ಕೊರೋನಾ ಬಂದು ಹೋದ ಬಳಿಕ, ನೆಗಡಿ ಕೆಮ್ಮು ಬಂದ್ರೆ, ಜನ ಒಂದೋ ಎರಡೋ ಡೋಲೋ ಮಾತ್ರೆ ತೆಗೆದುಕೊಂಡು, ಪರಿಹಾರ ಮಾಡಿಕೊಳ್ಳುತ್ತಾರೆ. ಆದ್ರೆ ಕಲವರ ಪ್ರಕಾರ, ಈ ಮಾತ್ರೆಗಳನ್ನ ಹೆಚ್ಚು ತೆಗೆದುಕೊಳ್ಳುವುದು ಅಷ್ಟು ಒಳ್ಳೆಯದಲ್ಲ. ಹಾಗಾಗಿ ನಾವಿಂದು ನೆಗಡಿ ಮತ್ತು ಕೆಮ್ಮಿಗೆ ಮನೆ ಮದ್ದು ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ.
ಮೊದಲನೇಯದಾಗಿ ನಿಮಗೆ ನೆಗಡಿ, ಕೆಮ್ಮು ಶುರುವಾಗಿದ್ದರೆ, ನೀವು ಅರಿಶಿನ ಹಾಲನ್ನು ಕುಡಿಯಬೇಕು. ಹಾಲಿಗೆ ಅರಿಶಿನ, ಕಲ್ಲುಸಕ್ಕರೆ, ಚಿಕ್ಕ ತುಂಡು ಹಸಿ ಶುಂಠಿ, 1 ಏಲಕ್ಕಿ, 2 ಲವಂಗ, ಚಿಕ್ಕ ತುಂಡು ಚಕ್ಕೆ ಮತ್ತು ಕೊಂಚ ಜೀರಿಗೆ ಇವೆಲ್ಲವನ್ನೂ ಕುಟ್ಟಿ, ತರಿ ತರಿಯಾಗಿ ಪುಡಿ ಮಾಡಿ ಹಾಕಿ, ಚೆನ್ನಾಗಿ ಕುದಿಸಿ. ಇದಕ್ಕೆ ಕೆಂಪು ಕಲ್ಲು ಸಕ್ಕರೆ ಹಾಕಿದ್ರೆ ಒಳ್ಳೆಯದು. ಸಕ್ಕರೆ ಬಳಸಬೇಡಿ.
ಎರಡನೇಯದಾಗಿ ನೆಗಡಿ ಮತ್ತು ಕೆಮ್ಮು ಇದಕ್ಕೆ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಶಾಯ ಮಾಡಿ ಸೇವಿಸಿ. ಒಂದು ದಿನ ಕಶಾಯ ಮಾಡಿ, ಚಿಕ್ಕ ಲೋಟದಲ್ಲಿ ಕುಡಿಯಿರಿ. ಇದನ್ನ ಕುಡಿಯುವುದರಿಂದ ನಿಮ್ಮ ಆರೋಗ್ಯಕ್ಕೇನು ತೊಂದರೆಯಾಗದಿದ್ದಲ್ಲಿ, ಮರುದಿನ ಮತ್ತೆ ಕುಡಿಯಿರಿ. ಹೀಗೆ 3 ದಿನ ಈ ಕಶಾಯ ಕುಡಿದರೆ, ನೆಗಡಿ , ಕೆಮ್ಮು ನಿಲ್ಲುತ್ತದೆ.
ನೀರಿಗೆ ಕಲ್ಲು ಸಕ್ಕರೆ, ಹಸಿ ಶುಂಠಿ, 1 ಏಲಕ್ಕಿ, 2 ಲವಂಗ, ಚಿಕ್ಕ ತುಂಡು ಚಕ್ಕೆ ಮತ್ತು ಕೊಂಚ ಜೀರಿಗೆ, ಕೊತ್ತೊಂಬರಿ ಕಾಳು, 2 ಎಸಳು ಬೆಳ್ಳುಳ್ಳಿ, ಒಂದು ಸ್ಪೂನ್ ನಿಂಬೆ ಹಣ್ಣಿನ ರಸ ಸೇರಿಸಿ, ಚೆನ್ನಾಗಿ ಕುದಿಸಿ, ಸೋಸಿ ಕುಡಿಯಿರಿ. ಚಿಕ್ಕ ಗ್ಲಾಸ್‌ನಲ್ಲಿ ಈ ಕಶಾಯ ಸೇವಿಸಿದರೆ ಸಾಕು. ನಿಮಗೆ ಈ ಕಶಾಯವನ್ನು ಕುಡಿದು ಉಷ್ಣತೆ ಹೆಚ್ಚಾಗುತ್ತದೆ ಎಂದೆನ್ನಿಸಿದಲ್ಲಿ, ಈ ಕಶಾಯ ಕುಡಿಯಬೇಡಿ.
3 ದಿನ ಈ ಕಶಾಯ ಕುಡಿದರೂ, ನಿಮಗೆ ನೆಗಡಿ ಮತ್ತು ಕೆಮ್ಮು ಕಡಿಮೆಯಾಗದಿದ್ದಲ್ಲಿ, ವೈದ್ಯರ ಬಳಿ ಈ ಬಗ್ಗೆ ವಿಚಾರಿಸುವುದು ಒಳ್ಳೆಯದು.
ಮಕ್ಕಳಲ್ಲಿ ಕ್ಯಾಲ್ಶಿಯಂ ಕಡಿಮೆ ಇದ್ದರೆ ಹೇಗೆ ಗೊತ್ತಾಗತ್ತೆ..? ಇದರ ಲಕ್ಷಣ ಮತ್ತು ಪರಿಹಾರವೇನು..?