Thursday, November 21, 2024

Latest Posts

ಮಕ್ಕಳೆದುರು ತಂದೆ- ತಾಯಿ ಜಗಳವಾಡಬಾರದು ಅಂತಾ ಹೇಳೋದ್ಯಾಕೆ ಗೊತ್ತಾ..?

- Advertisement -

Health Tips: ಪತಿ- ಪತ್ನಿ ಅಂದ ಮೇಲೆ ಜಗಳ ಕಾಮನ್. ಅಲ್ಲದೇ, ಪ್ರೀತಿ ಜೊತೆ, ಮುನಿಸು, ಜಗಳ ಇದ್ದಾಗಲೇ, ಜೀವನ ಸರಿಯಾಗಿ ಇರೋದು. ಆದರೆ ಜಗಳ ಮಿತಿ ಮೀರಿದರೆ ಸಂಬಂಧವೇ ಮುರಿದು ಹೋಗಬಹುದು. ಅದರಲ್ಲೂ ನಿಮ್ಮ ಮನೆಯಲ್ಲಿ 1 ವರ್ಷ ದಾಟಿರುವ ಮಗುವಿದ್ದರೆ, ಅದರ ಮೇಲೆ ನಿಮ್ಮ ಜಗಳ ಕೆಟ್ಟ ಪರಿಣಾಮ ಬೀಳೋದು ಗ್ಯಾರಂಟಿ. ಹಾಗಾದ್ರೆ ಯಾಕೆ ಮಕ್ಕಳ ಎದುರು ಅಪ್ಪ ಅಮ್ಮ ಜಗಳವಾಡಬಾರದು ಅಂತಾ ತಿಳಿಯೋಣ ಬನ್ನಿ..

ಜಗಳ ಆಡುವಾಗ, ಬಾಯಿಗೆ ಬೇಡದ ಮಾತುಗಳು ಬರುತ್ತದೆ. ಹೆಚ್ಚು ಸಿಟ್ಟು ಬಂದರೆ, ಕೈ ಸಿಕ್ಕಿದ್ದನ್ನು ಬಿಸಾಡುತ್ತಾರೆ. ಅಥವಾ ಬಾಗಿಲು ಬಡಿದುಕೊಳ್ಳುತ್ತಾರೆ. ಜಗಳ ಮಿತಿಮೀರಿದರೆ, ಹೊಡೆದಾಟವೂ ಆಗುತ್ತದೆ. ಇದೆಲ್ಲವೂ ದೊಡ್ಡವರಿಗೆ ಕಾಮನ್ ಎನ್ನಿಸಬಹುದು. ಆದರೆ ಮಕ್ಕಳಿಗೆ ಇದೇ ದೊಡ್ಡದು. ಅವರು ಇದರಿಂದ ಪ್ರೇರಿತರಾಗುತ್ತಾರೆ.

ಕೆಲವು ಮಕ್ಕಳು ಅದೇ ರೀತಿ ಜಗಳವಾದಾಗ, ಕೈಗೆ ಸಿಕ್ಕಿದ್ದನ್ನು ತೆಗೆದು ಬಿಸಾಕುವುದು. ಜೋರು ಜೋರಾಗಿ ಬೈಯ್ಯುವುದು, ಹೊಡೆಯುವುದು, ಬಾಗಿಲು ಬಡಿಯುವುದನ್ನು ಕಲಿಯುತ್ತಾರೆ. ಜೊತೆಗೆ ಕೆಲವು ಮಕ್ಕಳು ಮನಸ್ಸಿನಲ್ಲೇ ಕುಗ್ಗಿಹೋಗುತ್ತಾರೆ. ಅವರಿಗೆ ಅಪ್ಪ ಅಮ್ಮನ ಮೇಲಿನ ಗೌರವ ಕಡಿಮೆಯಾಗುತ್ತದೆ. ಅವರು ಚಿಕ್ಕಂದಿನಿಂದಲೇ, ನಿಮ್ಮಿಂದ ದೂರವಿರಲು ಬಯಸುತ್ತಾರೆ. ಹಾಗಾಗಿ ಅಪ್ಪ ಅಮ್ಮ ಮಕ್ಕಳ ಎದುರು ಜಗಳವಾಡಬಾರದು ಅಂತಾ ಹೇಳುವುದು.

- Advertisement -

Latest Posts

Don't Miss