ಓರ್ವ ಹೆಣ್ಣು ಮೊದಲ ಬಾರಿ ಗರ್ಭಿಣಿಯಾದಾಗ, ಆಕೆಯ ಮನಸ್ಸಲ್ಲಿ ಹಲವು ಗೊಂದಲಗಳಿರುತ್ತದೆ. ಈ ಸಮಯದಲ್ಲಿ ಯಾವ ಆಹಾರ ತಿನ್ನಬೇಕು, ಯಾವ ಆಹಾರ ತಿನ್ನಬಾರದು. ಅದು ತಿಂದ್ರೆ, ಹೀಗಾಗತ್ತೆ. ಇದು ತಿಂದ್ರೆ ಹಾಗಾಗತ್ತೆ ಅಂತೆಲ್ಲ ಜನ ಹೇಳೋದು ಕೇಳಿ, ತಾನು ಯಾವ ಆಹಾರ ತಿನ್ನಬೇಕು ಅನ್ನೋದೇ ಆಕೆಗೆ ಗೊತ್ತಾಗುವುದಿಲ್ಲ. ಇದರ ಮಧ್ಯೆ ಹೀಗಾದ್ರೆ ಗಂಡು ಮಗು, ಹಾಗಾದ್ರೆ ಹೆಣ್ಣು ಮಗು ಅಂತಾ ಹಲವರು ಹಲವು ರೀತಿ ಹೇಳಿ, ತಲೆ ಕೆಡಿಸಿಬಿಡುತ್ತಾರೆ. ಆದ್ರೆ ಗರ್ಭಿಣಿಯರು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ. ಬದಲಾಗಿ ಇದನ್ನ ಓದಿ…
ಮೊದಲನೇಯದಾಗಿ ಗರ್ಭಿಣಿಯರು ಇಬ್ಬರ ಆಹಾರವನ್ನು ತಿನ್ನಬೇಕು ಅಂತಾ ಹಲವರು ಹೇಳ್ತಾರೆ. ಆದ್ರೆ ಗರ್ಭಣಿಯರು ತಮಗೆ ಎಷ್ಟು ತಿನ್ನೋಕ್ಕೆ ಆಗತ್ತೋ ಅಷ್ಟೇ ಆಹಾರವನ್ನ ತಿನ್ನಬೇಕು. ಆದ್ರೆ ಅದು ಆರೋಗ್ಯಕರವಾಗಿರಬೇಕು ಅಷ್ಟೇ. ಹಣ್ಣು, ತರಕಾರಿ, ಸೊಪ್ಪು, ಹಾಲು, ಡ್ರೈಫ್ರೂಟ್ಸ್, ತುಪ್ಪ, ಮೊಸರು ಇವನ್ನೆಲ್ಲ ತಿನ್ನಬೇಕು. ಇವೆಲ್ಲವನ್ನ ನಿಮಗೆಷ್ಟು ತಿನ್ನೋಕ್ಕೆ ಆಗತ್ತೋ, ಅಷ್ಟೇ ತಿನ್ನಿ. ಬದಲಾಗಿ ಯಾರೋ ಹೇಳಿದರೆಂದು, ಅಗತ್ಯಕ್ಕಿಂತ ಹೆಚ್ಚು ತಿನ್ನಬೇಡಿ.
ಎರಡನೇಯದಾಗಿ ಗರ್ಭಿಣಿಯರು ವ್ಯಾಯಾಮ ಮಾಡಬಹುದಾ ಅನ್ನೋ ಪ್ರಶ್ನೆಗೆ ಉತ್ತರ. ಖಂಡಿತ ಮಾಡಬಹುದು. ಆದರೆ, ಆರಾಮವಾಗಿರುವ ವ್ಯಾಯಮ ಮಾಡಿ. ವಾಕಿಂಗ್ ಮಾಡಿ. ಇನ್ನು ಹೆಚ್ಚು ವ್ಯಾಯಾಮ ಮಾಡಬಯಸಿದ್ದಲ್ಲಿ, ಗೈಡೆನ್ಸ್ ಪಡೆದು ವ್ಯಾಯಾಮ ಮಾಡಿ. ಆದ್ರೆ ಯಾವುದೇ ಕಾರಣಕ್ಕೂ ನೀವಾಗಿಯೇ, ನಿಮಗೆ ಮನಸ್ಸಿಗೆ ಬಂದ ಹಾಗೆ, ವ್ಯಾಯಾಮ ಮಾಡಬೇಡಿ.
