Health Tips: ಪ್ರತೀ ತಂದೆ ತಾಯಿಗೂ ತಮ್ಮ ಮಗು ಆರೋಗ್ಯವಾಗಿ, ಚುರುಕಾಗಿ, ಬುದ್ಧಿವಂತವಾಗಿರಬೇಕು. ನಾಲ್ಕು ಜನ ತಮ್ಮ ಮಗುವಿಗೆ ಹೊಗಳುವಂತೆ ಆ ಮಗು ಬೆಳಿಯಬೇಕು ಅಂತಾ ಆಸೆ ಇರುತ್ತದೆ. ಅದಕ್ಕಾಗಿ ಅವರು ಹಲವು ಪ್ರಯತ್ನಗಳನ್ನೂ ಮಾಡುತ್ತಾರೆ. ಉತ್ತಮ ಆಹಾರ, ಪುಸ್ತಕ ಓದುವುದೆಲ್ಲ ಮಾಡುತ್ತಾರೆ. ಆದರೂ ಕೆಲ ಮಕ್ಕಳಿಗೆ 2 ವರ್ಷ ತುಂಬಿದರೂ, ಸರಿಯಾಗಿ ಅಪ್ಪ- ಅಮ್ಮ ಎಂದು ಹೇಳಲು ಬರುವುದಿಲ್ಲ. ಹಾಗಾಗಿ ಇಂದು ನಾವು ಮಗು ಬೇಗ ಮಾತನಾಡಬೇಕು. ಚುರುಕಾಗಿರಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.
ವಿದೇಶಿಗರು ಹುಟ್ಟಿದ ಮಕ್ಕಳನ್ನು ಬೇಕಾಬಿಟ್ಟಿಯಾಗಿ ಬೆಳೆಸುತ್ತಾರೆ. ಕೆಲವೇ ಕೆಲವರು ಅಚ್ಚುಕಟ್ಟಾಗಿ ಬೆಳೆಸುತ್ತಾರೆ. ಯಾಕಂದ್ರೆ ಅವರ ಪ್ರಕಾರ, ಮನುಷ್ಯ ಬಿಂದಾಸ್ ಆಗಿ ಜೀವನ ಮಾಡಬೇಕು. ಕುಡಿದು, ತಿಂದು ಎಂಜಾಯ್ ಮಾಡಬೇಕು. ವಿದ್ಯಾಭ್ಯಾಸ ಕಲಿಯುವ ಮನಸ್ಸಿದ್ದರೆ, ಕಲಿಯುತ್ತಾನೆ. ಇಲ್ಲದಿದ್ದರೆ, ಇಲ್ಲ ಅನ್ನೋ ಮನಸ್ಥಿತಿ ಇರುತ್ತದೆ. ಆದ್ರೆ ಭಾರತೀಯರಿಗೆ ಹಾಗಲ್ಲ. ಇಲ್ಲಿನ ಹಿರಿಯರು ಮಕ್ಕಳನ್ನು ಲಾಲಿಸಿ, ಪಾಲಿಸುವ ರೀತಿಯೇ ಬೇರೆ.
ಇದು ಕೆಲವರಿಗೆ ಇಷ್ಟವಾಗುವುದಿಲ್ಲ. ಮಗುವಿಗೆ ಹಿಂಸೆಯಾಗುತ್ತದೆ ಎಂದು ಹೇಳುತ್ತಾರೆ. ಆದರೆ ಹಿರಿಯರು ಕೊಡುವ ಔಷಧಿಯನ್ನು ಮಕ್ಕಳಿಗೆ ಕೊಡುವುದರಿಂದ, ಹಿರಿಯರು ಹೇಳಿದ ಹಾಗೆ ಮಕ್ಕಳಿಗೆ ಎಣ್ಣೆ ಮಸಾಜ್ ಮಾಡುವುದರಿಂದ, ಮಕ್ಕಳು ಆರೋಗ್ಯಕರವಾಗಿ, ಚುರುಕಾರಿ, ಉತ್ತಮ ಬೆಳವಣಿಗೆ ಹೊಂದುತ್ತಾರೆ. ಇಂಥ ಔಷಧಿಗಳಲ್ಲಿ ಮಕ್ಕಳಿಗೆ ಬಜೆ ಕೊಡುವುದು ಕೂಡ ಮುಖ್ಯವಾದ ವಿಚಾರವಾಗಿದೆ.
ಬಜೆಗೆ ಕಪಲ್ ಶುಂಠಿ ಎಂದು ಕರೆಯುತ್ತಾರೆ. ಇದು ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುವ ಮದ್ದಾಗಿದ್ದು, ಇದನ್ನು ತೋಯ್ದು ಕೊಂಚವೇ ಮಗುವಿಗೆ ತಿನ್ನಿಸಿದರೆ, ಅದರ ದೇಹದಲ್ಲಿ ಕಫ, ಕೆಮ್ಮು, ಜ್ವರ, ನೆಗಡಿ ಏನೇ ಆಗಿದ್ದರೂ, ಅದು ಹೊರಟು ಹೋಗುತ್ತದೆ. ಮಗು ಆರೋಗ್ಯವಾಗಿರುತ್ತದೆ. ವಾರದಲ್ಲಿ ಎರಡು ಬಾರಿ ಕೊಂಚ ಕೊಂಚವೇ ಕೊಟ್ಟರೆ ಸಾಕು. ಹೆಚ್ಚು ಕೊಟ್ಟರೆ, ಮಗುವಿನ ದೇಹದಲ್ಲಿ ಉಷ್ಣ ಹೆಚ್ಚಾಗಿ, ಬೇಧಿ ಶುರುವಾಗಬಹುದು. ಅಥವಾ ಮೂತ್ರ ವಿಸರ್ಜನೆಯಾಗದಿರಬಹುದು.
ಇನ್ನು ಬಜೆ ಸೇವನೆಯಿಂದ ಮಗುವಿನ ನೆನಪಿನ ಶಕ್ತಿ ಉತ್ತಮವಾಗಿರುತ್ತದೆ. ಮಗು ಚುರುಕಾಗುತ್ತದೆ. ಸ್ಪಷ್ಟವಾಗಿ ಮಾತನಾಡುತ್ತದೆ. ಹೊಟ್ಟೆಯ ಸಮಸ್ಯೆ, ಜೀರ್ಣಕ್ರಿಯೆ ಸಮಸ್ಯೆ ಎಲ್ಲದಕ್ಕೂ ಪರಿಹಾರ ಸಿಗುತ್ತದೆ. ಮಗುವಿನ ದೇಹದಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.
Digestion-Indigestion ಅಂದ್ರೆ ಏನು? ಆರೋಗ್ಯಕ್ಕೆ ಯಾವ ಆಹಾರಗಳು ಉತ್ತಮ?