ಯಾವುದೇ ವಾಯು ಮಾಲಿನ್ಯವಿಲ್ಲದ. ಪದೇ ಪದೇ ಪೆಟ್ರೋಲ್, ಡೀಸೇಲ್ ಹಾಕಿಸುವ ಕಾಟವಿಲ್ಲದ. ಆರೋಗ್ಯಕ್ಕೂ ಉತ್ತಮವಾಗಿರುವ ವಾಹನ ಅಂದ್ರೆ ಸೈಕಲ್. ಮೊದಲೆಲ್ಲ ಸೈಕಲ್ ಬೇಕು ಅಂದ್ರೆ ದುಡ್ಡು ಕೊಟ್ಟು ಬಾಡಿಗೆಗೆ ಪಡೆಯಬೇಕಿತ್ತು. ಆದ್ರೆ ಇಗೀನ ಹಲವು ಮಕ್ಕಳಿಗೆ ಏನು ಬೇಕೋ ಎಲ್ಲಾ ಸುಲಭವಾಗಿ ಸಿಗುತ್ತಿದೆ.ಆದ್ರೆ ಆ ಸೈಕಲ್ ರೈಡಿಂಗ್ ಬಾಲ್ಯಕ್ಕಷ್ಟೇ ಸೀಮಿತವಾಗಿದೆ.
ಹೃದಯ ಸಂಬಂಧಿ ಖಾಯಿಲೆ ಬರುತ್ತಿದೆ ಎಂದರೆ ಈ ಸೂಚನೆ ಸಿಗುತ್ತದೆ ನೋಡಿ..
ದೊಡ್ಡವರಾಗುತ್ತಿದ್ದಂತೆ, ಬೈಕ್ ಸ್ಕೂಟಿನೇ ಬೇಕು ಅಂತಿದ್ದಾರೆ. ಆದ್ರೆ ನೀವು ಬೈಕ್ ಸ್ಕೂಟಿ ಓಡಿಸುವುದರ ಜೊತೆಗೆ, ದಿನಕ್ಕೆ ಒಂದು ಹೊತ್ತಾದರೂ, ಸೈಕಲ್ ಓಡಿಸಿದ್ರೆ, ನಿಮ್ಮ ಆರೋಗ್ಯದಲ್ಲಿ ಆಶ್ಚರ್ಯಕರ ಬದಲಾವಣೆಯನ್ನು ನೀವು ಕಾಣಬಹುದು. ಹಾಗಾದ್ರೆ ಸೈಕಲ್ ಚಲಾವಣೆಯಿಂದ ಯಾವ ಆರೋಗ್ಯ ಲಾಭವಿದೆ ಅಂತಾ ತಿಳಿಯೋಣ ಬನ್ನಿ..
ಸೈಕಲ್ ಚಲಾವಣೆಯಿಂದ ನಿಮ್ಮ ದಿನ ಚೈತನ್ಯದಾಯಕವಾಗಿರುತ್ತದೆ. ನಿಮ್ಮ ಮನ ಉಲ್ಲಸಿತವಾಗಿರುತ್ತದೆ. ದೇಹದಲ್ಲಿ ರಕ್ತಸಂಚಲನ ಉತ್ತಮವಾಗಿರುತ್ತದೆ. ಅಲ್ಲದೇ ತೂಕವನ್ನು ಇಳಿಸಿಕೊಳ್ಳಬೇಕು ಎನ್ನುವವರು ಪ್ರತಿದಿನ 15ರಿಂದ 20 ನಿಮಿಷ ಸರಿಯಾದ ರೀತಿಯಲ್ಲಿ ಸೈಕಲ್ ಚಲಾಯಿಸಿದರೆ, ನಿಮ್ಮ ತೂಕ ಇಳಿಯುತ್ತದೆ.
ಮರಣಕ್ಕೂ ಮುನ್ನ ಭೀಷ್ಮ ಕರ್ಣನ ಬಳಿ ಹೇಳಿದ ಸತ್ಯಗಳಿವು..
ಇನ್ನು ಸಾವಿರ ಸಾವಿರ ಕೊಟ್ಟು ಎರೋಬಿಕ್ ಕ್ಲಾಸ್ ಗೆ ಹೋಗುವ ಬದಲು, ಸೈಕಲ್ ಚಲಾಯಿಸಿದರೆ ಒಳ್ಳೆಯದು. ಪ್ರತಿದಿನ ಸೈಕಲ್ ಚಲಾಯಿಸುವುದರಿಂದ ಮಂಡಿ ನೋವು, ಕಾಲು ನೋವಿದ್ದರೆ ಹೋಗುತ್ತದೆ. ಯಾಕಂದ್ರೆ ಸೈಕಲ್ ಚಲಾಯಿಸುವುದರಿಂದ ಕಾಲಿಗೆ ವ್ಯಾಯಾಮವಾಗುತ್ತದೆ. ಬಿಪಿ ಶುಗರ್ ಇದ್ದವರು ಒಂದು ಗ್ಲಾಸ್ ಕಾಯಿಸಿ, ತಣಿಸಿದ ನೀರನ್ನು ಕುಡಿದು, ಸೈಕಲ್ ಚಲಾಯಿಸಬೇಕು.
ಪ್ರತಿದಿನ 20 ನಿಮಿಷವಾದ್ರೂ ಸೈಕಲ್ ಚಲಾಯಿಸಬೇಕು. ನಿಮಗೆ 10 ನಿಮಿಷ ಸೈಕಲ್ ಓಡಿಸಿ, ಸುಸ್ತಾದರೆ, ಇನ್ನೊಂದು 5 ನಿಮಿಷ ರೆಸ್ಟ್ ಮಾಡಿ. ಮತ್ತೊಂದು 10ರಿಂದ 15 ನಿಮಿಷ ಸೈಕಲ್ ಚಲಾಯಿಸಿ. ಆದ್ರೆ ಯಾವುದೇ ಕಾರಣಕ್ಕೂ ಸುಸ್ತಾದರೂ, ಅದನ್ನು ನಿರ್ಲಕ್ಷಿಸಿ ಸೈಕಲ್ ಓಡಿಸುವುದನ್ನ ಮುಂದುವರಿಸಬೇಡಿ. ಇದರಿಂದ ಹೃದಯದ ಸಮಸ್ಯೆ ಬರುತ್ತದೆ.