Spiritual Story: ನಾವು ಶ್ರೀಮಂತರಾಗಬೇಕು, ಲಕ್ಷ್ಮೀ ನಮಗೆ ಒಲಿಯಬೇಕು ಅಂದರೆ, ನಾವು ಕೆಲವೊಂದು ಕೆಲಸಗಳನ್ನು ಮಾಡಬೇಕಾಗುತ್ತದೆ. ಅದರಲ್ಲಿ ಮನೆ ಸ್ವಚ್ಛವಾಗಿರಿಸಿಕೊಳ್ಳುವುದು, ನಾವು ಸ್ವಚ್ಛವಾಗಿರುವುದು ಕೂಡ ಮುಖ್ಯವಾಗಿರುತ್ತದೆ. ಹಾಗಾಗಿ ನಾವಿಂದು ಮಲಗುವ ಮುನ್ನ ಯಾವ ಕೆಲಸಗಳನ್ನು ಮಾಡಿದರೆ, ಉದ್ಧಾರವಾಗುತ್ತೇವೆ ಅನ್ನೋ ಬಗ್ಗೆ ಹೇಳಲಿದ್ದೇವೆ.
ಮೊದಲನೇಯ ಕೆಲಸ ಉಂಡ ತಟ್ಟೆ, ಪಾತ್ರೆಯನ್ನು ತೊಳೆದಿಡುವುದು. ಊಟ ಮಾಡಿದ ತಟ್ಟೆ, ಬಳಸಿದ ಪಾತ್ರೆಯನ್ನು ರಾತ್ರಿಯೇ ತೊಳೆದಿಡಬೇಕು. ಇಲ್ಲವಾದಲ್ಲಿ ಮನೆಯಲ್ಲಿ ನಕಾರಾತ್ಮಕ ಶಕ್ತಿ ತಾಂಡವವಾಡುತ್ತದೆ. ಖಾಲಿ ಪಾತ್ರೆಗಳನ್ನು ತೊಳೆಯದೇ ಹಾಗೆ ಇರಿಸಿದರೆ, ಲಕ್ಷ್ಮೀ ದೇವಿಯ ಕೃಪೆ ನಮ್ಮ ಮೇಲಿರುವುದಿಲ್ಲ ಅಂತಾ ಹೇಳಲಾಗುತ್ತದೆ. ಆರ್ಥಿಕ ಪರಿಸ್ಥಿತಿ ಚೆನ್ನಾಗಿರಬೇಕು ಅಂದ್ರೆ, ರಾತ್ರಿ ಮಲಗುವಾಗ ಊಟ ಮಾಡಿದ ತಟ್ಟೆ ಮತ್ತು ಪಾತ್ರೆ ತೊಳೆದಿಡಿ.
ಎರಡನೇಯ ಕೆಲಸ ಅನ್ನದ ಪಾತ್ರೆ ಮಾತ್ರ ಖಾಲಿ ಮಾಡಿ, ಮಲಗಬಾರದು. ರಾತ್ರಿ ಊಟ ಮುಗಿಸುವಾಗ, ಪಾತ್ರೆಯಲ್ಲಿ ಸ್ವಲ್ಪ ಅನ್ನವಿರಬೇಕು ಅಂತಾ ಹಿರಿಯರು ಹೇಳುತ್ತಾರೆ. ಯಾಕಂದ್ರೆ ಅನ್ನದ ಪಾತ್ರೆ ಸದಾ ತುಂಬಿರಬೇಕು. ಹೀಗಿದ್ದರೆ, ಲಕ್ಷ್ಮೀ ದೇವಿ ಮನೆಯಲ್ಲಿ ಸದಾ ವಾಸವಿರುತ್ತಾಳೆ ಅಂತಾ ಹೇಳಲಾಗುತ್ತದೆ. ಮರುದಿನ ಆ ಅನ್ನವನ್ನು ಪ್ರಾಣಿಗಳಿಗೆ ಹಾಕಿ, ಪಾತ್ರೆ ತೊಳೆದು ಮತ್ತೆ ಅದರಲ್ಲಿ ಅನ್ನ ಮಾಡಿಡಬೇಕು ಅಂತಾ ಹೇಳಲಾಗುತ್ತದೆ.
ಮೂರನೇಯ ಕೆಲಸ ಕೈ ಕಾಲು ಸ್ವಚ್ಛವಾಗಿ ತೊಳೆದು ಮಲಗಬೇಕು. ಕೈ ಕಾಲು ಸ್ವಚ್ಛವಾಗಿ ತೊಳೆದು ಮಲಗುವುದು ಬರೀ, ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಲಷ್ಟೇ ಅಲ್ಲ, ನಮ್ಮ ಆರೋಗ್ಯವೂ ಅದರಿಂದ ಸುಧಾರಿಸುತ್ತದೆ. ಮತ್ತು ನಾವು ಎಷ್ಟು ಸ್ವಚ್ಛವಾಗಿರುತ್ತೆವೋ, ಅಷ್ಟು ನಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆ.
ನಾಲ್ಕನೇಯ ಕೆಲಸ ಮಲಗುವಾಗ ಸರಿಯಾದ ದಿಕ್ಕಿಗೆ ತಲೆ ಇರಿಸಿ ಮಲಗಿ. ಉತ್ತರ ದಿಕ್ಕಿಗೆ ತಲೆ ಹಾಕಿ ಎಂದಿಗೂ ಮಲಗಬಾರದು. ದಕ್ಷಿಣ, ಪೂರ್ವ, ಪಶ್ಚಿಮ.. ಯಾವ ದಿಕ್ಕಿಗೆ ತಲೆ ಹಾಕಿ ಮಲಗಿದರೂ, ಉತ್ತರ ದಿಕ್ಕಿಗೆ ಮಾತ್ರ ತಲೆ ಹಾಕಿ ಮಲಗಬಾರದು. ಏಕೆಂದರೆ, ಇದರಿಂದ ಬೇಗ ಸಾವು ಸಂಭವಿಸುತ್ತದೆ ಅಂತಾ ಹೇಳಲಾಗುತ್ತದೆ. ಏಕೆಂದರೆ ಈ ದಿಕ್ಕಿನಲ್ಲಿ ಮಲಗಿದರೆ, ನಮ್ಮ ದೇಹದ ಅಂಗಾಂಗಗಳು ಸರಿಯಾಗಿ ಕಾರ್ಯ ನಿರ್ವಹಿಸದೇ, ರೋಗ ಬರುತ್ತದೆ. ಮತ್ತು ಸಾವು ಸಂಭವಿಸುತ್ತದೆ.