Health tips: ವೈದ್ಯರು ಕಣ್ಣಿನ ಆರೋಗ್ಯದ ಬಗ್ಗೆ ಈಗಾಗಲೇ ಹಲವಾರು ಟಿಪ್ಸ್ ಕೊಟ್ಟಿದ್ದಾರೆ. ಅದೇ ರೀತಿ ಇಂದು ಕೂಡ ಕಣ್ಣಿನ ಆರೋಗ್ಯ ಅತ್ಯುತ್ತಮವಾಗಿರಬೇಕು ಅಂದ್ರೆ, ನಾವು ಏನು ಮಾಡಬೇಕು..? ಯಾವ ರೀತಿಯ ಆಹಾರ ಸೇವಿಸಬೇಕು ಅನ್ನೋ ಬಗ್ಗೆ ವೈದ್ಯರು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ನಮ್ಮ ಕಣ್ಣಿನ ಆರೋಗ್ಯ ಉತ್ತಮವಾಗಿರಬೇಕು ಅಂದ್ರೆ, ನಮ್ಮ ಆಹಾರ ಆರೋಗ್ಯಕರವಾಗಿರಬೇಕು. ನಮ್ಮ ಪ್ಲೇಟ್ನಲ್ಲಿ ಆರೋಗ್ಯಕರ ಆಹಾರಗಳಿರಬೇಕು. ಸೊಪ್ಪು, ಮೊಳಕೆ ಕಾಳು, ಡ್ರೈಫ್ರೂಟ್ಸ್, ಹಸಿ ತರಕಾರಿ, ಹಣ್ಣು ಇವುಗಳ ಸೇವನೆಯಿಂದ ನಾವು ನಮ್ಮ ದೇಹದ ಮತ್ತು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಅದರಲ್ಲೂ ವಿಟಾಮಿನ್ ಇ ಮತ್ತು ವಿಟಾಮಿನ್ ಸಿ ಹೇರಳವಾಗಿರುವ ಆಹಾರದ ಸೇವನೆಯಿಂದ ನಮ್ಮ ಕಣ್ಣು ಆರೋಗ್ಯವಾಗಿರುತ್ತದೆ. ಕಿತ್ತಳೆ, ಮೊಸಂಬಿ ಹಣ್ಣುಗಳಲ್ಲಿ ವಿಟಾಮಿನ್ ಸಿ ಇರುತ್ತದೆ. ಹಾಗಾಗಿ ಇಂಥ ಹಣ್ಣುಗಳ ಸೇವನೆ ಉತ್ತಮ. ಇನ್ನು ನೀವು ನಾನ್ವೆಜ್ ತಿನ್ನುವವರಾಗಿದ್ದಲ್ಲಿ, ಮೀನಿನ ಸೇವನೆ ಮಾಡುವುದು ಒಳ್ಳೆಯದು.
ನೆನೆಸಿದ ಚೀಯಾಸೀಡ್ಸ್, ಬ್ಲಾಕ್ಸೀಡ್ಸ್, ವಾಲ್ನಟ್, ಬಾದಾಮಿ, ಕಾಜುವನ್ನ ಸೇವಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ನಿಮ್ಮ ಆಹಾರ ಹೇಗಿರಬೇಕು ಎಂದರೆ, ನಿಮಗೆ ಶುಗರ್ ಖಾಯಿಲೆ ಬರದ ರೀತಿಯಲ್ಲಿರಬೇಕು. ಏಕೆಂದರೆ, ಹಲವರಿಗೆ ಶುಗರ್ ಬರುವುದರಿಂದಲೇ, ದೃಷ್ಟಿ ದೋಷ ಉಂಟಾಗುತ್ತದೆ. ಹಾಗಾಗಿ ಆದಷ್ಟು ಆರೋಗ್ಯಕರ ಆಹಾರವನ್ನೇ ಸೇವಿಸಿರಿ. ಕಣ್ಣಿನ ಆರೋಗ್ಯದ ಬಗ್ಗೆ ಇನ್ನಷ್ಟು ತಿಳಿಯಲು ಈ ವೀಡಿಯೋ ನೋಡಿ..