ಮೂರನೇಯದಾಗಿ ನಿಮ್ಮ ಹೊಟ್ಟೆ ಕೆಳಮುಖವಾಗಿದ್ರೆ, ಹೆಣ್ಣು ಮಗು ಮತ್ತು ಹೊಟ್ಟೆ ಮೇಲ್ಮುಖವಾಗಿದ್ರೆ, ಗಂಡು ಮಗು ಅಂತಾ ಕೆಲವರು ಹೇಳ್ತಾರೆ. ಆದ್ರೆ ಇದು ಸುಳ್ಳು. ಮಗುವಿನ ತಲೆಯ ಭಾರ ಎಲ್ಲಿ ಹೆಚ್ಚಿರುತ್ತದೆಯೇ, ಅಲ್ಲಿ ಭಾರ ಹೆಚ್ಚಿರುತ್ತದೆ. ಹಾಗಾಗಿ ಹೊಟ್ಟೆಯ ಶೇಪ್ ಚೇಂಜ್ ಆಗುತ್ತದೆ. ಇಲ್ಲಿ ಹೆಣ್ಣು – ಗಂಡು ಅಂತಾ ಇಲ್ಲಾ.
ನಾಲ್ಕನೇಯದಾಗಿ ಹಾಲಿನಲ್ಲಿ ಕೇಸರಿ ದಳ ಸೇರಿಸಿ ಕುಡಿದ್ರೆ ಮಗು ಬೆಳ್ಳಗಾಗಿರುತ್ತದೆ ಅನ್ನೋದು 100% ನಿಜವಲ್ಲ. ನಿಮಗೆ ಕೇಸರಿ ಹಾಲು ಕುಡಿಯಬೇಕು ಎನ್ನಿಸಿದ್ದಲ್ಲಿ ಮಾತ್ರ ಕುಡಿಯಿರಿ. ಆದ್ರೆ ನಿಮ್ಮ ಅಥವಾ ನಿಮ್ಮ ಕುಟುಂಬಸ್ಥರ ಮೈ ಬಣ್ಣ ಯಾವ ರೀತಿ ಇರುತ್ತದೆಯೋ, ಮಕ್ಕಳು ಕೂಡ ಆ ರೀತಿ ಇರುತ್ತಾರೆ. ಮಗುವಿನ ಮೈಬಣ್ಣ ಅನುವಂಶಿಕವಾಗಿರುತ್ತದೆ.
ಐದನೇಯದಾಗಿ ಪಪ್ಪಾಯಿ, ಅನಾನಸ್ ತಿಂದ್ರೆ ಅಬಾರ್ಷನ್ ಆಗತ್ತೆ ಅಂತಾ ಹಲವರು ಹೇಳ್ತಾರೆ. ಆದ್ರೆ ಇದು ಸುಳ್ಳು. ನೀವು ಈ ಹಣ್ಣನ್ನ ಅಗತ್ಯಕ್ಕಿಂತ ಹೆಚ್ಚು ತಿಂದ್ರೆ. ಅಥವಾ ಪ್ರತಿದಿನ ತಿಂದ್ರೆ ನಿಮ್ಮ ದೇಹದ ಉಷ್ಣತೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಮತ್ತು ದೇಹದಲ್ಲಿ ಉಷ್ಣತೆ ಹೆಚ್ಚಾಗುವುದು, ಗರ್ಭಿಣಿಯರಿಗೆ ಒಳ್ಳೆಯದಲ್ಲ. ಹಾಗಾಗಿ ಯಾವಾಗಲಾದರೂ, ಕೊಂಚ ಪ್ರಮಾಣದಲ್ಲಿ ನೀವು ಪಪ್ಪಾಯಿ, ಅನಾನಸ್ ತಿನ್ನಬಹುದು. ಜೊತೆಗೆ ಕಾಫಿ, ಟೀ ಕುಡಿಯಬೇಕು ಅಂದ್ರೆ. ಅದನ್ನು ಕೂಡ ಲಿಮಿಟ್‌ನಲ್ಲಿ ಕುಡಿಯಬಹುದು.