Spiritual: ಶ್ರೀವಿಷ್ಣುವನ್ನು ಹಿಂದೂಗಳ ಸರ್ವೋಚ್ಛ ದೇವರೆಂದು ಹೇಳಲಾಗುತ್ತದೆ. ಹಲವು ರೂಪ ಧಾರಣೆ ಮಾಡಿ, ಲೋಕ ಕಲ್ಯಾಣ ಮಾಡಿರುವ ಶ್ರೀವಿಷ್ಣು, ಈಗಲೂ ಕೂಡ ತಿರುಪತಿ ತಿಮ್ಮಪ್ಪನ ರೂಪದಲ್ಲಿ ನಮ್ಮೆಲ್ಲರ ಕಷ್ಟವನ್ನು ಪರಿಹರಿಸುತ್ತಿದ್ದಾನೆ. ಹಾಗಾದರೆ ಶ್ರೀವಿಷ್ಣುವಿನ ಜನ್ಮವಾಗಿದ್ದು ಹೇಗೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಹಲವು ಪುರಾಣ ಕಥೆಗಳಲ್ಲಿ ಶ್ರೀವಿಷ್ಣುವಿನ ಜನ್ಮದ ಬಗ್ಗೆ ಬೇರೆ ಬೇರೆ ಕಥೆಗಳಿದೆ. ಶ್ರೀವಿಷ್ಣು ಸ್ವಯಂಭೂ ಎಂದು ಹೇಳಲಾಗಿದೆ. ಇನ್ನು ಕೆಲ ಕಥೆಗಳಲ್ಲಿ ಶಿವನು ಶ್ರೀವಿಷ್ಣುವಿನ ಜನ್ಮದಾತನೆಂದು ಹೇಳಲಾಗಿದೆ. ಶಿವಪುರಾದ ಪ್ರಕಾರ, ಪಾರ್ವತಿ ಮತ್ತು ಶಿವ ಒಮ್ಮೆ ಏಕಾಂತದಲ್ಲಿರುತ್ತಾರೆ. ಹೀಗಿರುವಾಗ, ಈ ಲೋಕದಲ್ಲಿ ಮತ್ತೊಂದು ಶಕ್ತಿಯ ಸೃಷ್ಟಿಯಾಗಬೇಕೆಂದು ಶಿವ ಹೇಳುತ್ತಾನೆ. ಆಗ ಪಾರ್ವತಿಯೂ ಇದಕ್ಕೆ ಒಪ್ಪಿಗೆ ಸೂಚಿಸುತ್ತಾಳೆ.
ಆಗ ಶಿವ ತನ್ನ ಅಮೃತ ಹಸ್ತದಿಂದ ಓರ್ವ ಪುರುಷನಿಗೆ ಜನ್ಮ ನೀಡುತ್ತಾನೆ. ಆ ಪುರುಷನ ಜನ್ಮದಿಂದ ಇಡೀ ಲೋಕಕ್ಕೆ ಒಂದು ಪ್ರಕಾಶಮಾನವಾದ ಬೆಳಕು ಸಿಗುತ್ತದೆ. ಅವನೇ ಶ್ರೀವಿಷ್ಣು. ಶಿವನ ಆಜ್ಞೆಯಂತೆ ಶ್ರೀವಿಷ್ಣು ನಿರಂತರ ತಪಸ್ಸು ಮಾಡುತ್ತಾನೆ. ಆಗ ಭೂಮಿಯ ಮೇಲೆ ಜಲ ಉತ್ಪತ್ತಿಯಾಗುತ್ತದೆ. ಬಳಿಕ ಪ್ರಕೃತಿ, ಗಿಡ ಮರಗಳೆಲ್ಲ ಉತ್ಪತ್ತಿಯಾದವು.
ಬಳಿಕ ರಾಜಸಿಕ, ತಾಮಸಿಕ, ಸಾತ್ವಿಕತೆಯ ಉತ್ಪತ್ತಿ. ನಂತರ ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳ ಉತ್ಪತ್ತಿಯಾಯಿತು. ಬಳಿಕ ಪಂಚಭೂತಗಳ ಉತ್ಪತ್ತಿಯಾಯಿತು. ಈ ರೀತಿ ಪ್ರಪಂಚದ ಹಲವು ಜೀವಿಗಳು ಉತ್ಪತ್ತಿಯಾಗುವ ಮೂಲಕ, ಸುಂದರ ಪ್ರಪಂಚ ಸೃಷ್ಟಿಯಾಯಿತು ಎಂದು ಹೇಳಲಾಗಿದೆ.. ಆದರೆ ವಿಷ್ಣುಪುರಾಣದ ಪ್ರಕಾರ, ಶ್ರೀವಿಷ್ಣು ಸ್ವಯಂಭೂ ಎಂದು ಹೇಳಲಾಗಿದೆ.
Ganesh Festival Special: ಗಣಪನ ಅವಕೃಪೆಯಿಂದ ಅಡೆತಡೆ ಎದುರಿಸಿದ ಶಿವ..
Ganesh Festival Special: ಗಣಪತಿಗೆ ಏಕದಂತನೆಂದು ಕರೆಯಲು ಕಾರಣವೇನು..?