Health Tips: ಮಗು ಆರೋಗ್ಯವಾಗಿರಬೇಕು. ಅದರ ದೇಹದಲ್ಲಿ ಸರಿಯಾಗಿ ರೋಗ ನಿರೋಧಕ ಶಕ್ತಿ ಇರಬೇಕು. ಮಗುವಿನ ಬೆಳವಣಿಗೆ ಸರಿಯಾಗಿ ಆಗಬೇಕು ಎಂದಲ್ಲಿ, ಅದು ತಾಯಿಯ ಎದೆಹಾಲು ಕುಡಿಯುವುದು ತುಂಬಾ ಮುಖ್ಯ. ಈ ಬಗ್ಗೆ ವೈದ್ಯರಾದ ಸುರೇಂದ್ರ ಅವರು ಮಾಹಿತಿ ನೀಡಿದ್ದಾರೆ.
ಕೆಲವು ತಾಯಂದಿರು, ತಮ್ಮ ಸೌಂದರ್ಯ ಹಾಳಾಗುತ್ತದೆ ಎಂಬ ಕಾರಣಕ್ಕೆ, ಮಗುವಿಗೆ ಸ್ತನಪಾನ ಮಾಡಿಸಲು ಹಿಂಜರಿಯುತ್ತಾರೆ. ಆದರೆ ಅವರು ತಮ್ಮ ಸೌಂದರ್ಯದ ಬಗ್ಗೆ ಯೋಚನೆ ಮಾಡುವುದಕ್ಕಿಂತ ಹೆಚ್ಚು, ತಮ್ಮ ಮಗುವಿನ ಆರೋಗ್ಯಕರ ಭವಿಷ್ಯದ ಬಗ್ಗೆ ಚಿಂತಿಸಬೇಕು. ಏಕೆಂದರೆ, ಮಗುವಿಗೆ ತಾಯಿಯ ಹಾಲು ಎಂದರೆ, ಅಮೃತಕ್ಕೆ ಸಮಾನ.
ಇನ್ನು ಕೆಲವರಿಗೆ ಮಗು ಹುಟ್ಟಿದ ತಕ್ಷಣ, ಮಗುವಿಗೆ ಹಾಲು ಕುಡಿಸಬೇಕೋ, ಬೇಡವೋ ಎಂಬ ಗೊಂದಲವಿರುತ್ತದೆ. ಅಂಥವರು ಯಾವುದೇ ಗೊಂದಲಪಡದೇ, ಹುಟ್ಟಿದ ಮಗುವಿಗೆ ಧಾರಾಳವಾಗಿ ಸ್ತನಪಾನ ಮಾಡಿಸಬಹುದು. ಮೊದಲ 48 ಗಂಟೆಗಳ ಕಾಲ ತಾಯಿ ಮಗುವಿಗೆ ಕುಡಿಸುವ ಹಾಲು, ಅಮೃತಕ್ಕೆ ಸಮ ಎನ್ನುತ್ತಾರೆ ವೈದ್ಯ ಸುರೇಂದ್ರ. ಅದು ಅಮೃತ ಬಿಂದುವಿದ್ದ ಹಾಗೆ.
ಇದರ ಸೇವನೆಯಿಂದ ಹಿಮೋಗ್ಲೋಬಿನ್, ಪೋಷಕಾಂಶಗಳು, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣಗಳೆಲ್ಲವೂ ಹೆಚ್ಚಾಗಿರುತ್ತದೆ. ಈ 48 ಗಂಟೆಯಲ್ಲಿ ನೀವು ಮಗುವಿಗೆ ಕುಡಿಸುವ ಹಾಲಿನಿಂದ, ನಿಮ್ಮ ಮಗು ಜೀವನ ಪೂರ್ತಿ ಆರೋಗ್ಯಕರವಾಗಿ, ಹಲವು ರೋಗಗಳ ವಿರುದ್ಧ ಹೋರಾಡುವ ಗುಣವನ್ನು ಮೈಗೂಡಿಸಿಕೊಳ್ಳುತ್ತದೆ.
6 ತಿಂಗಳವರೆಗೂ ತಪ್ಪದೇ ಮಗುವಿಗೆ ಸ್ತನಪಾನ ಮಾಡಿಸಲೇಬೇಕು. 6 ತಿಂಗಳ ಬಳಿಕ, ರಾಗಿ ಮಣ್ಣಿ ಕೊಡಬಹುದು.. ಮತ್ತೆ ಸ್ವಲ್ಪ ತಿಂಗಳ ಬಳಿಕ ಅನ್ನ ತಿನ್ನಿಸಬಹುದು. ಇದರೊಂದಿಗೆ ಸ್ತನ ಪಾನ ಮಾಡಿಸಲಬೇಕೇ. ಒಂದೂವರೆಯಿಂದ ಎರಡು ವರ್ಷಗಳ ಕಾಲ ಸ್ತನ ಪಾನ ಮಾಡುವುದು ತುಂಬಾ ಮುಖ್ಯವಾಗಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..
ಮಕ್ಕಳಿಗೆ Vaccination ಯಾಕೆ ಬೇಕು..? ಕಾಯಿಲೆಗಳ ಬಗ್ಗೆ ಇರಲಿ ಎಚ್ಚರ!