ನೀವು ರಾಮಾಯಣದ ಹಲವು ಕಥೆಗಳನ್ನ ಕೇಳಿರ್ತೀರಿ. ಆದ್ರೆ ಸಂಪೂರ್ಣ ರಾಮಾಯಣದಲ್ಲಿ ಬರುವ ಇನ್ನೂ ಹಲವು ಕಥೆಗಳ ಬಗ್ಗೆ ಹಲವರು ಕೇಳಿರುವುದಿಲ್ಲ. ಅಂಥ ಕಥೆಗಳಲ್ಲಿ ಸೀತಾಮಾತೆ ಲಕ್ಷ್ಮಣನನ್ನೇ ನುಂಗಿದ ಕಥೆಯೂ ಇದೆ. ಹಾಗಾದ್ರೆ ಸೀತೆ ಯಾಕೆ ಲಕ್ಷ್ಮಣನನ್ನು ನುಂಗಿದ್ದಳು..? ಆಮೇಲೇನಾಯಿತು ಅನ್ನು ಬಗ್ಗೆ ತಿಳಿಯೋಣ ಬನ್ನಿ..
ಶ್ರೀರಾಮ, ಸೀತಾಮಾತೆ, ಲಕ್ಷ್ಮಣ ಸೇರಿ ವನವಾಸಕ್ಕೆ ಹೋದಾಗ, ಅವರೊಂದಿಗೆ ಹನುಮಂತನೂ ಇದ್ದ. ಹನುಮ ರಾಮ ಲಕ್ಷ್ಮಣ ಸೇರಿ ರಾವಣನ ವಧೆ ಮಾಡಿ, ಸೀತೆಯೊಂದಿಗೆ ಪುನಃ ಅಯೋಧ್ಯೆಗೆ ತೆರಳುತ್ತಾರೆ. ಆ ದಿನ ಅಯೋಧ್ಯೆಯಲ್ಲಿ ದೀಪಾಲಂಕಾರ ಮಾಡಿ, ಹಬ್ಬವನ್ನು ಮಾಡಲಾಗಿತ್ತು. ಅದನ್ನೇ ಈಗ ನಾವು ದೀಪಾವಳಿ ಎಂದು ಆಚರಿಸುತ್ತೇವೆ. ಹೀಗೆ ಆರೋಗ್ಯವಾಗಿ, ಸುರಕ್ಷಿತವಾಗಿ ಸೀತೆ ರಾಮನೊಂದಿಗೆ ಅಯೋಧ್ಯೆ ಸೇರಿದಾಗ ಆಕೆ ಸರಯೂ ದೇವಿಗೆ ಕೊಟ್ಟ ಮಾತು ನೆನಪಿಗೆ ಬರುತ್ತದೆ.
ಶ್ರೀರಾಮ 14 ವರ್ಷ ವನವಾಸಕ್ಕೆ ಹೋಗಲು ಕಾರಣವೇನು..?
ಸೀತೆ ಮತ್ತು ಶ್ರೀರಾಮ ಸುರಕ್ಷಿತವಾಗಿ ಅಯೋಧ್ಯೆಗೆ ಬಂದ್ರೆ, ತಾನು ಸರಯೂ ದೇವಿಗೆ ಪೂಜೆ ಸಲ್ಲಿಸುತ್ತೇನೆ ಎಂದು ಹೇಳಿರುತ್ತಾಳೆ. ಹಾಗಾಗಿ ಲಕ್ಷ್ಮಣನನ್ನು ಕರೆದುಕೊಂಡು ಸೀತೆ ಮತ್ತು ಹನುಮ ಸರಯೂ ನದಿ ದಡಕ್ಕೆ ಹೋಗುತ್ತಾರೆ. ಅಲ್ಲಿ ಸರಯೂ ದೇವಿಗೆ ಪೂಜೆ ಮಾಡಲು, ಒಂದು ಬಿಂದಿಗೆ ನೀರು ಬೇಕಿರುತ್ತದೆ. ಹಾಗಾಗಿ ಲಕ್ಷ್ಮಣ ನೀರು ತರಲು ನದಿಗೆ ಹೋಗುತ್ತಾನೆ. ಆದ್ರೆ ಅಲ್ಲಿ ಅಘಾಸುರ ಎಂಬ ರಾಕ್ಷಸ ಪ್ರತ್ಯಕ್ಷನಾಗುತ್ತಾನೆ. ಅವನು ಲಕ್ಷ್ಮಣನ ಮೇಲೆ ಸಂಹಾರ ಮಾಡಲು ಮುಂದಾಗುತ್ತಾನೆ.
