Horoscope: ಖ್ಯಾತ ಜ್ಯೋತಿಷಿಗಳಾದ ನಾಗರಾಜ್ ಶರ್ಮಾ ಗುರೂಜಿ ದ್ವಾದಶ ರಾಶಿಗಳ ಫಲಾಫಲ ಹೇಳಿದ್ದಾರೆ. ಜೊತೆಗೆ ಆಯಾ ರಾಶಿಯವರು ಯಾವ ಸಂಖ್ಯೆಯನ್ನು ತಮ್ಮ ಕೈ ಮೇಲೆ ಬರೆದುಕೊಂಡು ಹೋದರೆ, ಉತ್ತಮ ಅಂತಾ ಹೇಳಿದ್ದಾರೆ.
ಮೇಷ: ಮೇಷ ರಾಶಿಯ 12ನೇಯ ಮನೆಯಲ್ಲಿ ರಾಹು ಇರುವ ಕಾರಣ, ನಿಮ್ಮ ಯಾರೋ ಹೆದರಿಸುವ ಪ್ರಯತ್ನ ಮಾಡುತ್ತಾರೆ. ನಿಮಗೆ ಯಾವುದೇ ತೊಂದರೆ ಆಗಬಾರದು. ನೀವು ಮಾಡುವ ಕೆಲಸದಲ್ಲಿ ಯಶಸ್ಸು ಗಳಿಸಬೇಕು ಎಂದಲ್ಲಿ, ನೀವು 2025ನೇ ಇಸವಿಯಲ್ಲಿ ನಿಮ್ಮ ಕೈ ಮೇಲೆ 5 ಎಂದು ಬರೆದುಕೊಂಡು ಹೋಗಬೇಕು.
ವೃಷಭ: ವೃಷಭ ರಾಶಿಯವರು ಈ ವರ್ಷ ತಾಳ್ಮೆ ಕಳೆದುಕೊಂಡು ನಷ್ಟ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಕೋಪ ತಾಪಗಳು ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಸಹನೆಯಿಂದ ವರ್ತಿಸಿ. ಭೂಮಿಗೆ ಸಂಬಂಧಿಸಿದ ವ್ಯವಹಾರ ಮಾಡುವಾಗ ಹುಷಾರಾಗಿರಬೇಕು. ಯಾವುದೇ ಕೆಲಸ ಪ್ರಾರಂಭಿಸುವಾಗ, ಕೈಯ ಹೆಬ್ಬೆರಳ ಮೇಲೆ 2 ಎಂದು ಬರೆದುಕೊಂಡು ಹೋಗಿ.
ಮಿಥುನ: ಮಿಥುನ ರಾಶಿಯವರು ಹಣ ಕಾಸಿನ ವಿಚಾರದಲ್ಲಿ ಹುಷಾರಾಗಿರಬೇಕು. ಸರ್ಕಾರಿ ನೌಕರರಾಗಿದ್ದಲ್ಲಿ, ಲಂಚ ಪಡೆದು ಸಿಕ್ಕಿ ಬೀಳುವ ಸಾಧ್ಯತೆ ಇರುತ್ತದೆ. ಹಾಾಗಾಗಿ ಲಂಚ ಕೊಡುವ ಮುನ್ನ ಮತ್ತು ಪಡೆಯುವ ಮುನ್ನ ಈ ರಾಶಿಯವರು ಎಚ್ಚರಿಕೆಯಿಂದ ಇರಬೇಕು. ಯಾವುದೇ ಕೆಲಸಕ್ಕೆ ಹೋಗುವಾಗ, ಅಂಗೈಯಲ್ಲಿ 4 ಎಂದು ಬರೆದುಕೊಂಡು ಹೋಗಬೇಕು.
ಕರ್ಕ: ಭೂಮಿ ಸಂಬಂಧ ವ್ಯಾಪಾರವಿದ್ದಲ್ಲಿ, ಈ ವರ್ಷ ನಿಮಗೆ ಉತ್ತಮವಾಗಿದೆ. ಹಾಗಾಗಿ ಯಾವುದೇ ಉತ್ತಮ ಕಾರ್ಯ ಮಾಡಲು ಹೋಗುವಾಗ, ಕೈ ಮೇಲೆ 5 ಎಂದು ಬರೆದುಕೊಂಡು ಹೋಗಬೇಕು. ಗೌರಿ, ಗಣೇಶ ಅಥವಾ ದುರ್ಗೆಗೆ ಸಂಬಂಧಿಸಿದ ದೇವಸ್ಥಾನಕ್ಕೆ ಹೋಗಿ, ಬಳಿಕ ನಿಮ್ಮ ಕೆಲಸ ಮುಂದುವರಿಸುವುದು ಉತ್ತಮ.
ಉಳಿದ ರಾಶಿಗಳ ಫಲಾಫಲ ತಿಳಿಯಲು ಈ ವೀಡಿಯೋ ನೋಡಿ.
ಗುರೂಜಿ ಜೊತೆ ಮಾತನಾಡಲು ಈ ನಂಬರ್ ಸಂಪರ್ಕಿಸಿ: 9448081987




