ಒಂದು ಕುಟುಂಬವನ್ನು ಸಾಕಲು ಗಂಡು ಎಷ್ಟು ಕಷ್ಟಪಡುತ್ತಾನೋ, ಅಷ್ಟೇ ಆ ಮನೆಯನ್ನು ನಿಭಾಯಿಸಿಕೊಂಡು ಹೋಗಲು ಹೆಣ್ಣು ಕೂಡ ಕಷ್ಟಪಡುತ್ತಾಳೆ. ಈ ವೇಳೆ ಆಕೆಯಲ್ಲಿ ಕೆಲ ಸಾತ್ವಿಕ ಗುಣಗಳಿರಬೇಕು. ಹಾಗಾದ್ರೆ ಹೆಣ್ಣಿನಲ್ಲಿ ಯಾವ 4 ಗುಣವಿದ್ದರೆ ಆಕೆಯ ಜೀವನ ಉತ್ತಮವಾಗಿರುತ್ತದೆ ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ಗುಣ ತಾಳ್ಮೆ. ಯಾವ ಹೆಣ್ಣು ತಾಳ್ಮೆಗೆಡದೇ, ಜೀವನ ನಿಭಾಯಿಸುತ್ತಾಳೋ, ಅವಳು ಯಾವಾಗಲೂ ಖುಷಿಯಾಗಿರುತ್ತಾರೆ. ಸಕಲ ಸುಖಗಳನ್ನು ಪಡೆಯುತ್ತಾಳೆ. ಆಕೆ ತಾಳ್ಮೆಯಿಂದ ಇದ್ದಷ್ಟು ಆಕೆಯ ಮೇಲೆ ಎಲ್ಲರಿಗೂ ಪ್ರೀತಿ ಹೆಚ್ಚುತ್ತದೆ. ಮತ್ತು ತಾಳ್ಮೆಯುಳ್ಳ ಹೆಣ್ಣು ಎಂದಿಗೂ ತನ್ನ ಮನೆಯವರ ಗೌರವವನ್ನು ಕಾಪಾಡುತ್ತಾಳೆ.
ಮರಣಕ್ಕೂ ಮುನ್ನ ಭೀಷ್ಮ ಕರ್ಣನ ಬಳಿ ಹೇಳಿದ ಸತ್ಯಗಳಿವು..
ಎರಡನೇಯ ಗುಣ ಅತಿಥಿಯನ್ನು ಮತ್ತು ಪತಿಯ ಮನೆಯವರನ್ನು ಗೌರವಿಸುವ ಗುಣ. ಪತಿಯಾದವನು ಪತ್ನಿಯನ್ನ ಮತ್ತು ಆಕೆಯ ತವರು ಮನೆಯವರನ್ನ ಗೌರವಿಸಬೇಕು. ಅದೇ ರೀತಿ ಪತ್ನಿ ಕೂಡ ಪತಿಯನ್ನ ಮತ್ತು ಅವರ ಮನೆಯವರನ್ನ, ಸಂಬಂಧಿಕರನ್ನ ಗೌರವಿಸಬೇಕು. ಒಬ್ಬರಿಗೊಬ್ಬರು ಗೌರವ, ಪ್ರೀತಿ ನೀಡಿದಾಗಲೇ, ಸಂಬಂಧ ಗಟ್ಟಿಯಾಗಿರುತ್ತದೆ.
ಮೂರನೇಯ ಗುಣ ಸಿಹಿಯಾದ, ಕಪಟವಿಲ್ಲದ ಮಾತನ್ನಾಡುವ ಗುಣ. ಒಂದು ಮನೆಯಲ್ಲಿ ನೆಮ್ಮದಿ, ಸುಖ, ಶಾಂತಿ ಇರಬೇಕು ಅಂದ್ರೆ ಆ ಮನೆಯ ಹೆಣ್ಣಿನ ಮಾತು ಮೃದುವಾಗಿರಬೇಕು. ಅದಕ್ಕೆ ತಕ್ಕ ಹಾಗೆ ಪತಿಯ ನಡೆ ಕೂಡ ಉತ್ತಮವಾಗಿರಬೇಕು. ಕೆಲ ಹೆಣ್ಣು ಮಕ್ಕಳು ಮೊದಲಿಂದಲೇ ವಾಚಾಳಿಯರಾಗಿರುತ್ತಾರೆ. ಇನ್ನು ಕೆಲವರು ಪತಿಯ ನಡೆ ಸರಿಯಾಗಿ ಇಲ್ಲದಿದ್ದಾಗ, ವಾಚಾಳಿಯರಾಗುತ್ತಾರೆ. ಹಾಗಾಗಿ ಪತಿ ಪತ್ನಿ ಇಬ್ಬರೂ ಮೃದುವಾಗಿ ಮಾತನಾಡಿದರೆ, ಆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರುತ್ತದೆ.
ಹೃದಯ ಸಂಬಂಧಿ ಖಾಯಿಲೆ ಬರುತ್ತಿದೆ ಎಂದರೆ ಈ ಸೂಚನೆ ಸಿಗುತ್ತದೆ ನೋಡಿ..
ನಾಲ್ಕನೇಯ ಗುಣ ನಂಬಿಕಸ್ತೆಯಾಗಿರಬೇಕು. ಓರ್ವ ಹೆಣ್ಣು ನೆಂಬಿಕಸ್ತೆಯಾಗಿದ್ದರಷ್ಟೇ ಆ ಮನೆಯಲ್ಲಿ ನೆಮ್ಮದಿ ಇರುತ್ತದೆ. ಆದ್ರೆ ಒಂದು ಸಲ ಆಕೆ ನಂಬಿಕೆ ದ್ರೋಹ ಮಾಡಿದ್ದಲ್ಲಿ, ಮತ್ತೆಂದೂ ಆ ಮನೆ ಜನ ಆಕೆಯ ಮೇಲೆ ನೆಂಬಿಕೆ ಇಡುವುದಿಲ್ಲ. ಹಾಗಾಗಿ ಓರ್ವ ಹೆಣ್ಣು ಎಂದಿಗೂ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡಬೇಕು.