ಶರಾಬು ಅನ್ನೋದು ಎಷ್ಟು ಕೆಟ್ಟದ್ದು ಅಂದ್ರೆ ಅದು ಒಂದು ಕುಟುಂಬದ ನೆಮ್ಮದಿಯನ್ನೇ ಸರ್ವನಾಶ ಮಾಡುತ್ತದೆ. ಮದ್ಯಪಾನ ಮಾಡುವವನಿಗೆ ತನ್ನನ್ನು ನಂಬಿರುವ ಪತ್ನಿ ಮಕ್ಕಳ ಬಗ್ಗೆ ಚಿಂತೆಯೇ ಇರುವುದಿಲ್ಲ. ಈ ಚಟ ಹಿಡಿದರೆ, ಚಟ್ಟ ಸೇರಿಸದೇ ಬಿಡುವುದಿಲ್ಲ. ಆದ್ರೆ ಮದ್ಯಪಾನ ಬಿಡಿಸಲು ಕೆಲವು ಮನೆ ಮದ್ದುಗಳಿದೆ. ಅದು ಯಾವುದು ಅಂತಾ ತಿಳಿಯೋಣ ಬನ್ನಿ..
ಮೊದಲನೇಯದಾಗಿ ಮದ್ಯಪಾನ ಬಿಡಬೇಕೆಂದರೆ, ವ್ಯಾಯಾಮ ಮಾಡಬೇಕು. ಮದ್ಯಪಾನ ಮಾಡುವವರು ಎಂದಿಗೂ ತಾವಾಗಿಯೇ ವ್ಯಾಯಾಮ ಮಾಡುವುದಿಲ್ಲ. ಹಾಗಾಗಿ ಅವರ ಪ್ರೀತಿಪಾತ್ರರು ಅವ್ರಿಗೆ ವ್ಯಾಯಾಮ ಮಾಡುವುದನ್ನ ಹೇಳಿಕೊಡಬೇಕು. ವ್ಯಾಯಾಮ ಮಾಡುವುದರಿಂದ ಹಲವು ಚಟಗಳನ್ನ ದೂರ ಮಾಡಬಹುದು.
ಎರಡನೇಯದಾಗಿ ಮದ್ಯಪಾನ ಮಾಡುವವರಿಗೆ ವೈದ್ಯರ ಬಳಿಕ ಆ್ಯಕ್ಯೂಪೆಂಚರ್ ಟ್ರೀಟ್ಮೆಂಟ್ ಕೊಡಸಬೇಕು. ಇದು ಸೂಜಿಯ ರೀತಿ ಮೊನಚಾದ ವಸ್ತುವನ್ನ ದೇಹದ ಕೆಲವು ಭಾಗಗಳಿಗೆ ಚುಚ್ಚಿ ಇಡಲಾಗತ್ತೆ. ಇದನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಮಾಡಕೂಡದು. ವೈದ್ಯರ ಬಳಿಯೇ ಈ ಚಿಕಿತ್ಸೆ ಕೊಡಿಸಬೇಕು. ಇದರಿಂದ ಮದ್ಯಪಾನದ ಚಟವನ್ನ ಬಿಡಿಸಬಹುದು.
ಮೂರನೇಯದಾಗಿ ಅಡುಗೆ ಮಾಡುವಾಗ, ತೆಂಗಿನ ಎಣ್ಣೆ ಬಳಸುವುದರಿಂದರೂ ಮದ್ಯಪಾನ ಚಟವನ್ನ ಕೊಂಚ ಕೊಂಚವಾಗಿ ಕಡಿಮೆ ಮಾಡಬಹುದು. ಅಲ್ಲದೇ, ಒಳ್ಳೆಯ ಸಸ್ಯಹಾರಿ ಊಟ, ತರಕಾರಿ, ಹಣ್ಣನ್ನೆಲ್ಲ ಅವರಿಗೆ ತಿನ್ನಲು ಕೊಡಿ. ಒಳ್ಳೆಯ ಆಹಾರ ಸೇವನೆಯಿಂದಲೂ ಕೂಡ, ಮದ್ಯಪಾನದ ಚಟ ಬಿಡಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ, ಮದ್ಯಪಾನ ಮಾಡುವವರಿಗೆ ತಾವು ಮದ್ಯಪಾನ ಬಿಡಬೇಕು ಅನ್ನುವ ಮನಸ್ಸಿರಬೇಕು. ಆಗಲೇ ಸಂಪೂರ್ಣವಾಗಿ ಚಟ ಬಿಡಿಸಲು ಸಾಧ್ಯವಾಗುತ್ತದೆ.
ಮಕ್ಕಳಲ್ಲಿ ಕ್ಯಾಲ್ಶಿಯಂ ಕಡಿಮೆ ಇದ್ದರೆ ಹೇಗೆ ಗೊತ್ತಾಗತ್ತೆ..? ಇದರ ಲಕ್ಷಣ ಮತ್ತು ಪರಿಹಾರವೇನು..?