ಚಾಣಕ್ಯರು ಮನುಷ್ಯ ಯಾವ ರೀತಿ ಬದುಕಿದರೆ, ನೆಮ್ಮದಿಯಾಗಿ, ಖುಷಿಯಾಗಿರಬಹುದು ಎಂದು ಹೇಳಿದ್ದಾರೆ. ಅದೇ ರೀತಿ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಬೇಕು ಅಂದ್ರೆ, ನಿಮ್ಮ ಮನೆಯಲ್ಲಿ ಸದಾ ಲಕ್ಷ್ಮೀ ನೆಲೆಸಿರಬೇಕು ಅಂದ್ರೆ ಏನು ಮಾಡಬೇಕು ಅಂತಲೂ ಹೇಳಿದ್ದಾರೆ. ಹಾಗಾಗಿ ನಾವಿಂದು ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಈ ಮೂರು ಜನರಿಂದ ದೂರವಿರಿ.. ಇಲ್ಲದಿದ್ದಲ್ಲಿ, ನಿಮ್ಮ ಜೀವನವೇ ಹಾಳಾಗುತ್ತದೆ..
ಕುಟುಂಬಸ್ಥರನ್ನು ಸದಾ ಪ್ರೀತಿ, ಕಾಳಜಿಯಿಂದ ಕಾಣಿರಿ. ಯಾವ ಮನೆ ಜನರಿಗೆ ತಾಳ್ಮೆ ಹೆಚ್ಚಿರುತ್ತದೆಯೋ, ಯಾವ ಜನರಿಗೆ ಕ್ಷಮಾ ಗುಣವಿರುತ್ತದೆಯೋ, ಅಂಥ ಮನೆಯಲ್ಲಿ ಲಕ್ಷ್ಮೀ ವಾಸಿಸುತ್ತಾಳೆ. ಯಾಕಂದ್ರೆ ಆ ಮನೆಯಲ್ಲಿ ಹೆಚ್ಚು ಜಗಳವಾಗುವುದಿಲ್ಲ. ದ್ವೇಷಿಸುವ , ಹಂಗಿಸುವ ಜನರಿರೋದಿಲ್ಲ. ಹಾಗಾಗಿ ಆ ಮನೆಯಲ್ಲಿ ಸದಾ ನೆಮ್ಮದಿ ನೆಲೆಸಿರುತ್ತದೆ. ಮತ್ತು ನೆಮ್ಮದಿಯಿಂದಿರುವ ಮನುಷ್ಯ, ಆರಾಮವಾಗಿ, ಚೈತನ್ಯದಿಂದಿದ್ದು, ದುಡಿಯುತ್ತಾನೆ.
ಮನೆಯಲ್ಲಿ ಧಾನ್ಯಗಳನ್ನು ತಂದು ಹಾಕಲು ಎಂದಿಗೂ ಕಂಜೂಸುತನ ಮಾಡಬೇಡಿ. ಮನೆಯಲ್ಲಿ ಎಂದಿಗೂ ಅಕ್ಕಿ ಡಬ್ಬ ಖಾಲಿಯಾಗಬಾರದು. ಅರಶಿನ, ಉಪ್ಪು ಖಾಲಿಯಾಗಬಾರದು. ಇವೆಲ್ಲ ಖಾಲಿಯಾದರೆ, ಲಕ್ಷ್ಮೀ ದೇವಿಯ ಅವಕೃಪೆಗೆ ಪಾತ್ರವಾಗಬೇಕಾಗುತ್ತದೆ. ಹಾಗಾಗಿ ಅಕ್ಕಿ, ಉಪ್ಪು, ಅರಿಶಿನ ಮನೆಯಲ್ಲಿ ಖರ್ಚಾಗದಂತೆ ನೋಡಿಕೊಳ್ಳಿ. ಖಾಲಿಯಾಗುತ್ತ ಬಂದಂತೆ, ತಂದಿರಿಸಿ.
ಈ ಒಂದು ಗುಣವಿಲ್ಲದಿದ್ದಲ್ಲಿ ನೀವು ಬದುಕಿದ್ದೂ ಪ್ರಯೋಜನವಿಲ್ಲ..
ನಿಮ್ಮ ಸುತ್ತಮುತ್ತಲೂ ಮೂರ್ಖರು, ಹಂಗಿಸಿ ಮಾತನಾಡುವವರು, ನಿಮ್ಮ ಮನಸ್ಸು ನೋಯಿಸುವವರು ಇದ್ದರೆ, ಅಂಥವರಿಂದ ದೂರವಿರಿ. ಅವರು ನಿಮ್ಮ ಮನೆಯವರೇ ಆಗಿದ್ದರೂ ಸರಿ, ಅವರೊಂದಿಗೆ ಅಷ್ಟಕ್ಕಷ್ಟೇ ಇರಿ. ಯಾಕಂದ್ರೆ ಅಂಥವರಿಂದ ನಿಮ್ಮ ಮನಸ್ಸಿಗೆ ನೋವಾಗುತ್ತದೆ. ಹಾಗಾದಾಗ, ಯಾವ ಕೆಲಸ ಮಾಡಲೂ ನಿಮಗಾಗುವುದಿಲ್ಲ. ಮತ್ತು ನೀವು ಕೆಲಸ ಮಾಡದಿದ್ದಲ್ಲಿ, ನಿಮ್ಮ ಬಳಿ ಲಕ್ಷ್ಮೀ ಹೇಗೆ ಬರುತ್ತಾಳೆ..? ಹಾಗಾಗಿ ಇಂಥವರಿಂದ ಯಾವಾಗಲೂ ದೂರವಿರಿ.