Health Tips: ಎಷ್ಟೋ ಜನರಿಗೆ ಪ್ರತಿದಿನ ಧೂಮಪಾನ, ತಂಬಾಕಿನ ಸೇವನೆ ಮಾಡದಿದ್ದರೆ, ಮಾನಸಿಕ ಹಿಂಸೆಯಾಗುತ್ತದೆ. ಅದನ್ನು ಸೇವಿಸಿದ ಮೇಲಷ್ಟೇ ಅವರು ನಾರ್ಮಲ್ ಆಗಿ ಇರುತ್ತಾರೆ. ಆದರೆ ಇದು ಆರೋಗ್ಯಕ್ಕೆಷ್ಟು ಹಾನಿಕಾರಕ ಅನ್ನೋದು ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ..
ಡಾ.ವಿ.ಬಿ.ಗೌಡ ಈ ಬಗ್ಗೆ ಮಾಹಿತಿ ನೀಡಿದ್ದು, ಅವರ ಬಳಿ ಬರುವ ಹಲವು ಕ್ಯಾನ್ಸರ್ ರೋಗಿಗಳು ತಂಬಾಕು ಸೇವನೆ ಮಾಡಿಯೇ, ಕ್ಯಾನ್ಸರ್ ಬರಿಸಿಕೊಂಡಿದ್ದು. ಹಾಗಾಗಿ ಯಾವುದೇ ಕಾರಣಕ್ಕೂ ತಂಬಾಕಿನ ಸೇವನೆ ಮಾಡಬೇಡಿ ಎನ್ನುತ್ತಾರೆ ವೈದ್ಯರು. ತಂಬಾಕು ಸೇವನೆಯಿಂದ ಅಕಾಲಿಕ ಮರಣಗಳು ಸಂಭವಿಸುತ್ತದೆ.
ಕೆಲವರು ತಂಬಾಕನ್ನು ಬಾಯಿಗೆ ಹಾಕಿ ಅಗಿಯುತ್ತಾರೆ. ಇನ್ನು ಕೆಲವರು ಧೂಮಪಾನದ ಮೂಲಕ ತಂಬಾಕಿನ ಸೇವನೆ ಮಾಡುತ್ತಾರೆ. ಈ ರೀತಿ ತಂಬಾಕಿನ ಸೇವನೆಯನ್ನು ಮಾಡುವುದರಿಂದ, ಅವರಿಗೂ ಆ ಧೂಮಪಾನದ ಹೊಗೆ ತೆಗೆದುಕೊಳ್ಳುವವರಿಗೂ ಆರೋಗ್ಯ ಹಾಳಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಕೂಡ ತಂಬಾಕು ಸೇವನೆಯ ಚಟಕ್ಕೆ ಬಿದ್ದಿದ್ದಾರೆ. ಈ ಮೂಲಕ ತಂಬಾಕಿನ ಸೇವನೆ ಮಾಡಿ, ಕ್ಯಾನ್ಸರ್ ಬರುವವರ ಸಂಖ್ಯೆ ಹೆಚ್ಚಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ವೀಡಿಯೋ ನೋಡಿ..




