ರಾಮಾಯಣ ಎಂದ ಕೂಡಲೇ ನಮಗೆ ನೆನಪಿಗೆ ಬರುವುದು, ರಾಮ- ಸೀತೆ, ಲಕ್ಷ್ಮಣ, ಹನುಮ, ರಾವಣ. ಇನ್ನೂ ಹಲವು ಪಾತ್ರಗಳು ರಾಮಾಯಣದಲ್ಲಿದ್ದರೂ ಕೂಡ, ಈ 5 ಪಾತ್ರಗಳು ನಮ್ಮ ಮನದಲ್ಲಿ ಅಚ್ಚುಳಿದಿದೆ. ಇಂಥ ಪಾತ್ರದಲ್ಲಿ ರಾಮನ ಬಂಟನಾದ ಹನುಮ ಹಲವರಿಗೆ ಪ್ರಿಯ ದೇವರು. ಯಾಕಂದ್ರೆ ರಾಮಾಯಣದಲ್ಲಿ ಹನುಮನ ಪಾತ್ರ ಪ್ರಮುಖವಾಗಿದೆ. ರಾಮನ ಕಷ್ಟ ಸುಖದಲ್ಲಿ ಭಾಗಿಯಾದ ಹನುಮ, ಸೀತೆಯನ್ನ ರಾವಣನ ಮುಷ್ಠಿಯಿಂದ ಬಿಡಿಸಿಕೊಂಡು ಬರಲು ಸಹಾಯ ಮಾಡಿದ್ದ. ಬರೀ ಸೀತೆಯನ್ನ ಬಿಡಿಸಿಕೊಂಡು ಬರುವುದಷ್ಟೇ ಅಲ್ಲ, ಇನ್ನೂ ಹಲವಾರು ಕೆಲಸವನ್ನು ಹನುಮನೇ ಮಾಡಿದ್ದಾನೆ. ಹಾಗಾದ್ರೆ ಹನುಮನಷ್ಟೇ ಮಾಡಬಹುದಾಗಿದ್ದ ಕೆಲಸಗಳು ಯಾವುದು..? ಅದನ್ನ ಹನುಮ ಹೇಗೆ ನಿರ್ವಹಿಸಿದ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ..
ಒಮ್ಮೆ ಹನುಮಂತ, ಅಂಗದ ಮತ್ತು ಜಾಂಬವಂತರೊಂದಿಗೆ ಸೇರಿ, ಸೀತಾಮಾತೆಯನ್ನು ಹುಡುಕಲು ಹೊರಟ. ಆಗ ಸಮುದ್ರವನ್ನು ಯಾರು ದಾಟುತ್ತಾರೆ ಮತ್ತು ಹೇಗೆ ದಾಟುವುದು ಅನ್ನೋ ಚಿಂತೆ ಶುರುವಾಯಿತು. ಆಗ ಅಂಗದ ಹನುಮಂತನ ಶಕ್ತಿಯನ್ನು ನೆನಪಿಸಿದ. ಅದನ್ನು ನೆನೆದ ಹನುಮ ಜೈ ಶ್ರೀ ರಾಮ್ ಎಂಬ ಉದ್ಗಾರದೊಂದಿಗೆ ಒಮ್ಮೆಲೆ ಸಮುದ್ರವನ್ನು ದಾಟಿದ.
ಎರಡನೇಯದಾಗಿ ಹನುಮಂತ ಶಕ್ತಿಶಾಲಿ ರಾಕ್ಷಸಿಯರನ್ನು ಎದುರಿಸಿದ್ದು. ಹನುಮಂತ ಬರೀ ಬಲಶಾಲಿಯಲ್ಲ, ಬದಲಾಗಿ ಬುದ್ಧಿವಂತನೂ ಹೌದು. ಸೀತೆಯನ್ನು ಹುಡುಕಲು ಹೋಗುವಾಗ, ಹನುಮಂತನನ್ನು ಸುರಸಾ ಮತ್ತು ಸಿಂಹಿಕಾ ಎಂಬ ರಾಕ್ಷಸಿಯರು ತಡೆಯಲು ಪ್ರಯತ್ನಿಸಿದ್ದರು. ಅವರನ್ನ ಎದುರಿಸಿ, ಹನುಮಂತ ಲಂಕೆಗೆ ಬಂದ. ಅಲ್ಲಿ ಲಂಕಿಣಿಯನ್ನು ಎದುರಿಸಿದ್ದ.
ಮೂರನೇಯದಾಗಿ ಲಂಕಾ ದಹನ. ರಾವಣನ ಲಂಕೆ ಅದೆಷ್ಟು ದೊಡ್ಡದಿತ್ತೆಂದರೆ, ಯಾರೂ ಕೂಡ ಸುಲಭವಾಗಿ, ಅವನ ರಾಜ್ಯವನ್ನ ದಹನ ಮಾಡಲು ಆಗುತ್ತಿರಲಿಲ್ಲ. ಅಂಥಹುದರಲ್ಲಿ ಹನುಮಂತ, ತನ್ನ ಬಾಲದಿಂದ, ಲಂಕೆಯ ದಹನ ಮಾಡಿಬಿಟ್ಟ. ಹನುಮನ ಮೇಲೆ ಆಕ್ರಮಣ ಮಾಡಲು ಬಂದಾಗ, ರಾವಣನ ರಾಜ್ಯದವರೇ, ಹನುಮನ ಬಾಲಕ್ಕೆ ಬೆಂಕಿ ಇಟ್ಟಿದ್ದರು. ಆದರೆ ಹನುಮ ಅದೇ ಬಾಲದಿಂದಲೇ, ರಾವಣನ ಸ್ವರ್ಣ ಲಂಕೆಯನ್ನು ಸುಟ್ಟ.
ನಾಲ್ಕನೇಯದಾಗಿ ಸಂಜೀವಿನಿ ಪರ್ವತ ತಂದಿತ್ತು. ಲಕ್ಷ್ಮಣನನ್ನು ಬದುಕಿಸಬೇಕಾದರೆ, ಕೆಲ ಗಿಡಮೂಲಿಕೆಗಳ ಅವಶ್ಯಕತೆ ಇತ್ತು. ಆದರೆ ಹನುಮನಿಗೆ ಆ ಗಿಡಮೂಲಿಕೆಗಳ ಬಗ್ಗೆ ಗೊತ್ತಿರಲಿಲ್ಲ. ಹಾಗಾಗಿ ಅವನು ಸಂಜೀವಿನಿ ಪರ್ವತವನ್ನೇ ಹೊತ್ತು ತಂದ.