Saturday, July 5, 2025

Latest Posts

ಹಣ್ಣಿನ ಸಿಪ್ಪೆಯಿಂದಲೂ ಸೌಂದರ್ಯ ಕಾಪಾಡಿಕೊಳ್ಳಬಹುದು: ನಟಿ ಕಾವ್ಯಾ ಶಾ..

- Advertisement -

ಈ ಹಿಂದಿನ ಭಾಗದಲ್ಲಿ ನಾವು ಕಾವ್ಯಾ ಶಾ ಐಸ್ ಫೇಶಿಯಲ್ ಮತ್ತು ಸನ್‌ಸ್ಕ್ರೀಮ್ ಲೋಶನ್ ಬಳಸಿ ಎಂದು ಬ್ಯೂಟಿ ಟಿಪ್ಸ್ ಕೊಟ್ಟಿದ್ದರ ಬಗ್ಗೆ ಮಾಹಿತಿ ನೀಡಿದ್ದೆವು. ಇಂದು ಅದರ ಮುಂದಿನ ಭಾಗವಾಗಿ, ಕಾವ್ಯಾ ಕೊಟ್ಟಿರುವ ಇನ್ನೂ ಹೆಚ್ಚಿನ ಟಿಪ್ಸ್  ಬಗ್ಗೆ ತಿಳಿಯೋಣ ಬನ್ನಿ..

ಕಾವ್ಯಾರ ಪ್ರಕಾರ ಪ್ರತೀ ಹೆಣ್ಣು, ತನ್ನ ತ್ವಚೆಯ ಆರೋಗ್ಯದ ಕಡೆ ಖಂಡಿತ ಗಮನ ಕೊಡಬೇಕು. ಅದನ್ನು ಬಿಟ್ಟು ಮದುವೆ ಆಯ್ತಲಾ ಬಿಡು, ನನ್ನ ಗಂಡ ಮಕ್ಕಳು ಚನಾಗಿದ್ರೆ ಸಾಕು, ನಾ ಹೆಂಗ್ ಕಂಡ್ರೇನು..? ಹೀಗೆ ಯೋಚನೆ ಮಾಡ್ಬಾರ್ದು ಅಂತಾರೆ ಕಾವ್ಯಾ. ಗಂಡ ಮಕ್ಕಳ ಬಗ್ಗೆ ಕೇರ್ ಮಾಡೋದು ತಪ್ಪಲ್ಲ, ಆದ್ರೆ ಅದರ ಜೊತೆಗೆ ನಿಮ್ಮನ್ನು ನೀವು ಚೆನ್ನಾಗಿ ನೋಡಿಕೊಳ್ಳುವುದು ಕೂಡ ಮುಖ್ಯ ಅಂತಾರೆ ಕಾವ್ಯಾ.

ಇನ್ನು ಈ ಬಾರಿ ಕಾವ್ಯಾ ಹಣ್ಣಿನ ಸಿಪ್ಪೆ ಹೇಗೆ ಬಳಕೆಯಾಗತ್ತೆ ಅನ್ನೋ ಬಗ್ಗೆ ಹೇಳಿದ್ದಾರೆ. ಪಪ್ಪಾಯಿ, ಕರ್ಬೂಜ, ಕಲ್ಲಂಗಡಿ ಅಥವಾ ಪಚ್ಚ ಬಾಳೆ ಹಣ್ಣು. ಈ ನಾಲ್ಕು ಹಣ್ಣುಗಳಲ್ಲಿ ಯಾವುದಾದರೂ ಒಂದು ಹಣ್ಣಿನ ಸಿಪ್ಪೆಯಿಂದ ಪ್ರತೀ ರಾತ್ರಿ ಮುಖಕ್ಕೆ ಮಸಾಜ್ ಮಾಡಿ, ಮಲಗಿ. ಬೆಳಿಗ್ಗೆ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಹೀಗೆ ಮಾಡುವುದರಿಂದ ನಿಮ್ಮ ತ್ವಚೆ ಕಾಂತಿಯುತವಾಗಿರುತ್ತದೆ ಅಂತಾರೆ ಕಾವ್ಯಾ.

ಕಾವ್ಯಾ ಶಾ ತಮ್ಮ ತ್ವಚೆ ಯಾಕಿಷ್ಟು ಅಂದವಾಗಿದೆ, ಅವರು ಪ್ರತಿದಿನ ತ್ವಚೆಯ ಸೌಂದರ್ಯ ಹೆಚ್ಚಿಸಿಕೊಳ್ಳಲು ಯಾವ ರೂಟಿನ್ ಫಾಲೋ ಮಾಡ್ತಾರೆ ಅನ್ನೋ ಬಗ್ಗೆ ಮತ್ತು ಸೌಂದರ್ಯ ಹೆಚ್ಚಿಸಿಕೊಳ್ಳಲು ಇನ್ನಷ್ಟು ಟಿಪ್ಸ್‌ಗಳನ್ನ ಕೊಟ್ಟಿದ್ದಾರೆ. ಆ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ..

- Advertisement -

Latest Posts

Don't Miss