Monday, May 12, 2025

Latest Posts

Health Tips: ಮನೆಮದ್ದುಗಳು ತ್ವಚೆಗೆ ಒಳ್ಳೇದೋ..? ಕೆಟ್ಟದ್ದೋ..?

- Advertisement -

Health Tips: ನಾವು ಸುಂದರವಾಗಿ ಕಾಣಬೇಕು. ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿ ಕಾಣಬೇಕು ಅಂತಾ ಹಲವರು ತರಹೇವಾರಿ ಪ್ರಯೋಗಗಳನ್ನು ತಮ್ಮ ತ್ವಚೆಯ ಮೇಲೆ ಮಾಡುತ್ತಾರೆ. ಕೆಲವರು ಬರೀ ಮಾರುಕಟ್ಟೆಯಲ್ಲಿ ಸಿಗುವ ಪ್ರಾಡಕ್ಟ್ ಬಳಸಿದ್ರೆ, ಇನ್ನು ಕೆಲವರು ಮನೆ ಮದ್ದನ್ನು ಪ್ರಯೋಗಿಸುತ್ತಾರೆ. ಆದರೆ ಮನೆಮದ್ದುಗಳು ತ್ವಚೆಗೆ ಒಳ್ಳೆಯದ್ದಾ..? ಕೆಟ್ಟದ್ದಾ..? ನಾವು ಮನೆ ಮದ್ದು ಪ್ರಯೋಗಿಸುವ ಬದಲು ಏನು ಮಾಡಬೇಕು ಅಂತಾ ವೈದ್ಯರೇ ಹೇಳಿದ್ದಾರೆ ನೋಡಿ.

ವೈದ್ಯರಾಗಿರುವ ವಿದ್ಯಾ ಅವರು ಈ ಬಗ್ಗೆ ವಿವರಿಸಿದ್ದು, ಹೋಮ್ ರೆಮಿಡಿಯನ್ನು ನಾಾವು ಬೇಡವೆಂದೇ ಹೇಳುತ್ತೇವೆ. ಜೇನುತುಪ್ಪ, ಬೆಳ್ಳುಳ್ಳಿ, ಕಡಲೆ ಹಿಟ್ಟು ಹೀಗೆ ಹಲವು ಮನೆ ಮದ್ದುಗಳನ್ನು ಬಳಸಿ, ತ್ವಚೆ ಚೆಂದಗೊಳಿಸಬಹುದು ಅಂತಾ ಹೇಳುತ್ತಾರೆ. ಆದ್ರೆ ಎಲ್ಲದಕ್ಕೂ ಒಂದು ಸೈಂಟಿಫಿಕ್ ಬ್ಯಾಗ್ರೌಂಡ್ ಇರೋದಿಲ್ಲ. ಹೆಚ್ಚು ಅಂದ್ರೆ ಹಾಲು ಅಥವಾ ಮೊಸರನ್ನು ಮುಖಕ್ಕೆ ಹಚ್ಚಬಹುದು.

ಆದರೆ ಹಣ್ಣು- ತರಕಾರಿಯನ್ನು ಮುಖಕ್ಕೆ ಹಚ್ಚುವುದರಿಂದ ಏನೂ ಪ್ರಯೋಜನವಾಗುವುದಿಲ್ಲ. ಬದಲಾಗಿ ಅವುಗಳ ಸೇವನೆ ಮಾಡಬೇಕು. ಹಣ್ಣು -ತರಕಾರಿಗಳ ಸೇವನೆಯಿಂದ ಮುಖದಲ್ಲಿ ಅಂದ ಹೆಚ್ಚುವುದಲ್ಲದೇ, ಆರೋಗ್ಯವೂ ಚೆನ್ನಾಗಿರುವುದು. ಆದರೆ ಅದನ್ನು ಅರೆದು ಮುಖಕ್ಕೆ ಹಚ್ಚಿದರೆ ಅದರಿಂದೇನೂ ಪ್ರಯೋಜನವಾಗುವುದಿಲ್ಲ.

ಯಾಕಂದ್ರೆ ಅವು ಬರೀ ಸ್ವಲ್ಪ ಹೊತ್ತಿನ ಫ್ರೆಶ್ನೆಸ್ ಕೊಡುತ್ತದೆ ವಿನಃ ಅದು ಮುಖದೊಳಗೆ ಹೋಗಿ, ಅಂದ ಹೆಚ್ಚಿಸಲು ಸಹಕರಿಯಾಗೋದಿಲ್ಲ. ಅಲ್ಲದೇ, ಬೆಳ್ಳುಳ್ಳಿ, ಕಡಲೆ ಹಿಟ್ಟು, ಅರಿಶಿನ, ಜೇನುತುಪ್ಪ ಇವೆಲ್ಲಾ ಕೆಲವರಿಗೆ ಅಲರ್ಜಿಯಾಗುತ್ತದೆ. ಹಾಗಾಗಿ ಮನೆಮದ್ದು ಅಷ್ಟು ಉತ್ತಮವಲ್ಲ ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss