Thursday, November 30, 2023

Latest Posts

ಮಂಡ್ಯದ ಸ್ವಾಭಿಮಾನಿ ಜನತೆಗಾಗಿ ರಾಕ್ ಲೈನ್ ಹೊಸ ನಿರ್ಧಾರ

- Advertisement -

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಬೆಂಬಲಿತ ಅಭ್ಯರ್ಥಿ ಸುಮಲತಾ ಅಂಬರೀಶ್ ಭರ್ಜರಿ ಗೆಲುವಿಗೆ ಕಾರಣರಾದ ಮಂಡ್ಯ ಜನತೆಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹೊಸದೊಂದು ರೀತಿಯಲ್ಲಿ ಕೃತಜ್ಞತೆ ಸಲ್ಲಿಸಲಿದ್ದಾರೆ.  

ಕಾಂಗ್ರೆಸ್ ಜೆಡಿಎಸ್ ಪಕ್ಷಗಳ ಅಪಾರ ಪ್ರಭಾವವಿದ್ದರೂ ಮಂಡ್ಯ ಜನ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಥಿಸಿದ್ದ ಸುಮಲತಾರ ಕೈಹಿಡಿದಿದ್ರು. ಇದರಿಂದಾಗಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮಂಡ್ಯ ಜನರು ತಾವು ಏನು ಅನ್ನೋದನ್ನ ವಿಶ್ವಕ್ಕೇ ತೋರಿಸಿಕೊಟ್ಟಿದ್ದಾರೆ ಅಂತ ಮತದಾದರಿಗೆ ಕೃತಜ್ಞತೆ ಅರ್ಪಿಸಿದ್ರು. ಅಂದಿನಿಂದಲೂ ಮಂಡ್ಯ ಜನರಿಗೆ ಹೊಸ ರೀತಿಯಲ್ಲಿ ಏನಾದ್ರೂ ಮಾಡಬೇಕು ಅಂತ ಯೋಜನೆ ಮಾಡಿದ್ದ ರಾಕ್ ಲೈನ್ ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ತಾವು ನಿರ್ಮಿಸೋ ಪ್ರತಿಯೊಂದು ಚಿತ್ರದ ಟೈಟಲ್ ಕಾರ್ಡ್ ನಲ್ಲಿ ‘ಮಂಡ್ಯ ಜಿಲ್ಲೆಯ ಸ್ವಾಭಿಮಾನಿ ಜನರ ಆಶೀರ್ವಾದದೊಂದಿಗೆ’ ಅಂತ ಸಿನಿಮಾ ಆರಂಭಿಸಲು ನಿರ್ಧಾರ ಮಾಡಿದ್ದಾರೆ.

ಈ ವಿಷಯವನ್ನು ಸ್ವತಃ ರಾಕ್ ಲೈನ್ ವೆಂಕಟೇಶ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ಅಂದಹಾಗೆ ದಿವಂಗತ ಅಂಬರೀಶ್ ರವರ ಆಪ್ತರಾಗಿರೋ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಚುನಾವಣೆ ವೇಳೆ ಸುಮಲತಾ ಅಂಬರೀಶ್ ಬೆನ್ನೆಲುಬಾಗಿ ನಿಂತು ಪ್ರಚಾರ ಸೇರಿದಂತೆ ಮತ್ತಿತರ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ರು. ಸುಮಲತಾ ಗೆಲುವಿಗೆ ಸಾಕಷ್ಟು ಶ್ರಮಿಸಿದ್ರು.

ಸೋ.., ಇನ್ನು ಮುಂದೆ ತಮ್ಮ ಪ್ರತಿಯೊಂದು ಸಿನಿಮಾ ನೋಡೋಕೂ ಮುಂಚೆ ಮಂಡ್ಯ ಜನತೆಯ ಸ್ವಾಭಿಮಾನವನ್ನು ಪ್ರತಿಯೊಬ್ಬ ಪ್ರೇಕ್ಷಕರಿಗೂ ರಾಕ್ ಲೈನ್ ವೆಂಕಟೇಶ್ ಎತ್ತಿತೋರಲಿದ್ದಾರೆ. ಈ ವಿಷಯ ಸಹಜವಾಗಿಯೇ ಮಂಡ್ಯ ಮಂದಿಗೆ ಖುಷಿ ತಂದಿದೆ.

ಆಂಧ್ರದಲ್ಲಿ ಉಪ್ಪಿ ಹೇಳಿದ್ದೇನು..??? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=7wVQynvpZOk
- Advertisement -

Latest Posts

Don't Miss