Health Tips: ಗರ್ಭಾವಸ್ಥೆ ಎಂದರೆ, ಹೆಣ್ಣಿಗೆ ಒಂದು ಚಾಲೆಂಜ್ ಇದ್ದಂತೆ. ಎಷ್ಟೋ ಜನ ತಾನು ತಾಯಿಯಾಗುತ್ತಿಲ್ಲವೆಂದು ಕೊರಗುತ್ತಾರೆ. ಅಂಥದರಲ್ಲಿ ದೇವರು ಕೆಲವರಿಗೆ ಈ ಸಂತೋಷವನ್ನು ಕೊಟ್ಟಿರುತ್ತಾನೆ. ಅಂಥವರು ನಿರ್ಲಕ್ಷ್ಯ ಮಾಡದೇ, ಸತತವಾಗಿ ಕಾಳಜಿ ಮಾಡಿ, ಮಗುವನ್ನು ಪಡೆಯಬೇಕು. ಹಾಗಾಗಿ ನಾವಿಂದು ಗರ್ಭಿಣಿಯಾದ ತಕ್ಷಣ ಯಾವ ಸಮಸ್ಯೆ ಕಂಡುಬಂದರೆ, ನಿರ್ಲಕ್ಷಿಸದೇ ವೈದ್ಯರ ಬಳಿ ಹೋಗಬೇಕು ಅಂತಾ ತಿಳಿಯೋಣ ಬನ್ನಿ..
ಮೊದಲನೇಯದಾಗಿ ನಿಮ್ಮ ಮುಟ್ಟು ನಿಂತಾಗ ನೀವು ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಿ, ಗರ್ಭಿಣಿಯಾಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಬಳಿಕ ಸ್ಕ್ಯಾನಿಂಗ್ ಮಾಡಿಸಲೇಬೇಕು. ಆಗ ನಿಮ್ಮ ದೇಹದಲ್ಲಿ ಏನೇನು ಸಮಸ್ಯೆ ಇದೆ ಎಂದು ತಿಳಿಯುತ್ತದೆ. ಕೆಲವರಿಗೆ ಹೊಟ್ಟೆಯಲ್ಲಿ ರಕ್ತ ಸ್ರಾವವಾಗಿರುತ್ತದೆ. ಆದರೆ ಅದು ಗೊತ್ತಾಗುವುದಿಲ್ಲ. ಸ್ಕ್ಯಾನಿಂಗ್ ಮಾಡಿಸಿದಾಗಲೇ ಗೊತ್ತಾಗುತ್ತದೆ. ಹಾಗಾಗಿ ಸ್ಕ್ಯಾನಿಂಗ್ ಮಾಡಿಸುವುದು ತುಂಬಾ ಮುಖ್ಯವಾಗಿದೆ.
ಎರಡನೇಯದಾಗಿ ಸಾಮಾನ್ಯವಾಗಿ ಗರ್ಭಿಣಿಯರಿಗೆ ಮೂರು ತಿಂಗಳು ತುಂಬುವವರೆಗೂ ಬೆಳಗ್ಗಿನ ಜಾವ ವಾಂತಿ ಬರುತ್ತದೆ. ಆದರೆ ನಿಮಗೆ ಮೂರು ತಿಂಗಳು ತುಂಬಿದರೂ, ನಿಮಗೆ ತೀವ್ರ ವಾಂತಿಯಾಗುತ್ತದೆ ಎಂದಾದಲ್ಲಿ, ವೈದ್ಯರಲ್ಲಿ ವಿಚಾರಿಸಿ. ಏಕೆಂದರೆ, ನೀವು ಇದನ್ನು ಸಾಧಾರಣ ಸಮಸ್ಯೆ ಎಂದು ಹೀಗೆ ಬಿಟ್ಟರೆ, ನಿಮ್ಮ ದೇಹದಲ್ಲಿ ನೀರಿನ ಕೊರತೆ ಉಂಟಾಗಿ, ಇದರಿಂದ ನಿಮಗೂ ನಿಮ್ಮ ಮಗುವಿನ ಆರೋಗ್ಯಕ್ಕೂ ಹಾನಿಯುಂಟಾಗುತ್ತದೆ.
ಮೂರನೇಯದಾಗಿ ಮಗುವಿನ ಮೂವ್‌ಮೆಂಟ್ ಸರಿಯಾಗಿ ಆಗದಿರುವುದು. 5 ತಿಂಗಳು ತುಂಬಿದ ಬಳಿಕ, ಮಗು ಹೊಟ್ಟೆಯಲ್ಲಿ ಹಂದಾಡುತ್ತದೆ. ಬರು ಬರುತ್ತ ಆ ತಿರುಗಾಟ ಜೋರಾಗುತ್ತದೆ. ಆದರೆ ನಿಮ್ಮ ಹೊಟ್ಟೆಯಲ್ಲಿರುವ ಮಗು ಹೆಚ್ಚು ಹಂದಾಡುತ್ತಿಲ್ಲವೆಂದಲ್ಲಿ, ನೀವು ವೈದ್ಯರ ಬಳಿ ವಿಚಾರಿಸಬೇಕು.
ನಾಲ್ಕನೇಯದಾಗಿ ಸಿಕ್ಕಾಪಟ್ಟೆ ಹೊಟ್ಟೆ ನೋವಾಗುವುದು. ಹೊಟ್ಟೆ ನೋವಾದರೆ, ಹೊಟ್ಟೆಯಲ್ಲಿ ರಕ್ತಸ್ರಾವವಾಗುತ್ತಿದೆ. ಅಥವಾ ಮಗುವಿಗೆ ಏನೋ ತೊಂದರೆಯಾಗಿದೆ ಎಂದರ್ಥ. ಅಲ್ಲದೇ, ನಿಮಗೆ ಗರ್ಭಾವಸ್ಥೆಯಲ್ಲಿರುವಾಗ ತಲೆನೋವು, ಶೀತ, ನೆಗಡಿ, ಕೆಮ್ಮು ಏನೇ ಬರಬಹುದು. ಆಗ ನೀವು ಯಾವುದೇ ಗುಳಿಗೆ, ಔಷಧಿ ತೆಗೆದುಕೊಳ್ಳದೇ, ವೈದ್ಯರ ಬಳಿಯೇ ವಿಚಾರಿಸಿ, ಚಿಕಿತ್ಸೆ ಪಡೆಯಬೇಕು. ಇಲ್ಲದಿದ್ದಲ್ಲಿ, ತಾಯಿ ಮಗು ಇಬ್ಬರಿಗೂ ಹಾನಿಯುಂಟಾಗುವ ಸಾಧ್ಯತೆ ಇದೆ.