Thursday, November 30, 2023

Latest Posts

ಹೇಗಿದೆ ಗೊತ್ತಾ..? “ಕನ್ನಡ್ ಗೊತ್ತಿಲ್ಲ..!” ಸಿನಿಮಾ ಟೀಸರ್..?

- Advertisement -

ಡಿಫರೆಂಟ್ ಟೈಟಲ್ ನಿಂದಲೇ, ಚಿತ್ರ ರಸಿಕರ ಗಮನ ಸೆಳೆದಿರುವ “ಕನ್ನಡ್ ಗೊತ್ತಿಲ್ಲ..!” ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ಹರಿಪ್ರಿಯಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ “ಕನ್ನಡ್ ಗೊತ್ತಿಲ್ಲ..!” ಚಿತ್ರದ ಟೀಸರ್, ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಅಷ್ಟೇ ಅಲ್ಲದೆ ಹರಿಪ್ರಿಯಾ ಅವರಿಗೆ ಮತ್ತೊಂದು ಇಮೇಜ್ ತಂದುಕೊಡುವ ನಿರೀಕ್ಷೆ ಮೂಡಿಸಿದೆ.

” ನನ್ನ ಜೀವನದಲ್ಲಿ ನಾನೂ ಸೋತೊಗಿದ್ದಿನಿ. ಇನ್ನ ನಾನು ಬದುಕಿರೋದ್ರಲ್ಲಿ ಅರ್ಥಾನೇ ಇಲ್ಲ” ಅಂತ ಶುರುವಾಗೋ ಟೀಸರ್, ಆರಂಭದಲ್ಲೇ ಕುತೂಹಲ ಮೂಡಿಸುತ್ತೆ. ಟೀಸರ್ ನಲ್ಲೇ ಸಖತ್ ಥ್ರಿಲ್ ನೀಡಿರುವ ಚಿತ್ರ ತಂಡ, ಎಲ್ಲೋ ಒಂದು ಕಡೆ ಚಿತ್ರದ ಎಳೆಯನ್ನ ಟೀಸರ್ ನಲ್ಲೇ ಬಿಟ್ಟು ಕೊಟ್ಟಿದ್ದಾರೆ ಅನ್ನಿಸದೇ ಇರೋದಿಲ್ಲ. ಡಾಟರ್ ಆಫ್ ಪಾರ್ವತಮ್ಮ ನಂತರ ಮತ್ತೊಂದು ಅಂತಹದ್ದೇ ಪಾತ್ರದಲ್ಲಿ ಹರಿಪ್ರಿಯಾ ಕಾಣಿಸಿಕೊಳ್ಳುತ್ತಿದ್ದು, ಟೀಸರ್ ನಲ್ಲಿ ಬಿಂದಾಸ್ ಡೈಲಾಗ್ ಗಳ ಝಲಕ್ ನೋಡಬಹುದಾಗಿದೆ.

ಚಿತ್ರದ ಹಿನ್ನೆಲೆ ಸಂಗೀತಕ್ಕೆ, ಫ್ಯಾನ್ಸ್ ಫಿದಾ ಆಗಿದ್ದಾರೆ. ಇನ್ನೂ ಟೀಸರ್ ನಲ್ಲಿ ಹರಿಪ್ರಿಯಾ ಅಭಿನಯ ನೋಡಿರುವ ಅಭಿಮಾನಿಗಳು, ಲೇಡಿ ಸೂಪರ್ ಸ್ಟಾರ್ ಅನ್ನೋ ಬಿರುದು ನೀಡಿದ್ದಾರೆ. “ಕೊಲೆಗಾರ ನಾಪತ್ತೆ ಹುಡುಕಿ ಕೊಟ್ಟವರಿಗೆ ಬಿಡುಗಡೆ, ಇಲ್ದೆ ಹೋದ್ರೆ ತಿಥಿವಡೆ..” ಅನ್ನೋ ಡೈಲಾಗ್ ಜೊತೆಗೆ, “ನಮಸ್ಕಾರ ಗುರೂ….” ಅನ್ನೋ ಹರಿಪ್ರಿಯಾ ಡೈಲಾಗ್ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಇನ್ನು
ಶ್ರೀ ರಾಮರತ್ನ ಪ್ರೊಡಕ್ಷನ್ ನಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು, ಮಯೂರ್ ರಾಘವೇಂದ್ರ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

- Advertisement -

Latest Posts

Don't Miss