ಆಗ ಸೀತೆ ಲಕ್ಷ್ಮಣನನ್ನು ನುಂಗುತ್ತಾಳೆ. ಸೀತೆ ಲಕ್ಷ್ಮಣನನ್ನು ನುಂಗಿದ ಬಳಿಕ, ಅವರಿಬ್ಬರೂ ನೀರಾಗುತ್ತಾರೆ. ಈ ದೃಶ್ಯವನ್ನು ಹನುಮಂತ ನೋಡುತ್ತಾನೆ. ಮತ್ತು ಆ ನೀರನ್ನು ಬಿಂದಿಗೆಗೆ ತುಂಬಿಸಿ, ರಾಮನ ಬಳಿ ಬಂದು ಎಲ್ಲ ವಿಷಯವನ್ನು ಹೇಳುತ್ತಾನೆ. ಆಗ ರಾಮ, ಅಘಾಸುರನಿಗೆ ಶಿವನ ವರವಿದೆ. ಹಾಗಾಗಿ ನಾನು ಅವನ ವಧೆ ಮಾಡಲಾಗುವುದಿಲ್ಲ. ಅವನು ಸಾಯಬೇಕು ಅಂದ್ರೆ, ಸೀತೆ ಮತ್ತು ಲಕ್ಷ್ಮಣ ಸೇರಿ, ಒಂದು ತತ್ವವಾಗಬೇಕು. ಹಾಗಾಗಿ ಅವರಿಬ್ಬರೂ ಜಲವಾಗಿದ್ದಾರೆ. ನೀನು ಅವರನ್ನು ಈ ಬಿಂದಿಗೆಗೆ ತುಂಬಿಸಿದ್ದಿಯಾ. ಈಗ ಈ ಬಿಂದಿಗೆಯಲ್ಲಿರುವ ನೀರನ್ನು ಸರಯೂ ನದಿಗೆ ಬಿಡು ಎನ್ನುತ್ತಾನೆ.
ಎಂಥ ಕಷ್ಟ ಬಂದರೂ ಈ ಎರಡು ಮಾತನ್ನ ನೆನಪಿನಲ್ಲಿಡಿ..
ಗಾಯತ್ರಿ ಮಂತ್ರ ಪಠಣ ಮಾಡಿ, ಹನುಮಂತ ಆ ನೀರನ್ನು ನದಿಗೆ ಬಿಡುತ್ತಾನೆ. ಆ ನೀರು ತಾಕುತ್ತಿದ್ದಂತೆ, ನದಿಯಲ್ಲಿ ಬೆಂಕಿ ಬಂದು, ಅಘಾಸುರನ ವಧೆಯಾಗುತ್ತದೆ. ನಂತರ ಸೀತೆ ಮತ್ತು ಲಕ್ಷ್ಮಣ ಮತ್ತೆ ಮೊದಲಿನ ರೂಪಕ್ಕೆ ಬರುತ್ತಾರೆ. ತಮ್ಮ ಸಹಾಯ ಮಾಡಿದ್ದಕ್ಕೆ ಹನುಮಂತನಿಗೆ ಧನ್ಯವಾದ ಹೇಳಿ, ಸರಯೂ ದೇವಿಗೆ ಪೂಜೆ ಸಲ್ಲಿಸಿ ಬರುತ್ತಾರೆ.