ಲಿಗೆ ಬನ್ನಿ..