Health Tips: ಮಾನಸಿಕ ನೆಮ್ಮದಿ ಬಗ್ಗೆ, ಮನಸ್ಸಿನ ರೋಗಗಳ ಬಗ್ಗೆ ಮನೋವೈದ್ಯರಾದ ಡಾ. ಶ್ರೀಧರ್ ಮಾತನಾಡಿದ್ದು, ಮಕ್ಕಳು ಏಕೆ ಅಶ್ಲೀಲ ವೀಡಿಯೋವನ್ನು ನೋಡುತ್ತಾರೆ ಅನ್ನೋ ಬಗ್ಗೆ ವಿವರಿಸಿದ್ದಾರೆ.
ವೈದ್ಯರು ಹೇಳುವುದೇನೆಂದರೆ, ಪೋರ್ನ್ ಎಂದರೆ, ಉದ್ದಿಮೆಯ ಉದ್ದೇಶದಿಂದ ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡುವಂಥ ಚಟುವಟಿಕೆ. ಅದನ್ನು ಬಿತ್ತರಿಸಲು ಸಾಮಾಜಿಕ ಜಾಲತಾಣಗಳಿದೆ. ಮತ್ತು ಅದನ್ನು ನೋಡುವವರ ಸಂಖ್ಯೆಯೂ ಹೆಚ್ಚಾಗಿದೆ. ಇಂದಿನ ಕಾಲದಲ್ಲಿ ಟೀನ್ ಏಜ್ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಒಮ್ಮೆ ಇಂಥ ವೀಡಿಯೋ ನೋಡಿದ ಬಳಿಕ, ಅವರ ಗಮನವೆಲ್ಲ ಅದರ ಮೇಲೆಯೇ ಇರುತ್ತದೆ. ಹಾಗಾಗಿ ಪದೇ ಪದೇ ಅಂಥ ವೀಡಿಯೋಗಳನ್ನೇ ನೋಡುತ್ತಿರುತ್ತಾರೆ.
ಈ ಕುತೂಹಲ ಮುಂದೆ ಕೆಟ್ಟ ಚಟವಾಗಿ ಮಾರ್ಪಾಡಾಗುತ್ತದೆ. ಯಾಕಂದ್ರೆ ಈ ವಯಸ್ಸಿನಲ್ಲಿ ಮನಸ್ಸು ಸೂಕ್ಷ್ಮವಾಗಿರುತ್ತದೆ. ನಮ್ಮತನ ಎಂಬುದು ಬಂದಿರುತ್ತದೆ. ಆಗ ಮನೆಯಲ್ಲಿ ಪೋಷಕರು ಬೈಯ್ದಾಗ, ಸ್ನೇಹಿತರು ನಿಂದಿಸಿದಾಗ, ಇಂಥ ಚಟಗಳು ಮೈಗಂಟುತ್ತದೆ. ಯಾರಾದ್ರೂ ಅವಮಾನಿಸಿದಾಗ. ಪದೇ ಪದೇ ಅದೇ ನೆನಪಿಗೆ ಬಂದು ಹಿಂಸೆಯಾಗುತ್ತದೆ. ಅದನ್ನು ಮರೆಯಲು ಯಾವುದಾದರೂ ಹವ್ಯಾಸದಲ್ಲಿ ತೊಡಗಬೇಕು. ಆದರೆ ಕೆಲವು ವಯಸ್ಸಿಗೆ ಬಂದ ಮಕ್ಕಳು, ಇಂಥ ಚಟಗಳಲ್ಲಿ ತೊಡಗುತ್ತಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..
ಮದುವೆಗೆ ರೆಡಿ ಆಗ್ತಾ ಇದ್ದೀರಾ..? ನಿಮಗೆ ಬೇಕಾದ ಡ್ರೆಸ್ ಇಲ್ಲಿ ಸಿಗತ್ತೆ ನೋಡಿ..
10 ನಿಮಿಷ ನೀವು ಈ ಫೇಸ್ಪ್ಯಾಕ್ ಹಾಕಿದ್ರೆ ಸಾಕು, ನಿಮ್ಮ ತ್ವಚೆ ಸುಂದರವಾಗುತ್ತದೆ..




