Health Tips: ಮೊದಲೆಲ್ಲ ಮನೆಗೆ ಸೂಲಗಿತ್ತಿ ಬಂದು ಗರ್ಭಿಣಿಯ ಹೆರಿಗೆ ಮಾಡಿಸಿ ಹೋಗುತ್ತಿದ್ದಳು. ಆಗ ತಾಯಿ ಮಗು ಇಬ್ಬರೂ ಆರೋಗ್ಯವಾಗಿ ಇರುತ್ತಿದ್ದರು. ಅಂದಿನ ಕಾಲದಲ್ಲಿ ಸಿ ಸೆಕ್ಷನ್ ಹೆರಿಗೆ ಅನ್ನುವ ಪದವೇ ಗೊತ್ತಿರಲಿಲ್ಲ. ಆದರೆ ಇಂದಿನ ಕಾಲದಲ್ಲಿ ಹಲವರಿಗೆ ಸಿ ಸೆಕ್ಷನ್ ಹೆರಿಗೆಯಾಗುತ್ತದೆ. ಇದಕ್ಕೆ ಕಾರಣವೇನು ಅಂತಾ ವೈದ್ಯರು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಸಿಸರಿನ್ ಮಾಡುವುದಕ್ಕೆ ಎರಡು ಕಾರಣಗಳಿರುತ್ತೆ ಅಂತಾರೆ ವೈದ್ಯರು. ಒಂದು ತಾಯಿಯ ಪ್ರಾಣ ಕಾಪಾಡಲು ಮತ್ತೊಂದು ಮಗುವಿನ ಪ್ರಾಣ ಕಾಪಾಡಲು ಸಿಸರಿನ್ ಮಾಡಲಾಗುತ್ತದೆ. ತಾಯಿಗೆ ಪಿಡ್ಸ್ ಬಂದ್ರೆ, ಅಥವಾ ಹೊಟ್ಟೆಯಲ್ಲಿದ್ದ ನೀರಿನ ಚೀಲ ಒಡೆದುಹೋದ್ರೆ, ಸಿಸರಿನ್ ಮಾಡಲಾಗುತ್ತದೆ.
ಇನ್ನು ಮಗು ಹೊಟ್ಟೆಯಲ್ಲೇ ಮಲ ವಿಸರ್ಜನೆ ಮಾಡಿದರೆ, ಮಗು ಕಡಿಮೆ ಅಥವಾ ಅತೀ ಹೆಚ್ಚು ತೂಕ ಹೊಂದಿದ್ದರೆ, ಹೊಟ್ಟೆಯಲ್ಲಿ ಮಗುವಿಗೆ ಉಸಿರಾಡಲು ಕಷ್ಟವಾದರೆ, ಅಥವಾ ಮಗು ಕರುಳ ಬಳ್ಳಿಯನ್ನು ಸುತ್ತಿಕೊಂಡಿದ್ದರೆ, ಸಿಸರಿನ್ ಮಾಡಲಾಗುತ್ತದೆ. ಈ ರೀತಿ ಕಾರಣಗಳಿದ್ದಾಗ ಮಾತ್ರ ವೈದ್ಯರು ಸಿ ಸೆಕ್ಷನ್ ಡಿಲೆವರಿ ಮಾಡುತ್ತಾರೆ. ಇಲ್ಲವಾದಲ್ಲಿ, ಪೂರ್ತಿ ತಿಂಗಳು ತುಂಬುವವರೆಗೂ ಕಾದು ಅಥವಾ ಡಿಲೆವರಿ ನೋವು ಬಂದಾಗ ಮಾತ್ರ ಹೆರಿಗೆ ಮಾಡಿಸಲಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..