Health Tips: ಬಿಸಿ ನೀೀರಿನ ಸೇವನೆಯಿಂದ ಆರೋಗ್ಯಕ್ಕೆ ತುಂಬಾ ಲಾಭವಾಾಗುತ್ತದೆ ಅಂತಾ ಹಲವರಿಗೆ ಗೊತ್ತು. ಆದರೆ ಏನೇನು ಉಪಯೋಗವಾಗುತ್ತದೆ..? ಯಾವ ರೀತಿ ಬಿಸಿ ನೀರಿನ ಬಳಕೆ ಮಾಡಬೇಕು ಎಂಬ ಬಗ್ಗೆ ನಾವಿಂದು ವಿವರಿಸಲಿದ್ದೇವೆ.
ಆಯುರ್ವೇದದಲ್ಲಿ ಬೆಳಿಗ್ಗೆ ಎದ್ದು ಬಿಸಿ ನೀರಿನ ಸೇವನೆ ಮಾಡುವುದನ್ನು ಉಷಾ ಪಾಾನ ಎನ್ನಲಾಗುತ್ತದೆ. ಉಷಾ ಎಂದರೆ ಬೆಳಗ್ಗಿನ ಜಾವ, ಪಾನ ಎಂದರೆ ನೀರು. ಬೆಳಿಗ್ಗೆ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ನಿಮ್ಮ ಜೀರ್ಣಕ್ರಿಯೆಯನ್ನು ಇದು ಆ್ಯಕ್ಟೀವ್ ಮಾಡುತ್ತದೆ. ಬಳಿಕ ಸುಲಭವಾಗಿ ಮಲ, ಮೂತ್ರ ವಿಸರ್ಜನೆಯಾಗುವಂತೆ ಸಹಾಯ ಮಾಡುತ್ತದೆ. ಇದರಿಂದ ನಮ್ಮ ಹೊಟ್ಟೆಯ ಆರೋಗ್ಯ ಸದಾ ಉತ್ತಮವಾಗಿರುತ್ತದೆ.
ಉಗುರು ಬೆಚ್ಚಗಿನ ನೀರಿನ ಸೇವನೆ ಮಾಡುವುದರಿಂದ ಯೂರಿನ್ ಪ್ರಾಬ್ಲಮ್ ಸರಿಯಾಗುತ್ತದೆ. ಮೂತ್ರ ವಿಸರ್ಜನೆ ಸರಿಯಾಗಿ ಆಗುತ್ತಿಲ್ಲ. ಮೂತ್ರದಲ್ಲಿ ಇನ್‌ಫೆಕ್ಷನ್ ಆಗುವ ಸಾಧ್ಯತೆ ಏನಾದ್ರೂ ಇದ್ದರೂ, ಬಿಸಿ ನೀರಿನ ಸೇವನೆಯಿಂದ, ಆ ಬ್ಯಾಕ್ಟಿರಿಯಾ ಎಲ್ಲವೂ ಮೂತ್ರದ ಮೂಲಕ ಹೊರಹೋಗಿ, ನೀವು ಆರೋಗ್ಯವಾಗಿ ಇರುವಂತೆ ಮಾಡುತ್ತದೆ.
ಮೂರನೇಯದಾಗಿ ನಿಮ್ಮ ಮುಖದ ಮೇಲೆ ಹೆಚ್ಚು ಮೊಡವೆಗಳಿದೆ. ಗುಳ್ಳೆಗಳಾಗುತ್ತಿದೆ. ಕೂದಲು ಉದುರುತ್ತಿದೆ ಎಂದಲ್ಲಿ. ಉಗುರು ಬೆಚ್ಚಗಿನ ನೀರಿನ ಸೇವನೆ ಮಾಡಿದ್ರೆ, ಆ ಸಮಸ್ಯೆ ಕೂಡ ಕಡಿಮೆ ಆಗುತ್ತದೆ. ಅಲ್ಲದೇ ನೀವು ಹೆಚ್ಚು ನೀರು ಕುಡಿಯುವುದರಿಂದ ವಯಸ್ಸಾದವಂತೆ ಕಾಣುವುದು ತಪ್ಪುತ್ತದೆ. ನಿಮ್ಮ ಮುಖದಲ್ಲಿ ಯವ್ವನ ಕಂಡು ಬರುತ್ತದೆ. ತ್ವಚೆಯ ಮೇಲೆ ರಿಂಕಲ್ಸ್ ಬರುವುದಿಲ್ಲ.