ಚಿಕ್ಕ ಮಕ್ಕಳಿಗೆ ನಾವು ಹೇಳಿಕೊಡದಿದ್ದರೂ ಅವರು ಹಲವು ವಿಷಯಗಳನ್ನು ಕಲಿಯುತ್ತಾರೆ. ಹೊಡೆಯುವುದು, ಕಚ್ಚುವುದು, ಒದೆಯುವುದು, ಇವನ್ನೆಲ್ಲ ಹೇಳಿಕೊಡುವುದೇ ಬೇಡ. ತನ್ನಿಂದ ತಾನೇ ಕಲಿಯುತ್ತಾರೆ. ಅದೇ ರೀತಿ ಬಾಯಿಗೆ ಬೆರಳು ಹಾಕಿ ಚೀಪುವುದು ಕೂಡ ಕಲಿಯುತ್ತಾರೆ. ಕೆಲ ಮಕ್ಕಳು ಒಂದೆರಡು ವರುಷಕ್ಕೆ ಈ ಚಟವನ್ನು ಬಿಡುತ್ತಾರೆ. ಆದ್ರೆ ಕೆಲ ಮಕ್ಕಳು 5ರಿಂದ 6 ವರ್ಷವಾದರೂ ಬಾಯಿಗೆ ಬೆರಳು ಹಾಕಿಕೊಂಡೇ ಮಲಗುತ್ತಾರೆ. ಹಾಗಾದ್ರೆ ಮಕ್ಕಳು ಬಾಯಿಗೆ ಬೆರಳು ಹಾಕುವುದನ್ನು ಹೇಗೆ ತಪ್ಪಿಸಬೇಕು..? ಇದಕ್ಕೆ ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಸ್ಟ್ರಾಬೇರಿ ಮತ್ತು ಕಲ್ಲಂಗಡಿ ಹಣ್ಣಿನ ಸ್ಮೂದಿ..
3 ವರ್ಷದೊಳಗಿನ ಮಕ್ಕಳು ಬಾಯಿಗೆ ಬೆರಳು ಹಾಕಿ ಚಿಪೋದು ಸಾಮಾನ್ಯ ವಿಷಯ. ಆದ್ರೆ ನಿಮ್ಮ ಮಕ್ಕಳಿಗೆ 3 ವರ್ಷ ದಾಟಿದರೂ ಕೂಡ, ಮಗು ಬಾಯಿಗೆ ಬೆರಳು ಹಾಕುವುದನ್ನು ನಿಲ್ಲಿಸಿಲ್ಲವೆಂದಲ್ಲಿ, ಹಲ್ಲಿನಲ್ಲಿ, ನಾಲಿಗೆಯಲ್ಲಿ ಏನಾದರೂ ಸಮಸ್ಯೆ ಇರಬಹುದು. ಅಥವಾ ಮಗುವಿನ ಬೆಳವಣಿಗೆಯಲ್ಲಿ ಸಮಸ್ಯೆ ಇರಬಹುದು ಎಂದರ್ಥ.
ಸಧೃಡ, ಗಟ್ಟಿಮುಟ್ಟಾದ ಆರೋಗ್ಯಕರ ಕೇಶರಾಶಿ ಪಡೆಯಲು ಹೀಗೆ ಮಾಡಿ..
ಈ ಚಟ ಬಿಡಿಸಲು ನೀವು ಮಗುವಿಗೆ ಗ್ಲೌಸ್ ಹಾಕಬಹುದು. ಅಥವಾ ಕೈ ಮುಚ್ಚುವಂತೆ ಉದ್ದ ತೋಳಿನ ಅಂಗಿ ಹಾಕಬಹುದು. ಅಥವಾ ಕೈ ಬೆರಳಿಗೆ ಹುಳಿ, ಕಹಿ ಮುಟ್ಟಿಸಬಹುದು. ಹೀಗೆ ಬೆರಳು ಚೀಪುವುದನ್ನ ಬಿಡಿಸಬಹುದು. ಕೆಲವೊಮ್ಮೆ ಮಕ್ಕಳಿಗೆ ಹೆದರಿಕೆಯಾದಾಗ ಮಕ್ಕಳು ಬಾಯಿಗೆ ಬೆರಳು ಹಾಕುತ್ತಾರೆ. ತಮ್ಮ ತಂಗಿಯನ್ನು ನೋಡಿಯೂ ಬಾಯಿಗೆ ಬೆರಳಿಡಬಹುದು. ಅಥವಾ ಅಭ್ಯಾಸವಾದ ಕಾರಣ ಬಾಯಿಗೆ ಬೆರಳು ಹಾಕಬಹುದು. ಆದ್ರೆ ನೀವೇನೇ ಮಾಡಿದ್ರೂ, ಈ ಚಟ ಬಿಡಲಿಲ್ಲವೆಂದಲ್ಲಿ, ಈ ಬಗ್ಗೆ ವೈದ್ಯರ ಬಳಿ ವಿಚಾರಿಸುವುದು ಉತ್ತಮ.




