Saturday, July 27, 2024

Latest Posts

ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿಗೆ ಜೈಲಿನಲ್ಲಿ ವಿಷಪ್ರಾಶನ: ಪಾಕ್ ಮಾಜಿ ಪ್ರಧಾನಿ ಆರೋಪ

- Advertisement -

International News: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿಗೆ ಜೈಲಿನಲ್ಲಿ ವಿಷಪ್ರಾಶನ ಮಾಡಿಸಲಾಗಿದೆ ಎಂದು ಇಮ್ರಾನ್ ಖಾನ್ ಆರೋಪಿಸಿದ್ದಾರೆ.

ಒಂದು ನಿವಾಸವನ್ನೇ ಜೈಲಿನ ರೀತಿ ಮಾಡಿ, ಬುಶ್ರಾ ಬೀಬಿಯನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಈ ಸ್ಥಳದಲ್ಲಿ ಬುಶ್ರಾ ಬೀಬಿಗೆ ವಿಷಪ್ರಾಶನ ಮಾಡಿಸಲಾಗಿದೆ. ಆಕೆಗೆ ಏನೇ ಆದರು ಅದಕ್ಕೆ ಸೇನಾ ಮುಖ್ಯಸ್ಥರೇ ಹೊಣೆ ಎಂದು ಇಮ್ರಾನ್ ಖಾನ್ ಆರೋಪಿಸಿದ್ದಾರೆ.

ಇನ್ನು ಬುಶ್ರಾಬೀಬಿ ಮೈ ಮೇಲೆ ಕಲೆಗಳಾಗಿದ್ದು, ಇದು ವಿಷ ಪ್ರಾಶನ ಮಾಡಿಸಿದಾಗಲೇ ಆಗುವ ಕಲೆ ಎಂದು ಇಮ್ರಾನ್ ಖಾನ್ ಆರೋಪಿಸಿದ್ದಾರೆ. ಅಲ್ಲದೇ, ಈ ಕೆಲಸದ ಹಿಂದಿರುವವರು ಯಾರು ಎಂದು ನನಗೆ ಗೊತ್ತಿದೆ. ಯಾವುದ್ಯಾವುದೋ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದರೆ, ನಾನು ಒಪ್ಪುವುದಿಲ್ಲ. ಶೌಖತ್ ಖಾನಂ ಆಸ್ಪತ್ರೆಯ ಡಾ.ಆಸಿಮ್ ಬಳಿಯೇ ಚಿಕಿತ್ಸೆ ಕೊಡಿಸಬೇಕು ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ಇನ್ನು ಇಮ್ರಾನ್ ಖಾನ್ ಕೋರಿಕೆಗೆ ಸ್ಪಂದಿಸಿರುವ ಕೋರ್ಟ್, ಅವರು ಹೇಳಿದ ವೈದ್ಯರ ಬಳಿಯೇ ಚಿಕಿತ್ಸೆ ಕೊಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಬುಶ್ರಾ ಬೀಬಿ, ನಾನು ಕುಡಿಯುವ ನೀರಿ ಕಹಿಯಾಗಿರುತ್ತಿತ್ತು. ಜೇನುತುಪ್ಪದಲ್ಲಿ ಏನೋ ಬೆರೆಸಿದ್ದಾರೆ. ನನ್ನ ಆಹಾರದಲ್ಲಿ ಟಾಯ್ಲೇಟ್ ಕ್ಲೀನರ್ ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇಸ್ರೇಲ್‌ನಲ್ಲಿ ಅಲ್ ಜಜೀರಾ ವಾಹಿನಿ ನಿಷೇಧ: ಬೆಂಜಮಿನ್ ನೆತನ್ಯಾಹು

ನಿಮ್ಮ ನಡೆಯೇ ನನ್ನದೂ ಆಗಿರಲಿದೆ. ಜೊತೆಯಾಗಿ ಮಂಡ್ಯವನ್ನು ಮತ್ತಷ್ಟು ಅಭಿವೃದ್ದಿ ಪಡಿಸೋಣ: ಸಂಸದೆ ಸುಮಲತಾ

ಅಡ್ಡದಾರಿಯಲ್ಲಿ ಚುನಾವಣೆ ಎದುರಿಸಲು ಹೋದರೆ, ಸೋಲು ಕಟ್ಟಿಟ್ಟ ಬುತ್ತಿ: ಅಮಿತ್ ಶಾ ವಿರುದ್ಧ ಸಿಎಂ ವಾಗ್ದಾಳಿ

- Advertisement -

Latest Posts

Don't Miss