Sunday, September 8, 2024

Latest Posts

ಸಧೃಡ, ಗಟ್ಟಿಮುಟ್ಟಾದ ಆರೋಗ್ಯಕರ ಕೇಶರಾಶಿ ಪಡೆಯಲು ಹೀಗೆ ಮಾಡಿ..

- Advertisement -

ಕಪ್ಪಾದ, ದಟ್ಟ, ಸಧೃಡ, ಗಟ್ಟಿಮುಟ್ಟಾದ ಕೂದಲು ಯಾರಿಗೆ ತಾನೇ ಬೇಡ ಹೇಳಿ. ಸುಂದರ ಕೇಶ ರಾಶಿ ಇದ್‌ದಾಗಲೇ, ಆ ಮುಖಕ್ಕೊಂದು ಬೆಲೆ. ಹಾಗಾಗಿ ಸುಂದರ ಕೂದಲನ್ನ ಎಲ್ಲರೂ ಬಯಸುತ್ತಾರೆ. ಹಾಗಾಗಿ ಇಂದು ನಾವು ಆರೋಗ್ಯಕರ ಕೂದಲಿಗಾಗಿ ನಾವು ಯಾವ ರೀತಿಯ ಆಹಾರ ಸೇವಿಸಬೇಕು. ನಮ್ಮ ಜೀವನ ಶೈಲಿ ಹೇಗಿರಬೇಕು ಅಂತಾ ತಿಳಿಯೋಣ..

ಕೊಂಕಣಿ ಶೈಲಿಯ ಸುರ್ನಳಿ ರೆಸಿಪಿ..

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ನಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಪ್ರತಿದಿನ ಸರಿಯಾಗಿ ಮಲ ಮೂತ್ರ ವಿಸರ್ಜನೆಯಾಗುತ್ತಿದ್ದಲ್ಲಿ,  ನೀವು ಆರೋಗ್ಯವಂತರಿದ್ದೀರಿ ಎಂದರ್ಥ. ನಿಮಗೆ ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತಿದೆ ಎಂದಲ್ಲಿ, ನೀವು ಉತ್ತಮ ಆರೋಗ್ಯವನ್ನ ಹೊಂದಿದ್ದೀರಿ ಎಂದರ್ಥ.

ಈ ರೀತಿ ಆರೋಗ್ಯವಾಗಿರಬೇಕು ಅಂದ್ರೆ ಫ್ರೆಶ್ ತರಕಾರಿ, ಹಣ್ಣುಗಳನ್ನ ಸೇವಿಸಿ. ಎಳನೀರನ್ನು ಕುಡಿಯಿರಿ. ಪ್ರತಿದಿನ ಮಿತವಾಗಿ ಡ್ರೈಫ್ರೂಟ್ಸ್ ತಿನ್ನಿ. ಮಾಂಸಾಹಾರಿಗಳು ಬೇಯಿಸಿದ ಮೊಟ್ಟೆ ತಿನ್ನುವುದರಿಂದ ಕೂದಲ ಆರೋಗ್ಯ ಉತ್ತಮವಾಗಿರತ್ತೆ. ಸಸ್ಯಾಹಾರಿಗಳು ಪ್ರೋಟಿನ್‌ಗಾಗಿ ಸೋಯಾ ಚಂಕ್ಸ್, ಮಶ್ರೂಮ್ ತಿನ್ನಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 5 ನೆನೆಸಿ, ಸಿಪ್ಪೆ ತೆಗೆದ ಬಾದಾಮ್, 1 ಅಂಜೂರವನ್ನ ತಿನ್ನಿ. ನೆನೆಸಿಟ್ಟ ಅಂಜೂರ ಮತ್ತು ಬಾದಾಮ್ ನಿಮ್ಮ ಕೂದಲ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಸ್ಟ್ರಾಬೇರಿ ಮತ್ತು ಕಲ್ಲಂಗಡಿ ಹಣ್ಣಿನ ಸ್ಮೂದಿ..

ಇನ್ನು ನೀವು ಮಲಗುವಾಗ ಬಳಸುವ ದಿಂಬು ಸ್ವಚ್ಛವಾಗಿರಲಿ. ಬಳಸುವ ಬೆಡ್‌ಶೀಟ್, ಸ್ವಚ್ಛವಾಗಿರಲಿ. ಹೀಗಿದ್ದಾಗ ಮಾತ್ರ, ನಿಮ್ಮ ಕೂದಲು ಹೆಚ್ಚು ಉದುರುವುದಿಲ್ಲ. ಸರಿಯಾದ ಸಮಯಕ್ಕೆ ನಿದ್ದೆ ಮಾಡಿ. ಊಟ ಮಾಡಿ ಒಂದು ಗಂಟೆ ಬಳಿಕ ನಿದ್ದೆ ಮಾಡಬೇಕು. ಮತ್ತು ನಿದ್ದೆ ಮಾಡುವ ಒಂದು ಗಂಟೆ ಮುನ್ನ ಮೊಬೈಲ್, ಲ್ಯಾಪ್‌ಟಾಪ್ ಬಳಸುವುದನ್ನ ನಿಲ್ಲಿಸಿ. ಅದರ ಬದಲು ಪುಸ್ತಕ ಓದಿ.

ಗುಟ್ಕಾ ಪಾನ್ ಸೇವಿಸುವುದು, ಮದ್ಯಪಾನ, ಧೂಮಪಾನ ಮಾಡುವ ಚಟ ಇದ್ದಲ್ಲಿ ಅದನ್ನ ಬಿಟ್ಟುಬಿಡಿ. ವಾರಕ್ಕೆರಡು ಬಾರಿ ಕೆಮಿಕಲ್ ಮುಕ್ತವಾದ ಎಣ್ಣೆಯಿಂದ ಚೆನ್ನಾಗಿ ಹೆಡ್ ಮಸಾಜ್ ಮಾಡಿಕೊಳ್ಳಿ. ಉತ್ತಮ ಶ್ಯಾಂಪೂವಿನಿಂದ ಹೇರ್ ವಾಶ್ ಮಾಡಿ. ಕೂದಲಿಗೆ ಹೇರ್ ಡ್ರೈಯರ್, ಹೇರ್ ಸ್ಟ್ರೇಟ್ನರ್ ಹೆಚ್ಚು ಬಳಸಬೇಡಿ..

- Advertisement -

Latest Posts

Don't Miss