ಗಂಗಾ ಸ್ನಾನ ತುಂಗಾ ಪಾನ ಮಾಡಿದ್ದಲ್ಲಿ, ಜನ್ಮ ಪಾವನವಾಗುತ್ತದೆ. ಮಾಡಿದ ಪಾಪ ನಾಶವಾಗುತ್ತದೆ ಅನ್ನೋ ನಂಬಿಕೆ ಇದೆ. ಯಾಕಂದ್ರೆ ಈ ನದಿಗಳು ಅಷ್ಟು ಪವಿತ್ರವಾಗಿದೆ. ಹಾಗಾದ್ರೆ ನಿಜವಾಗ್ಲೂ ಗಂಗೆಯಲ್ಲಿ ಸ್ನಾನ ಮಾಡಿದ್ರೆ, ಪಾಪ ನಾಶವಾಗುತ್ತದಾ..? ಇಲ್ಲವಾ..? ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ..
ಒಮ್ಮೆ ಓರ್ವ ಋಷಿ ಮುನಿ ಹೀಗೆ ಯೋಚಿಸತೊಡಗಿದರು. ಎಲ್ಲ ಪಾಪಿಗಳು ಗಂಗೆಯಲ್ಲಿ ಸ್ನಾನ ಮಾಡುತ್ತಾರೆ. ಹಾಗಾಗಿ ಪಾಪಗಳೆಲ್ಲಾ, ಗಂಗೆಯಲ್ಲಿ ಸೇರುತ್ತದೆ. ಹಾಗಾದ್ರೆ ಗಂಗೆಯೂ ಪಾಪಿಯಾಗುತ್ತಾಳಾ ಅಂತಾ ಯೋಚಿಸತೊಡಗಿದರು. ಇದಕ್ಕೆ ಉತ್ತರ ಪಡೆಯಬೇಕು ಎಂದು ಋಷಿಗಳು ಬ್ರಹ್ಮನನ್ನು ಕುರಿತು ತಪಸ್ಸು ಮಾಡುತ್ತಾಳೆ. ಬ್ರಹ್ಮ ಪ್ರತ್ಯಕ್ಷನಾಗಿ ತನ್ನನ್ನು ನೆನಪಿಸಿಕೊಳ್ಳಲು ಕಾರಣವೇನು ಎಂದು ಕೇಳುತ್ತಾರೆ.
ಆಗ ಋಷಿಗಳು, ಪಾಪ ಕಳೆಯಲು ಗಂಗೆಯಲ್ಲಿ ಎಲ್ಲರೂ ಸ್ನಾನ ಮಾಡುತ್ತಾರೆ. ಹಾಗಾಗಿ ಗಂಗೆಯಲ್ಲಿ ಎಲ್ಲ ಪಾಪ ಹೋಗುತ್ತದೆ.. ಹಾಗಾದ್ರೆ ಗಂಗೆಯೂ ಪಾಪಿಯಾ ಎಂದು ಕೇಳುತ್ತಾರೆ. ಆಗ ಬ್ರಹ್ಮದೇವ, ಇದನ್ನು ಗಂಗೆಯಲ್ಲಿಯೇ ಕೇಳೋಣ ಬಾ ಎನ್ನುತ್ತಾರೆ. ಇಬ್ಬರೂ ಗಂಗೆಯಲ್ಲಿ ಈ ಬಗ್ಗೆ ಕೇಳಿದಾಗ, ನಾನೇಕೆ ಪಾಪಿಯಾಗುತ್ತೇನೆ. ನಾನು ಆ ನೀರನ್ನೆಲ್ಲ ಸಮುದ್ರಕ್ಕೆ ಸೇರಿಸುತ್ತೇನೆ ಎನ್ನುತ್ತಾಳೆ.
