Friday, November 14, 2025

Latest Posts

ಮನೆಯಲ್ಲೇ ಸ್ವೀಟ್ ಕಾರ್ನ್ ಕಟ್ಲೇಟ್ ಮಾಡೋದು ಹೇಗೆ..?

- Advertisement -

Recipe: ಸಂಜೆಯಾದ ಮೇಲೆ ಏನಾದರೂ ಟೇಸ್ಟಿಯಾಗಿರುವ ತಿಂಡಿ ತಿನ್ನಲೇಬೇಕು ಅಂತಾ ಎಲ್ಲರಿಗೂ ಅನ್ನಿಸುತ್ತದೆ. ಹಾಗಾಗಿ ಹಲವರು ಮನೆಯಲ್ಲೇ ಸ್ನ್ಯಾಕ್ಸ್ ಮಾಡಿಕೊಂಡು ತಿನ್ನುತ್ತಾರೆ. ಹಾಗಾಗಿ ನಾವಿಂದು ಮನೆಯಲ್ಲೇ ಈಸಿಯಾಗಿ ಸ್ವೀಟ್ ಕಾರ್ನ್ ಕಟ್ಲೇಟ್ ಮಾಡುವುದು ಹೇಗೆ ಎಂದು ಹೇಳಲಿದ್ದೇವೆ.

ಒಂದು ಬೌಲ್ ಸ್ವೀಟ್ ಕಾರ್ನ್, ಒಂದು ಬೌಲ್ ಅವಲಕ್ಕಿ, ಒಂದು ಸ್ಪೂನ್ ಖಾರದ ಪುಡಿ, ಧನಿಯಾ ಪುಡಿ,  ಕರಿಬೇವು, ಕೊಂಚ ಶುಂಠಿ, ಕೊತ್ತೊಂಬರಿ ಸೊಪ್ಪು, ಕೊಂಚ ಹುಣಸೆ ಪೇಸ್ಟ್, ನಿಂಬೆರಸ, ಆಮ್ಚುರ್ ಪೌಡರ್, 1 ಬೇಯಿಸಿ ಮ್ಯಾಶ್ ಮಾಡಿದ ಬಟಾಟೆ, ರುಚಿಗೆ ತಕ್ಕಷ್ಟು ಉಪ್ಪು. ಕೊಂಚ ಎಣ್ಣೆ.

ಮೊದಲು ಒಂದು ಬೌಲ್ ತೆಗೆದುಕೊಂಡು, ಅದಕ್ಕೆ ಆಲೂಗಡ್ಡೆ, ಪೇಸ್ಟ್ ಮಾಡಿದ ಕಾರ್ನ್, ಪುಡಿ ಮಾಡಿದ ಅವಲಕ್ಕಿ, ಖಾರದ ಪುಡಿ, ಧನಿಯಾ ಪುಡಿ, ಕೊತ್ತೊಂಬರಿ ಸೊಪ್ಪು, ಶುಂಠಿ, ಕರಿಬೇವು, ಹುಣಸೆ ಪೇಸ್ಟ್, ನಿಂಬೆರಸ, ಆಮ್ಚುರ್‌ ಪೌಡರ್, ಉಪ್ಪು ಇವಿಷ್ಟನ್ನು ಸೇರಿಸಿ ಮಿಕ್ಸ್ ಮಾಡಿ. ಕಟ್ಲೇಟ್ ಶೇಪ್ ಕೊಡಿ.

ಈಗ ತವ್ವಾ ಬಿಸಿ ಮಾಡಿ, ಅದರ ಮೇಲೆ ಸ್ವಲ್ಪ ಎಣ್ಣೆ ಹಾಕಿ, ರೆಡಿ ಮಾಡಿದ ಕಟ್ಲೇಟ್‌ ಮಿಶ್ರಣವನ್ನು ಹಾಕಿ, ತವ್ವಾ ಫ್ರೈ ಮಾಡಿದ್ರೆ ಸ್ವೀಟ್ ಕಾರ್ನ್ ಕಟ್ಲೇಟ್ ರೆಡಿ. ಈ ರೆಸಿಪಿ ಹೇಗೆ ಮಾಡುತ್ತಾರೆ ಅನ್ನೋದನ್ನ ನೋಡಬೇಕೆಂದಲ್ಲಿ ಈ ವೀಡಿಯೋ ನೋಡಿ..

ಕೊರೋನಾ ನಂತರ ತಲೆಕೂದಲು ಉದುರುವಿಕೆ ಅತಿಯಾಗಿದೆಯೇ?

ಬ್ಯೂಟಿ ಪಾರ್ಲರ್ ಗೆ ಹೋಗದೆ ಮನೆಯಲ್ಲೇ ನಮ್ಮ Skin Care ಯಾವರೀತಿ ಮಾಡಿಕೊಳ್ಳೊದು ?

ಲೇಸರ್ ಟ್ರೀಟ್ಮೆಂಟ್ ಒಳ್ಳೆಯದ್ದೋ..? ಕೆಟ್ಟದ್ದೋ..?

- Advertisement -

Latest Posts

Don't Miss