ಸ್ನಾನ ಮಾಡುವಾಗ ನಾವು ಮಾಡುವ ತಪ್ಪುಗಳು ಎಂಥದ್ದು..? ಸ್ನಾನವನ್ನು ಯಾವುದರಿಂದ ಮಾಡಬೇಕು ಅಂತಾ ನಾವು ಈಗಾಗಲೇ ನಿಮಗೆ ಹೇಳಿದ್ದೇವೆ. ಅದೇ ರೀತಿ ಸೋಪ್ ಬಳಸುವಾಗಲೂ, ನಾವು ಕೆಲ ತಪ್ಪುಗಳನ್ನು ಮಾಡುತ್ತೇವೆ. ಹಾಗಾದ್ರೆ ಸೋಪ್ ವಿಷಯದಲ್ಲಿ ನಾವು ಮಾಡುವ ತಪ್ಪುಗಳು ಯಾವುದು..? ಅದೇ ರೀತಿ ಸ್ನಾನ ಮಾಡುವಾಗಲೂ ಕೆಲ ತಪ್ಪುಗಳನ್ನ ಮಾಡುತ್ತೇವೆ. ಅದರ ಬಗ್ಗೆ ಇನ್ನಷ್ಟು ಹೇಳಲಿದ್ದೇವೆ..
ಮೊದಲನೇಯದಾಗಿ ಸೋಪ್ ಬಳಸುವಾಗ, ನಾವು ಮಾಡುವ ತಪ್ಪೆಂದರೆ, ಸೋಪನ್ನು ಡೈರೆಕ್ಟ್ ಆಗಿ ನಾವು ನಮ್ಮ ದೇಹಕ್ಕೆ ಅಪ್ಲೈ ಮಾಡುತ್ತೇವೆ. ಇದರಿಂದ ನಮ್ಮ ತ್ವಚೆ ರಫ್ ಆಗುತ್ತದೆ. ಹಾಗಾಗಿ ಟವೆಲನ್ನು ನೀರಿನಲ್ಲಿ ಅದ್ದಿ, ಅದಕ್ಕೆ ಕೊಂಚ ಸೋಪ್ ಹಚ್ಚಿ, ಆ ಟವೆಲ್‌ನಿಂದ ನಮ್ಮ ದೇಹವನ್ನು ವರೆಸಿಕೊಳ್ಳಬೇಕು. ಇದರಿಂದ ನಮ್ಮ ದೇಹಕ್ಕೆ ಸೋಪ್ ಇಂಡೈರೆಕ್ಟ್ ಆಗಿ ತಾಕುತ್ತದೆ. ಮತ್ತು ನಮ್ಮ ಸ್ಕಿನ್‌ಗೆ ಯಾವುದೇ ಹಾನಿಯಾಗುವುದಿಲ್ಲ.
ಎರಡನೇಯದಾಗಿ ಹೇರ್ ವಾಶ್ ಮಾಡುವಾಗ ತಪ್ಪು ಮಾಡೋದು. ನಾವು ಪ್ರತಿದಿನ ಹೇರ್ ವಾಶ್ ಮಾಡುವ ಹಾಗಿಲ್ಲ. ಹಾಗೇನಾದ್ರೂ ಪ್ರತಿದಿನ ತಲೆಸ್ನಾನ ಮಾಡಿದ್ರೆ, ತಲೆಕೂದಲು ಉದುರತ್ತೆ. ಕೂದಲು ರಫ್ ಆಗತ್ತೆ. ಹಾಗಾಗಿ ವಾರಕ್ಕೆ ಎರಡು ಬಾರಿ ತಲೆಗೆ ಎಣ್ಣೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ, ತಲೆಸ್ನಾನ ಮಾಡಿದ್ರೆ ಸಾಕು.
ಮೂರನೇಯ ತಪ್ಪು, ತಲೆಗೆ ಶ್ಯಾಂಪೂ ಅಪ್ಲೈ ಮಾಡುವಾಗ ತಪ್ಪು ಮಾಡೋದು. ಡೈರೆಕ್ಟ್ ಆಗಿ ಶ್ಯಾಂಪೂ ಹಾಕಿದ್ರೆ, ತಲೆ ಕೂದಲಿಗೆ ಕೆಮಿಕಲ್ ಎಫೆಕ್ಟ್ ಹೆಚ್ಚಾಗತ್ತೆ. ಹಾಗಾಗಿ ನೀರಿನಲ್ಲಿ ಅವಶ್ಯಕತೆ ಇದ್ದಷ್ಟು ಶ್ಯಾಂಪೂ ಹಾಕಿ ಮಿಕ್ಸ್ ಮಾಡಿ, ಅದರಿಂದ ಹೇರ್ ವಾಶ್ ಮಾಡಿ. ನೀವು ಬಳಸುವ ಶ್ಯಾಂಪೂವಿನಲ್ಲಿ ಕೆಮಿಕಲ್ ಇಲ್ಲದಿದ್ದಲ್ಲಿ ಇನ್ನೂ ಒಳ್ಳೆಯದು.
ನಾಲ್ಕನೇಯ ತಪ್ಪು ಕಾಲಿನ ಪಾದವನ್ನು ತೊಳೆಯುವುದನ್ನ ಹಲವರು ಮರೆತು ಬಿಡುತ್ತಾರೆ. ಆದ್ರೆ ಕಾಲಿನ ಪಾದವನ್ನು ಕ್ಲೀನ್ ಮಾಡೋದು ಎಷ್ಟು ಇಂಪಾರ್ಟೆಂಟ್ ಅಂದ್ರೆ, ಅದರಿಂದಲೇ ನಮಗೆ ಹಲವು ರೋಗಗಳು ಬರತ್ತೆ. ಹಾಗಾಗಿ ಕಾಲಿನ ಪಾದವನ್ನು ಸರಿಯಾಗಿ ಕ್ಲೀನ್ ಮಾಡಬೇಕು. ಇದರಿಂದ ಹಿಮ್ಮಡಿ ಒಡೆಯುವುದನ್ನ ಕೂಡ ತಪ್ಪಿಸಬಹುದು.