Spiritual: ಚಾಣಕ್ಯ ನೀತಿ ಬಗ್ಗೆ ನಾವು ನಿಮಗೆ ಹಲವು ವಿಷಯಗಳನ್ನು ಹೇಳಿದ್ದೇವೆ. ಅದೇ ರೀತಿ ನಾವು ಜೀವನದಲ್ಲಿ ಯಶಸ್ವಿಯಾಗಬೇಕು. ನಮ್ಮ ಗುರಿ ನಾವು ತಲುಪಬೇಕು ಅಂದ್ರೆ, ಕೆಲ ವಿಷಯಗಳನ್ನು ನಿಯಂತ್ರಿಸಬೇಕು. ಅವು ಯಾವುದು ಅಂತಾ ತಿಳಿಯೋಣ ಬನ್ನಿ..
ನಿದ್ದೆ: ನಾವು ಯಶಸ್ವಿಯಾಗಲು ಮೊದಲು ತೊರೆಯಬೇಕಾಗಿದ್ದು, ಆಲಸ್ಯ, ನಿದ್ದೆ. ನಿದ್ದೆ ಅನ್ನೋದು ಮನುಷ್ಯನ ಗುರಿ, ಯಶಸ್ಸನ್ನು ಹಿಂದಿಕ್ಕಿ ಮುಂದಕ್ಕೆ ಸಾಗುತ್ತದೆ. ಯಶಸ್ಸು ಸಾಧಿಸುವ ಹುಮ್ಮಸ್ಸು, ವಯಸ್ಸು ಮುಗಿದ ಬಳಿಕ, ನಿದ್ದೆ ಮುಖ್ಯವಲ್ಲ ಅನ್ನೋದು ಗೊತ್ತಾಗುತ್ತದೆ. ಆದರೆ ಆ ಸತ್ಯ ಮೊದಲೇ ಗೊತ್ತಾದಾಗ ಮಾತ್ರ, ನಾವು ಏನನ್ನಾದರೂ ಸಾಧಿಸಲು ಸಾಧ್ಯ. ಮಿತಿಯಾಗಿ ನಿದ್ದೆ ಮಾಡಿ, ಆರೋಗ್ಯವನ್ನು ಚೆನ್ನಾಗಿ ಇರಿಸಿಕೊಳ್ಳುವುದರ ಜೊತೆಗೆ, ಯಶಸ್ಸಿನ ಕಡೆಗೂ ನಾವು ಗಮನ ಕೊಡಬೇಕು ಅಂತಾರೆ ಚಾಣಕ್ಯರು.
ಮನಸ್ಸು: ನಮ್ಮ ಮನಸ್ಸು ನಮ್ಮ ಹಿಡಿತದಲ್ಲಿರಬೇಕು. ಉದಾಹರಣೆಗೆ ಕಾಲೇಜು ದಿನಗಳಲ್ಲಿ ಓದಿನಲ್ಲಿ ಕಡಿಮೆ ಆಸಕ್ತಿ ಇರುತ್ತದೆ. ವಿರುದ್ಧ ಲಿಂಗದವರನ್ನು ನೋಡಿದಾಗ, ಆಕರ್ಷಿತರಾಗುತ್ತೇವೆ. ಇದನ್ನು ಪ್ರೀತಿ ಅಂತಾ ಹೇಳುವುದಿಲ್ಲ. ಕ್ರಶ್ ಅಂತಾ ಹೇಳಲಾಗುತ್ತದೆ. ಆದ್ರೆ ಮಕ್ಕಳು ಪ್ರೀತಿ-ಪ್ರೇಮವೆಂದು ಹೇಳಿ, ತಮ್ಮ ಗುರಿಯನ್ನು ಮರೆಯುತ್ತಾರೆ. ಹಾಗಾಗಿ ಮನಸ್ಸು ನಿಯಂತ್ರಣದಲ್ಲಿ ಇರಿಸಿದರೆ, ಗುರಿಯತ್ತ ಸಾಗಬಹುದು.
ನಾಲಿಗೆ: ನಾಲಿಗೆ ಅಂದ್ರೆ ಮಾತಿನ ಮೇಲೆ ನಿಯಂತ್ರಣವಿಡಬೇಕು. ಮಾತು ಮಿತವಾದಷ್ಟು ಗೌರವವೂ ಹೆಚ್ಚಾಗುತ್ತದೆ. ಯೋಚಿಸಿ ಮಾತನಾಡುವುದು ಬುದ್ಧಿವಂತಿಕೆ. ಸಮಯ ಸಂದರ್ಭ ನೋಡಿಕೊಂಡು ಮಾತನಾಡುವುದನ್ನು ಕಲಿಯಬೇಕು.
ಕೋಪ: ಕೋಪ ಅನ್ನೋದು ಮನುಷ್ಯನನ್ನು ಸುಡುವ ಕಿಚ್ಚು. ಹಾಗಾಗಿ ಕೋಪವನ್ನು ನಿಯಂತ್ರಣದಲ್ಲಿರಿಸಬೇಕು. ತಾಳ್ಮೆ ಹೆಚ್ಚಾದಷ್ಟು ಕೋಪ ಕಡಿಮೆಯಾಗುತ್ತದೆ. ಧ್ಯಾನ, ಭಕ್ತಿ ಮಾಡುವುದರಿಂದ ತಾಳ್ಮೆ ಹೆಚ್ಚಾಗುತ್ತದೆ. ಇವೆಲ್ಲವನ್ನೂ ನಾವು ನಿಯಂತ್ರಣದಲ್ಲಿರಿಸಿದರೆ ಮಾತ್ರ, ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಅಂತಾರೆ ಚಾಣಕ್ಯರು.