Health Tips: ಜೀನಿ ಕಂಪೆನಿಯ ಹಲವು ಪ್ರಾಡಕ್ಟ್‌ಗಳು ಸಖತ್ ಫೇಮಸ್ ಆಗಿದೆ. ಯಾಕಂದ್ರೆ ಅದರ ಆರೋಗ್ಯಕರ ಲಾಭಗಳು ಅದೇ ರೀತಿ ಇದೆ. ಎಷ್ಟೋ ಜನರಿಗೆ ಜೀನಿ ಪೌಡರ್ ಸೇವಿಸಿದ ಬಳಿಕ, ಶುಗರ್ ಬಿಪಿ ಕಂಟ್ರೋಲಿಗೆ ಬಂದ ಉದಾಹರಣೆಗಳಿದೆ. ಅದೇ ರೀತಿ ಜೀನಿ ಸರಿಹಿಟ್ಟನ್ನು 6 ತಿಂಗಳು ತುಂಬಿರುವ ಮಕ್ಕಳಿಗೆ ನೀಡಿದರೆ, ಆ ಮಗು ದಷ್ಟಪುಷ್ಟವಾಗಿ ಬೆಳೆಯುತ್ತದೆ. ಹಾಗಾಗಿ ನಾವಿಂದು ಜೀನಿ ಸರಿಹಿಟ್ಟು ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ.
ಒಂದು ಪಾತ್ರೆಯಲ್ಲಿ ಒಂದು ಗ್ಲಾಸ್ ನೀರು ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ಈ ನೀರು ಕುದಿಯುವವರೆಗೂ ನೀವು ಒಂದು ಗ್ಲಾಸಿನಲ್ಲಿ ಸ್ವಲ್ಪ ತಣ್ಣೀರು ಮತ್ತು ಎರಡು ಸ್ಪೂನ್ ಜೀನಿ ಸರಿಹಿಟ್ಟು ಹಾಕಿ ಗಂಟು ಬರದಂತೆ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಕುದಿಯುತ್ತಿರುವ ನೀರಿಗೆ ಈ ಜೀನಿ ಹಿಟ್ಟಿನ ಮಿಕ್ಸ್‌ನ್ನು ಸೇರಿಸಿ. ಹೀಗೆ ಮಿಕ್ಸ್ ಮಾಡಿದ ತಕ್ಷಣ ಕೈಬಿಡದೇ ಸ್ಪೂನಿನಿಂದ ಚೆನ್ನಾಗಿ ಕೈಯಾಡಿಸಬೇಕು. ಇಲ್ಲವಾದಲ್ಲಿ ಈ ಮಿಶ್ರಣದಲ್ಲಿ ಗಂಟು ಬರುತ್ತದೆ. ಮತ್ತು ಅದರ ರುಚಿಯೂ ಹಾಳಾಗುತ್ತದೆ.
ಈ ಮಿಶ್ರಣ ಸೂಪ್ ಹದಕ್ಕೆ ಬಂದಾಗ, ಸರಿಹಿಟ್ಟು ರೆಡಿ ಎಂದರ್ಥ. ನಿಮ್ಮ ಮಗುವಿಗೆ ತುಪ್ಪ ತಿಂದರೆ ಯಾವುದೇ ಅಲರ್ಜಿಯಾಗುವುದಿಲ್ಲ ಎಂದಾದಲ್ಲಿ ನೀವು ಇದಕ್ಕೆ ತುಪ್ಪ ಸೇರಿಸಿ ಕೊಡಬಹುದು. ಇನ್ನು ಮಗುವಿಗೆ 6 ತಿಂಗಳು ತುಂಬಿದ ಬಳಿಕವೇ ಇದನ್ನು ತಿನ್ನಿಸಲು ಶುರು ಮಾಡಿ. ಇದರ ಸೇವನೆಯಿಂದ ಮಗುವಿಗೆ ಉತ್ತಮ ಪೌಷ್ಠಿಕಾಂಶ, ಶಕ್ತಿ ಸಿಗುತ್ತದೆ. ಮಗು ಚೈತನ್ಯದಾಯಕವಾಗಿ, ಚುರುಕಾಗಿ ಇರಲು ಇದು ಸಹಾಯಕವಾಗಿದೆ. ಇನ್ನು ಇದನ್ನು ಹೇಗೆ ರೆಡಿ ಮಾಡುತ್ತಾರೆಂದು ತಿಳಿಯಲು ಈ ವೀಡಿಯೋ ನೋಡಿ..
ಚೈಲ್ಡ್ ಹುಡ್ ಅಸ್ತಮಾ ಬಗ್ಗೆ ಗಾಬರಿ ಇದೆಯಾ..? ಈ ಬಗ್ಗೆ ವೈದ್ಯರೇ ಸಲಹೆ ಕೊಟ್ಟಿದ್ದಾರೆ ನೋಡಿ..
ಲಂಗ್ ಟ್ರಾನ್ಸಪ್ಲಾಂಟ್ ಅಂದ್ರೇನು..? ಈ ಆಪರೇಷನ್ ಆದವರು ಎಷ್ಟು ವರ್ಷ ಬದುಕುತ್ತಾರೆ..?