Spiritual Story: ಯಾರಿಗಾದರೂ ಶನಿದೆಸೆ ಇದ್ದರೆ, ಅಂಥವರು ಶನಿದೇವನ ದೇವಸ್ಥಾನಕ್ಕೆ ಕಪ್ಪು ಎಳ್ಳು, ಕಪ್ಪು ಬಟ್ಟೆ, ಎಳ್ಳೆಣ್ಣೆ ನೀಡಬೇಕು ಎನ್ನುತ್ತಾರೆ. ಅಲ್ಲದೇ, ಶನಿದೇವರ ದೇವಸ್ಥಾನದಲ್ಲಿ ಕಪ್ಪು ಕಲ್ಲಿಗೆ ಪೂಜೆ ಸಲ್ಲಿಸಲಾಗುತ್ತದೆ. ಶನಿದೇವರ ಫೋಟೋ ನೋಡಿದರೆ, ಅದು ಕೂಡ ಕಪ್ಪು ಬಣ್ಣದ್ದಾಗಿರುತ್ತದೆ. ಹಾಗಾಗಿ ಶನಿದೇವನಿಗೆ ಕಪ್ಪು ಬಣ್ಣವೆಂದರೆ ಏಕೆ ಇಷ್ಟ ಅಂತ ತಿಳಿಯೋಣ ಬನ್ನಿ..
ಶನಿ ದೇವರು ಸೂರ್ಯ ದೇವನ ಪುತ್ರ. ಸೂರ್ಯನ ಪತ್ನಿ ಸೂರ್ಯನ ಮೇಲೆ ಕುಪಿತಳಾಗಿರುತ್ತಾಳೆ. ಹಾಗಾಗಿ ಸೂರ್ಯದೇವನಿಂದ ದೂರವಾಗಿ, ತನ್ನ ತಂದೆ ತಾಯಿಯ ಬಳಿ ಹೋಗುತ್ತಾಳೆ. ಅಲ್ಲಿ ತನ್ನ ನೆರಳನ್ನು ಸೃಷ್ಟಿಸಿ, ಆ ನೆರಳನ್ನು ಸೂರ್ಯದೇವನ ಬಳಿ ಕಳಿಸುತ್ತಾಳೆ. ಆ ನೆರಳಿನ ಹೆಸರು ಛಾಯಾ. ಸಂಸ್ಕೃತದಲ್ಲಿ ನೆರಳನ್ನೇ ಛಾಯಾ ಎನ್ನಲಾಗುತ್ತದೆ.
ಈ ಛಾಯಾಳೊಂದಿಗೆ ಸೇರಿದಾಗ, ಜನಿಸಿದ ಪುತ್ರನೇ ಶನಿದೇವ. ನೆರಳು ಕಪ್ಪಾಗಿದ್ದು, ಶನಿ ಛಾಯಾ ಪುತ್ರನಾಗಿದ್ದ ಕಾರಣ, ಆತನಿಗೆ ಕಪ್ಪು ಬಣ್ಣವೆಂದರೆ ಬಲು ಪ್ರೀತಿಯಾಗಿರುತ್ತದೆ. ಅಲ್ಲದೇ, ಛಾಯಾ ಪುತ್ರನಾಗಿದ್ದ ಶನಿದೇವ ಕೂಡ ಕಪ್ಪು ಬಣ್ಣದವರಾಗಿದ್ದಾರೆ. ಹಾಗಾಗಿ ಶನಿದೆಸೆ ಶುರುವಾದವರಿಗೆ, ನಿನ್ನ ಮೇಲೆ ಶನಿಯ ಛಾಯೆ ಇದೆ ಎನ್ನುತ್ತಾರೆ. ಹೀಗಾಗಿ ಶನಿದೆಸೆ ಇದ್ದವರು ಶನಿಗೆ ಪ್ರಿಯವಾದ ಕಪ್ಪು ಎಳ್ಳು, ಕಪ್ಪು ಬಟ್ಟೆಯನ್ನು ದಾನ ಮಾಡಬೇಕು ಎನ್ನಲಾಗುತ್ತದೆ.
ದೇವರ ಚಿತ್ರವಿರುವ ಪೆಂಡೆಂಟ್ ಧರಿಸಬಾರದು ಅಂತಾ ಹೇಳುವುದೇಕೆ ಗೊತ್ತಾ..?