ನಾವು ಓರ್ವ ಹಿಂದೂವನ್ನು ಕಂಡುಹಿಡಿಯಬೇಕಾದರೆ, ಅವನ ಕೊರಳಲ್ಲಿ ದೇವರ ದಾರವೋ, ರುದ್ರಾಕ್ಷಿ ಮಾಲೆಯೋ, ಅಥವಾ, ಕೈಗೆ ದೇವರ ದಾರವೇನಾದರೂ ಕಟ್ಟಿದ್ದಾನಾ, ಅಥವಾ ತಿಲಕವಿಟ್ಟಿದ್ದಾನಾ ಇಲ್ಲವಾ ಎಂದು ನೋಡಿ ತಿಳಿದುಕೊಳ್ಳುತ್ತೇವೆ. ಹೀಗೆ ಹಿಂದುತ್ವವನ್ನು ಸೂಚಿಸುವ ಚಿಹ್ನೆಯೇ ತಿಲಕ. ಹಾಗಾದ್ರೆ ಹಿಂದೂಗಳು ತಿಲಕ ಹಚ್ಚೋದ್ಯಾಕೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಪುರುಷನಿಗಿಂತ, ಮಹಿಳೆಯರು ಕುಂಕುಮವಿಡಲೇಬೇಕು ಅನ್ನೋ ನಿಯಮವಿದೆ. ಅದರಲ್ಲೂ ವಿವಾಹಿತ ಮಹಿಳೆಯರು, ಹಣೆಗೆ ಬೊಟ್ಟು ಇಡಬೇಕು ಅಂತಾ ಹಿರಿಯರು ಹೇಳುತ್ತಾರೆ. ನಮ್ಮ ಎರಡೂ ಹುಬ್ಬುಗಳ ನಡುವೆ, ಅಂದರೆ ಭೃಕೂಟಿ ಎಂಬ ಸ್ಥಳದಲ್ಲಿ ಕುಂಟುಮವನ್ನ ಇಡಲಾಗುತ್ತದೆ. ಈ ಜಾಗವನ್ನ ಆಜ್ಞಾಚಕ್ರ ಅಂತಲೂ ಕರೆಯುತ್ತಾರೆ. ಇಲ್ಲಿ ವಿಷ್ಣುವಿನ ವಾಸವಿದೆ. ತಿಲಕವಿಟ್ಟರೆ ವಿಷ್ಣು ಪ್ರಸನ್ನನಾಗುತ್ತಾನೆ ಎಂದು ಸನಾತನ ಧರ್ಮದಲ್ಲಿ ನಂಬಿಕೆ ಇದೆ.
ನವರಾತ್ರಿಯಲ್ಲಿ ಈರುಳ್ಳಿ- ಬೆಳ್ಳುಳ್ಳಿ ಸೇವನೆ ಯಾಕೆ ಮಾಡಬಾರದು..?
ಇನ್ನು ಹೆಣ್ಣು ಮಕ್ಕಳ ಹುಬ್ಬಿನ ಮಧ್ಯ ಭಾಗವನ್ನು ತ್ರಿವೇಣಿ ಸಂಗಮ ಎಂದು ಕರೆಯಲಾಗುತ್ತದೆ. ಯಾಕಂದ್ರೆ ಈ ಸ್ಥಳದಲ್ಲಿ ಮೂರು ನಾಡಿಗಳು ಸೇರುತ್ತದೆ. ಹಾಗಾಗಿ ಇದನ್ನು ತ್ರಿವೇಣಿ ಸಂಗಮ ಅಂತಾ ಕರೆಯಲಾಗುತ್ತದೆ. ಈ ಜಾಗದಲ್ಲಿ ಸರಿಯಾಗಿ ನೀವು ತಿಲಕವಿಟ್ಟಲ್ಲಿ, ನಿಮ್ಮಲ್ಲಿ ತಾಳ್ಮೆ ಹೆಚ್ಚುತ್ತದೆ. ಸಿಟ್ಟು ಹೆಚ್ಚಿದ್ದವರು, ತಮ್ಮ ಹಣೆಗೆ ಶ್ರೀಗಂಧ, ಅಥವಾ ಅರಿಶಿನ ಹಚ್ಚಬೇಕು ಎನ್ನುತ್ತಾರೆ. ತಿಲಕವಿಡುವುದರಿಂದ ಏಕಾಗೃತೆ ಹೆಚ್ಚುತ್ತದೆ.
ಉಂಗುರ ಬೆರಳಿನಿಂದ ತಿಲಕವಿಟ್ಟರೆ, ಶಾಂತಿ ಪ್ರಾಪ್ತಿಯಾಗುತ್ತದೆ. ಮಧ್ಯಮ ಬೆರಳಿನಿಂದ ತಿಲಕವಿಟ್ಟರೆ, ಮನುಷ್ಯನ ಆಯಸ್ಸು ಹೆಚ್ಚುತ್ತದೆ. ಹೆಬ್ಬೆರಳಿನಿಂದ ಕುಂಕುಮ ಹಚ್ಚಿದರೆ, ಸದಾ ಆರೋಗ್ಯವಾಗಿರುತ್ತಾರೆ. ತೋರು ಬೆರಳಿನಿಂದ ಕುಂಕುಮವಿಟ್ಟರೆ, ಮೃತ್ಯುವಿನ ನಂತರ ಮೋಕ್ಷ ಪ್ರಾಪ್ತಿಯಾಗುತ್ತದೆ. ಕಕಿರು ಬೆರಳಿನಿಂದ ಕುಂಕುಮವಿಡಬಾರದು.