Saturday, July 27, 2024

Latest Posts

ಗಣೇಶನಿಗೆ ಪ್ರಿಯವಾದ ಕಡಲೆ ಉಸ್ಲಿಯನ್ನ ಹೀಗೆ ತಯಾರಿಸಿ ನೋಡಿ..

- Advertisement -

ಇನ್ನೆರಡು ದಿನಗಳಲ್ಲಿ ಗಣೇಶ ಚತುರ್ಥಿ ಬರುತ್ತಿದೆ. ಗಣೇಶನಿಗೆ ನೈವೇದ್ಯ ಮಾಡಲು ಹಲವು ಬಗೆಗಳ ತಿಂಡಿ ತಯಾರಿಸಬೇಕಾಗುತ್ತದೆ. ಹಾಗಾಗಿ ನಾವಿಂದು ಕಡ್ಲೆ ಉಸುಳಿ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ.

ಗಣಪನಿಗೆ ಬಲು ಇಷ್ಟವಾಗುವ ಪಂಚಕಜ್ಜಾಯ ರೆಸಿಪಿ..

ಬೇಕಾಗುವ ಸಾಮಗ್ರಿ: ಒಂದು ಕಪ್‌ ಕಡ್ಲೆ, ಎರಡು ಹಸಿಮೆಣಸಿನಕಾಯಿ, ಅರ್ಧ ಕಪ್ ಕೊಬ್ಬರಿ ತುರಿ, ಚಿಟಿಕೆ ಹಿಂಗು, ಚಿಟಿಕೆ ಅರಿಶಿನ, ಕೊಂಚ ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ, 2 ಸ್ಪೂನ್ ಎಣ್ಣೆ, ಸಾಸಿವೆ, ಜೀರಿಗೆ, ಕಡಲೆ ಬೇಳೆ, ಉದ್ದಿನ ಬೇಳೆ, ಕರಿಬೇವು.

ಕರ್ಚಿಕಾಯಿಯನ್ನು ಈ ರೀತಿ ಮಾಡಿದ್ದಲ್ಲಿ ಹೆಚ್ಚು ಟೇಸ್ಟಿಯಾಗಿರತ್ತೆ ನೋಡಿ..

ಮಾಡುವ ವಿಧಾನ: ಮೊದಲು ಕಡಲೆ, ಉಪ್ಪು, ಕೊಂಚ ಎಣ್ಣೆ, ನೀರು ಹಾಕಿ ಕಡಲೆ ಬೇಯಿಸಿಕೊಳ್ಳಿ. ಇದಾದ ಬಳಿಕ ಗ್ಯಾಸ್ ಆನ್ ಮಾಡಿ, ಪ್ಯಾನ್ ಇಟ್ಟು ಸಾಸಿವೆ, ಜೀರಿಗೆ, ಹಸಿ ಮೆಣಸು, ಉದ್ದಿನ ಬೇಳೆ, ಕಡಲೆ ಬೇಳೆ, ಕರಿಬೇವು, ಇಂಗು ಹಾಕಿ, ಹುರಿಯಿರಿ. ಈಗ ಇದಕ್ಕೆ ಬೇಯಿಸಿದ ಕಡಲೆ ಮತ್ತು ಕೊಂಚ ಸಕ್ಕರೆ ಮತ್ತು ಉಪ್ಪು ಸೇರಿಸಿ ಮಿಕ್ಸ್ ಮಾಡಿ. 5 ನಿಮಿಷ ಮಂದ ಉರಿಯಲ್ಲಿ ಬೇಯಿಸಿ. ಇದಾದ ಬಳಿಕ ಗ್ಯಾಸ್ ಆಫ್ ಮಾಡಿ, ಕೊಬ್ಬರಿ ತುರಿ ಮಿಕ್ಸ್ ಮಾಡಿದ್ರೆ ಕಡಲೆ ಉಸುಳಿ ರೆಡಿ.

- Advertisement -

Latest Posts

Don't Miss