ಬ್ರಹ್ಮ ಮತ್ತು ಋಷಿ ಸೇರಿ, ಸಾಗರ ದೇವನಲ್ಲಿ ಹೋಗಿ, ಗಂಗೆಯ ಪಾಪದ ನೀರೆಲ್ಲ ನಿಮ್ಮ ಬಳಿ ಬರುತ್ತದೆ. ಹಾಗಾದ್ರೆ ನೀವು ಪಾಪಿನಾ ಎಂದು ಕೇಳುತ್ತಾರೆ. ಆಗ ಸಾಗರ ದೇವ ಹೇಳುತ್ತಾನೆ, ನಾನೇಕೆ ಪಾಪಿಯಾಗಲಿ..? ನಾನು ಆ ನೀರನ್ನೆಲ್ಲ ಮೋಡದ ಬಳಿ ಕಳುಹಿಸುತ್ತೇನೆ ಎನ್ನುತ್ತಾರೆ. ಮೋಡ ಬಳಿಯೂ ಈ ಪ್ರಶ್ನೆ ಕೇಳಿದಾಗ, ಅದಕ್ಕೆ ಉತ್ತರಿಸಿದ ಮೋಡ, ನನ್ನ ಬಳಿ ಇರುವ ನೀರು ಮಳೆಯಾಗಿ, ಮನುಷ್ಯನ ಬಳಿ ಹೋಗುತ್ತದೆ.
ಪ್ರತಿದಿನ ಹೀಗೆ ಮಾಡಿದರೆ ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಅದೃಷ್ಟ ನಿಮ್ಮ ಸ್ವಂತ..!
ಆ ಮಳೆಯಿಂದ ಮನುಷ್ಯ ಅನ್ನವನ್ನು ಬೆಳೆಯುತ್ತಾನೆ. ಆ ಅನ್ನವನ್ನ ಸರಿಯಾದ ಸಮಯದಲ್ಲಿ ತಿನ್ನುವವನು, ಸರಿಯಾದ ರೀತಿಯಲ್ಲಿ ತಿನ್ನುವವನು ಉತ್ತಮನಾಗಿರುತ್ತಾನೆ. ಸರಿಯಾದ ಸಮಯದಲ್ಲಿ ಅನ್ನ ಉಣ್ಣದೇ, ಸರಿಯಾದ ರೀತಿಯಲ್ಲಿ ಅನ್ನ ಉಣ್ಣದವ ಪಾಪಿಯಾಗುತ್ತಾನೆ. ಸರಿಯಾದ ಸಮಯ ಅಂದ್ರೆ ಶಾಂತವಾಗಿರುವ, ನೆಮ್ಮದಿಯಿಂದಿರುವ ಸಮಯ. ಸರಿಯಾದ ರೀತಿ ಎಂದರೆ, ನಿಯತ್ತಾಗಿ ದುಡಿದ ಹಣದಿಂದ ಖರೀದಿಸಿ ತಿನ್ನುವ ಅನ್ನ.
ಹಾಗಾಗಿ ಅನ್ನ ಉಣ್ಣುವಾಗ, ಕೋಪ ಮಾಡದೇ, ಯಾರ ಬಗ್ಗೆಯೂ ಮನಸ್ಸಿನಲ್ಲಿ ಅಸೂಯೆ ಇರದೇ ಊಟ ಮಾಡಬೇಕು. ಆ ಅನ್ನವನ್ನ ನಿಯತ್ತಾಗಿ ಸಂಪಾದಿಸಿದ ಹಣದಿಂದ ಕೊಂಡುಕೊಂಡದ್ದಾಗಿರಬೇಕು. ಹಾಗಾಗಿ ಗಂಗೆಯಲ್ಲಿ ಸ್ನಾನ ಮಾಡಿದರಷ್ಟೇ ಪಾಪ ನಾಶವಾಗುವುದಿಲ್ಲ. ನಾವು ನಡೆಸುವ ಜೀವನ ಉತ್ತಮವಾಗಿ, ನ್ಯಾಯಯುತವಾಗಿದ್ರೆ ಕೂಡ ಪಾಪ ನಾಶವಾಗುತ್ತದೆ.

