Political News: ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಇಂದು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಕರಂದ್ಲಾಜೆ ಟೆಂಪಲ್ ರನ್ ಮಾಡಿದ್ದಾರೆ.
ಸಂಜಯ್ ನಗರದ ರಾಧಕೃಷ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬಳಿಕ 10.30ಕ್ಕೆ ಮೈಸೂರು ಬ್ಯಾಂಕ್ ಸರ್ಕಲ್ ಬಳಿಯ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ಪೂಜೆ ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೆ ರೋಡ್ ಶೋ ನಡೆಸಿದ್ದಾರೆ. ರೋಡ್ ಶೋ ಮೂಲಕ ಹೋಗಿ ಶೋಭಾ ಕರಂದ್ಲಾಜೆ ನಾಮಪತ್ರ ಸಲ್ಲಿಸಿದ್ದಾರೆ.
ರಾಧಾಕೃಷ್ಣ ಟೆಂಪಲ್ ವಿಸಿಟ್ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶೋಭಾ ಕರಂದ್ಲಾಜೆ, ಮೋದಿಯನ್ನ ದೇಶಕ್ಕಾಗಿ ಬಯಸ್ತಿದ್ದಾರೆ. ೫ ಲಕ್ಷಕ್ಕೂ ಅಧಿಕ ಲೀಡ್ ನಿಂದ ಗೆಲುವಿನ ವಿಶ್ವಾಸವಿದೆ. ಒಳ್ಳೆಯ ಸಹಕಾರ ಸಿಗ್ತಿದೆ. ಪಕ್ಷದ ನಾಯಕರು ಮಂಡಲ ನಾಯಕರು ಶ್ರಮ ಪಟ್ಟು ಕೆಲಸ ಮಾಡ್ತಿದ್ದಾರೆ. ಒಳಪೆಟ್ಟಿನ ಆತಂಕ ಖಂಡಿತವಾಗಿಯೂ ಇಲ್ಲ. ಎಲ್ಲಾ ಶಾಸಕರು ಪ್ರವಾಸ ಮಾಡ್ತಿದ್ದಾರೆ. ಅವ್ರೇ ಕರೆದು ಸನ್ಮಾನ ಮಾಡ್ತಿದ್ದಾರೆ. ಒಗ್ಗಟ್ಟಾಗಿ ಕೆಲಸ ಮಾಡ್ತಾರೆ ಎಂದಿದ್ದಾರೆ.
ಇನ್ನು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಕರಂದ್ಲಾಜೆ, ಕಾಂಗ್ರೆಸ್ ಸುಳ್ಳು ಹೇಳೋದು ಅವ್ರ ಚಾಳಿ. ಗ್ಯಾರಂಟಿ ಗಳು ಜನ್ರಿಗೆ ಸರಿಯಾಗಿ ತಲುಪುತ್ತಿಲ್ಲ. ಸರ್ಕಾರದ ಬಳಿ ಅನುದಾನವಿಲ್ಲ. ಬರಿದಾಗಿದೆ ಎಂದಿದ್ದಾರೆ. ದೊಡ್ಡ ಕ್ಷೇತ್ರದಲ್ಲಿ ಬಿಜೆಪಿ ನನಗೆ ಅವಕಾಶ ಕೊಟ್ಟಿದೆ. ನಮ್ಮ ಶಕ್ತಿ ಹೆಚ್ಚಿದೆ. ಬಸವರಾಜ ಗೋಪಾಲಯ್ಯ ನಮ್ಮ ಜೊತೆ ಕೈ ಜೋಡಿಸಿದ್ದಾರೆ. ಜೆಡಿಎಸ್ ನಮಗೆ ಬಲ ತುಂಬಿದೆ. ಕರ್ನಾಟಕದಲ್ಲಿ ಮೋದಿ ಹವಾ ಇದೆ. ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡ್ತಿದಾರೆ. ಕಾರ್ಯಕರ್ತರು ಮೋದಿಯವರ ಅಭಿವೃದ್ಧಿ ಬಗ್ಗೆ ಹೇಳ್ಬೇಕು. 26 ರಂದು ಎಲ್ಲಾ ಮತ ಚಲಾಯಿಸಿ. ಸದಾನಂದಗೌಡ್ರು ನಮ್ಮ ಜೊತೆ ಇದಾರೆ. ಎಲ್ಲಾ ಕಾರ್ಯಕ್ರಮ ದಲ್ಲಿ ಭಾಗವಹಿಸ್ತಿದ್ದಾರೆ. ಪಕ್ಷದ ಕೆಲಸಕ್ಕಾಗಿ ಚಾಮರಾಜನಗರಕ್ಕೆ ಹೋಗ್ತಿದ್ದಾರೆ. ಎಸ್ ಟಿ ಸೋಮಸೇಖರ್ ತಮ್ಮ ನಿರ್ಧಾರ ತಿಳಿಸಬೇಕು. ಅವರ ಮನಸ್ಸು ಒಂದು ಕಡೆ, ದೇಹ ಒಂದು ಕಡೆ ಇದೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.
೫ ಲಕ್ಷಕ್ಕಿಂತ ಅಧಿಕ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ. ಮೈತ್ರಿ ಸಂಬಂಧ ಹಿನ್ನಲೆ ಹೆಚ್ಚಿನ ವಿಶ್ವಾಸಿದೆ. ರಾಷ್ಟ್ರೀಯ ನಾಯಕರ ಪ್ರವಾಸ ರಾಜ್ಯಕ್ಕಿದೆ. ನಿನ್ನೆ ಅಮೀತ್ ಶಾ ರದ್ದು ಕಾರ್ಯಕರ್ತರ ಸಮಾವೇಶ ಆಗಿತ್ತು. ಮನೆ ಮನೆಗೆ ಹೋಗಿ, ಮತದಾರರನ್ನ ಕರ್ಕೊಂಡು ಬಂದು ಮತ ಹಾಕುವ ಪ್ರಯತ್ನ. ನಗರದಲ್ಲಿ ಹೆಚ್ಚು ಮತದಾನ ಪ್ರಮಾಣ ಆಗ್ತಿಲ್ಲ. ಎಲ್ಲರು ಮತದಾನ ಮಾಡಬೇಕು. ಈ ಬಗ್ಗೆ ಸೂಚನೆ ನೀಡಿದ್ದಾರೆ. ಕಾಂಗ್ರೆಸ್ ಸೋಲುವ ಭೀತಿಯಲ್ಲಿದೆ. ಜನರನ್ನ ದಾರಿ ತಪ್ಪಿಸುವ ಕೆಲಸ ಮಾಡ್ತಿದೆ. ಅಭಿವೃದ್ಧಿ ಕೆಲಸ ಸ್ಥಗಿತವಾಗಿದೆ. ನಮ್ಮ ಶಾಸಕರಿಗೆ ಅನುದಾನ ನೀಡ್ತಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.