Tuesday, May 13, 2025

Latest Posts

ಮಗುವಿನ ಮೆದುಳಿನ ಉತ್ತಮ ಬೆಳವಣಿಗೆಗೆ, ಗರ್ಭಿಣಿಯರು ಈ ಆಹಾರ ಸೇವಿಸಬೇಕು..

- Advertisement -

ಎಲ್ಲ ತಾಯಂದಿರಿಗೂ ತಮ್ಮ ಮಗು ಬುದ್ಧಿವಂತ ಮಗುವಾಗಬೇಕು ಅನ್ನೋ ಆಸೆ ಇರತ್ತೆ. ಹಾಗಾಗಿ ಅದು ಆರೋಗ್ಯವಾಗಿರುವಂತೆ, ಚಟುವಟಿಕೆಯಿಂದ ಇರುವಂತೆ, ಚುರುಕಾಗಿರುವಂತೆ ನೋಡಿಕೊಳ್ಳಬೇಕು. ಹಾಗಾಗಬೇಕಾದರೆ, ಉತ್ತಮ ಆಹಾರ ಸೇವನೆ ಮಾಡಬೇಕು. ಯಾಕಂದ್ರೆ ಮಗುವಿನ ಮೆದುಳಿನ ಬೆಳವಣಿಗೆ ಉತ್ತಮವಾಗಿದ್ರೆ, ಅದು ಬುದ್ಧಿವಂತವಾಗಿರುತ್ತದೆ. ಹಾಗಾದ್ರೆ ಮಗುವಿನ ಮೆದುಳಿನ ಬೆಳವಣಿಗೆ ಉತ್ತಮವಾಗಿರಬೇಕು ಅಂದ್ರೆ ಯಾವ ಆಹಾರ ಸೇವಿಸಬೇಕು ಅಂತಾ ತಿಳಿಯೋಣ ಬನ್ನಿ..

ರೆಸ್ಟೋರೆಂಟ್ ಸ್ಟೈಲ್ ಮ್ಯಾಂಗೋ ಮಸ್ತಾನಿ ರೆಸಿಪಿ..

ಕಬ್ಬಿಣಾಂಶ ಹೆಚ್ಚಿರುವ ಆಹಾರವನ್ನು ಗರ್ಭಿಣಿಯರು ತಿನ್ನುವುದರಿಂದ, ಮಕ್ಕಳು ಬುದ್ಧಿವಂತರಾಗುತ್ತಾರೆ. ಹಾಗಾಗಿ ಗರ್ಭಿಣಿಯರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 5 ನೆನೆಸಿ ಸಿಪ್ಪೆ ತೆಗೆದ ಬಾದಾಮಿ ತಿನ್ನಬೇಕು. ವಾರಕ್ಕೆ ಮೂರು ದಿನವಾದ್ರೂ ಪಾಲಕ್ ಸೊಪ್ಪಿನ ಪದಾರ್ಥವನ್ನು ಸೇವಿಸಬೇಕು. ದಾಳಿಂಬೆ, ಆರೇಂಜ್, ಎಪ್ರಿಕಾಟ್‌, ನೆನೆಸಿಟ್ಟ ಶೇಂಗಾ, ವಾಲ್ನಟ್‌ ತಿನ್ನಬೇಕು.

ತಂದೆ-ತಾಯಿಯಾಗಲು ಬಯಸುವವರು ಈ ಆಹಾರಗಳನ್ನು ಸೇವಿಸಿ..

ಮಗುವಿಗೆ ಆಯೋಡಿನ್ ಕೊರತೆ ಇರದಂತೆ ನೋಡಿಕೊಳ್ಳಿ. ಅಗತ್ಯಕ್ಕಿಂತ ಹೆಚ್ಚಲ್ಲದಿದ್ದರೂ, ದೇಹಕ್ಕೆ ಅಗತ್ಯವಿದ್ದಷ್ಟು ಉಪ್ಪನ್ನು ಸೇವಿಸಿ. ಹಾಲು, ತುಪ್ಪ, ಬೆಣ್ಣೆ, ಮೊಸರು ಅಗತ್ಯವಾಗಿ ಸೇವಿಸಿ. ಪ್ರತಿದಿನ ಅಲ್ಲದಿದ್ದರೂ ಒಂದಿನ ಬಿಟ್ಟು ಒಂದಿನವಾದ್ರೂ ಕ್ಯಾರೆಟ್ ಸೇವಿಸಿ. ಬ್ರೋಕಲಿ, ಡ್ರೈಫ್ರೂಟ್ಸ್, ನಟ್ಸ್ ಸೇವಿಸಿ. ಸರಸ್ವತಿ ಎಲೆಯ ತಂಬಳಿಯನ್ನ ವಾರಕ್ಕೆ ಮೂರು ಬಾರಿಯಾದ್ರೂ ಸೇವಿಸಿ. ಅಥವಾ ಪ್ರತಿದಿನ ಒಂದೊಂದು ಸರಸ್ವತಿ ಎಲೆಯನ್ನಾದರೂ ಸೇವಿಸಿ. ಸರಸ್ವತಿ ಎಲೆಯನ್ನು ಒಂದೆಲಗ, ತಿಮರೆ ಎಂದು ಕೂಡ ಕರೆಯುತ್ತಾರೆ.

- Advertisement -

Latest Posts

Don't Miss