Health Tips: ನಾಯಿ ಕಚ್ಚಿದರೆ 14 ಇಂಜೆಕ್ಷನ್ ತೆಗೆದುಕೊಳ್ಳಬೇಕು ಅನ್ನೋ ಮಾತಿದೆ. ಇದು ನಿಜ ಕೂಡ. ಆದರೆ ಕೆಲವರು ನಾಯಿ ಕಚ್ಚಿದರೆ, ಮತ್ತೆ ಸರಿ ಹೋಗುತ್ತದೆ ಎಂದು ಅದನ್ನು ನಿರ್ಲಕ್ಷಿಸಿಬಿಡುತ್ತಾರೆ. ಅಂಥ ತಪ್ಪನ್ನು ಎಂದಿಗೂ ಮಾಡಬೇಡಿ. ಹಾಗಾದ್ರೆ ಯಾಕೆ ನಾವು ನಾಯಿ ಕಡಿತವನ್ನು ನಿರ್ಲಕ್ಷಿಸಬಾರದು ಅಂತಾ ತಿಳಿಯೋಣ ಬನ್ನಿ..
ಸಾಕು ಪ್ರಾಣಿಗಳಲ್ಲಿ ಅತ್ಯಂತ ಪ್ರೀತಿಯ, ನಂಬಿಕೆಯ ಪ್ರಾಣಿ ಅಂದ್ರೆ ನಾಯಿ. ಆದರೆ ನೀವು ನಾಯಿ ಕಡಿತವನ್ನು ನಿರ್‌ಲಕ್ಷಿಸಿದರೆ, ಅದು ನಿಮ್ಮ ಪ್ರಾಣವನ್ನೇ ತೆಗೆದುಕೊಳ್ಳುತ್ತದೆ. ಅದರಲ್ಲೂ ಹುಚ್ಚು ನಾಯಿ ಕಚ್ಚಿ, ರೇಬಿಸ್ ಬಂದು ಬದುಕಿರುವವರ ಸಂಖ್ಯೆ ಕಡಿಮೆ. ಹಾಗಾಗಿ ನಾಯಿ ಕಚ್ಚಿದಾಗ ಅದನ್ನು ನಿರ್ಲಕ್ಷಿಸದೇ, ಸರಿಯಾಗಿ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.
ಯಾಕಂದ್ರೆ ಹುಚ್ಚು ನಾಯಿ ಕಚ್ಚಿದಾಗ ಅದರ ವೈರಸ್ ನರಗಳ ಮೂಲಕ ಮೆದುಳು ಸೇರುತ್ತದೆ. ಆಗ ಆ ಹುಚ್ಚು ಮನುಷ್ಯನ ನೆತ್ತಿಗೇರಿ, ಅವನ ಪ್ರಾಣವೇ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ನಾಯಿ ಕಚ್ಚಿದರೆ, ತಕ್ಷಣ ಚಿಕಿತ್ಸೆ ತೆಗೆದುಕೊಳ್ಳುವುದು ಮುಖ್ಯವಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..