Friday, March 14, 2025

Latest Posts

ಸಿಗರೇಟ್, ಶರಾಬು, ಗುಟ್ಕಾ ಎಲ್ಲದರ ಚಟ ಬಿಡಿಸುವುದು ಹೇಗೆ..?- ಭಾಗ 1

- Advertisement -

ಸಿಗರೇಟ್‌, ಶರಾಬು, ಗುಟ್ಕಾ ಇದೆಲ್ಲದರ ಚಟ ಇದ್ದವರು, ಆ ಚಟವನ್ನು ಬಿಟ್ಟು, ಅದಕ್ಕೆ ಸುರಿಯುವ ಹಣವನ್ನ ಸೇವ್‌ ಮಾಡಿದ್ರೆ, ಉತ್ತಮವಾಗಿ ಜೀವನ ನಡೆಸಬಹುದು. ಆದ್ರೆ ಒಮ್ಮೆ ಈ ಚಟ ಹಿಡಿದರೆ, ಬಿಡಿಸುವುದು ಮತ್ತು ಬಿಡುವುದು ತುಂಬಾ ಕಷ್ಟವಾಗುತ್ತದೆ. ಒಂದು ದಿನ ಸಿಗರೇಟ್ ಸೇದಿಲ್ಲ, ಶರಾಬು ಕುಡಿದಿಲ್ಲ, ಗುಟ್ಕಾ ತಿಂದಿಲ್ಲ ಅಂದ್ರೆ ಏನೋ ಕಳ್ಕೊಂಡಂಗೆ ಆಗತ್ತೆ ಅಂತಾ, ಅದರ ಸೇವನೆ ಮಾಡುವವರು ಹೇಳ್ತಾರೆ.

ಎಷ್ಟೋ ಜನ ಕುಡುಕರು, ಬೆಳ್ಳಂಬೆಳಿಗ್ಗೆ ಬಾರ್ ಎದುರು ನಿಂತಿರುತ್ತಾರೆ. ಯಾಕಂದ್ರೆ ಒಂದು ದಿನ ಬೆಳಿಗ್ಗೆ ತೀರ್ಥ ಸೇವೆನ ಮಾಡದಿದ್ದರೆ, ಅವರ ದೇಹದಲ್ಲಿ ಶಕ್ತಿ ಇರೋದಿಲ್ಲ. ಮೈ ಕೈ ನಡುಗೋಕ್ಕೆ ಶುರುವಾಗತ್ತೆ. ಹಾಗಾಗಿ ನಮಗೆ ಶರಾಬು ಬಿಟ್ಟು ಬದುಕೋಕ್ಕೆ ಆಗಲ್ಲ ಅಂತಾ ಅವರು ಹೇಳ್ತಾರೆ. ಆದ್ರೆ ಅವರ ಮನೆಯವರು ಮನಸ್ಸು ಮಾಡಿದ್ರೆ, ಆ ಚಟವನ್ನು ಬಿಡಿಸಬಹುದು. ಅದು ಹೇಗೆ ಅಂತ ನಾವು ನಿಮಗೆ ಹೇಳುತ್ತೇವೆ ಕೇಳಿ.

ಕೆಟ್ಟ ಚಟವನ್ನು ಬಿಡಿಸಲು ಇರುವ ಸರಳ ಉಪಾಯ, ಪ್ರಾಣಾಯಾಮ ಮಾಡುವುದು. ಪ್ರಾಣಾಯಾಮ ಮಾಡುವುದರಿಂದ ಚಂದ್ರನಾಡಿ ಸಕ್ರೀಯವಾಗುತ್ತದೆ. ಇದು ಸಕ್ರೀಯವಾಗುವುದರಿಂದ ನಿಮ್ಮ ವಿಲ್ ಪವರ್‌ ಹೆಚ್ಚುತ್ತದೆ. ವಿಲ್ ಪವರ್ ಹೆಚ್ಚಿದಾಗ, ನಿಮ್ಮ ಮನಸ್ಸು ಗಟ್ಟಿಯಾಗುತ್ತದೆ. ನೀವು ಚಟ ಬಿಡಲು ಇದು ಸಹಾಯವಾಗುತ್ತದೆ.

ಎರಡನೇಯದಾಗಿ ಹಸಿ ಶುಂಠಿ ತೆಗೆದುಕೊಳ್ಳಿ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ, ಇದಕ್ಕೆ ನಿಂಬೆರಸವನ್ನು ಮತ್ತು ಕೊಂಚ ಕಪ್ಪು ಉಪ್ಪನ್ನು ಸೇರಿಸಿ, ಇದನ್ನು ಸೂರ್ಯನ ಬಿಸಿಲಿನಲ್ಲಿ ಒಣಗಿಸಿ. ಇದರಿಂದ ಪೂರ್ತಿ ನೀರಿನ ಅಂಶ ಹೋದ ಬಳಿಕ, ಇದನ್ನು ಯಾರಿಗೆ ಚಟವಿದೆಯೋ, ಅವರ ಜೇಬಿನಲ್ಲಿಡಿ. ಅವರಿಗೆ ಶರಾಬು ಕುಡಿಯಲು, ಗುಟ್ಕಾ ತಿನ್ನಲು, ಸಿಗರೇಟ್ ಸೇದಲು ಮನಸ್ಸಾದಾಗ, ಒಂದೊಂದು ಶುಂಠಿ ಪೀಸ್ ತೆಗೆದು ಬಾಯಿಗೆ ಹಾಕಿ, ಅದನ್ನ ಚೀಪುತ್ತಿರಬೇಕು. ಹೀಗೆ ಮಾಡಿದ್ದಲ್ಲಿ, ಆರಾಮವಾಗಿ ಸಿಗರೇಟ್, ಗುಟ್ಕಾ, ಶರಾಬು ಸೇವನೆಯ ಚಟ ಬಿಡಿಸಿ ಹೋಗುತ್ತದೆ.

30 ದಿನಗಳ ಕಾಲ ಈ ಕೆಲಸವನ್ನು ನೀವು ಮಾಡಿದ್ದಲ್ಲಿ, ಮತ್ತೆ ನಿಮಗೆ ಸಿಗರೇಟ್ ಸೇವಿಸಲು, ಶರಾಬು ಕುಡಿಯಲು ಮತ್ತು ಗುಟ್ಕಾ ತಿನ್ನಲು ಮನಸ್ಸಾಗುವುದಿಲ್ಲ. ಹಲವು ಆಯುರ್ವೇದಿಕ್ ಆಸ್ಪತ್ರೆಗಳಲ್ಲಿ, ಮದ್ಯ ವ್ಯಸನವನ್ನು ಬಿಡಿಸಲು ಇದೇ ಔಷಧಿಯನ್ನು ಬಳಸಲಾಗತ್ತೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ಮುಂದಿನ ಭಾಗದಲ್ಲಿ ತಿಳಿಯೋಣ..

ನೀವು ಯೋಗ ಮಾಡುವವರಾಗಿದ್ದಲ್ಲಿ ಈ ಆಹಾರವನ್ನು ಸೇವಿಸಬೇಡಿ..

ನಿಮ್ಮ ಕಿಚನ್ನಲ್ಲಿ ಇರುವ ಈ 3 ವಸ್ತುಗಳನ್ನು ಈಗಲೇ ಹೊರಹಾಕಿ..

ಈ ತಪ್ಪು ಮಾಡದಿದ್ರೆ ನಿಮ್ಮ ಸೌಂದರ್ಯ ಇನ್ನೂ ಚೆಂದವಾಗತ್ತೆ..

- Advertisement -

Latest Posts

Don't Miss