Saturday, May 18, 2024

Latest Posts

ಲಂಕಾಪತಿ ರಾವಣನ ಪೂರ್ಣವಾಗದ ಆಸೆಗಳಿದು.. ಭಾಗ 2

- Advertisement -

ಇದರ ಮೊದಲ ಭಾಗದಲ್ಲಿ ನಾವು ಲಂಕಾಪತಿ ರಾವಣನಿಗೆ ಇದ್ದ ಆಸೆಗಳು ಯಾವುದು ಅನ್ನೋ ವಿಷಯಕ್ಕೆ ಸಂಬಂಧಿಸಿದಂತೆ 3 ಆಸೆಗಳ ಬಗ್ಗೆ ಹೇಳಿದ್ದೆವು. ಇದೀಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 4 ಆಸೆಗಳ ಬಗ್ಗೆ ಹೇಳಲಿದ್ದೇವೆ.

ಭೀಷ್ಮ ಪಿತಾಮಹರ ಈ 5 ತಪ್ಪಿನಿಂದಾಗಿಯೇ ಮಹಾಭಾರತ ಯುದ್ಧವಾಗಿತ್ತು..

ನಾಲ್ಕನೇಯ ಆಸೆ, ರಕ್ತದ ಬಣ್ಣವನ್ನು ಬದಲಿಸಬೇಕು ಅನ್ನೋದು. ಯಾಕಂದ್ರೆ ರಾವಣ ಯುದ್ಧ ಮಾಡಿ, ಹಲವರ ಮರಣಕ್ಕೆ ಕಾರಣನಾಗಿದ್ದ. ಎಲ್ಲರ ಮರಣವಾದಾಗ, ಭೂಮಿ ರಕ್ತದ ಕಲೆಯಿಂದ ಕೆಂಪು ಕೆಂಪಾಗುತ್ತಿತ್ತು. ಹಾಗಾಗಿ ಅವನು ಯುದ್ಧ ಮಾಡಿದ ಸಾಕ್ಷಿಯನ್ನು ಮುಚ್ಚಿ ಹಾಕಲು, ನೀರಿನ ಸಹಾಯ ತೆಗೆದುಕೊಂಡು ರಕ್ತವನ್ನು ಅಳಿಸಬೇಕು ಅಂತಿದ್ದ. ಅದೇ ಕಾರಣಕ್ಕೆ ರಕ್ತದ ಬಣ್ಣ ಬಿಳಿ ಮಾಡಬೇಕು ಅನ್ನೋದು ಅವನ ವಿಚಿತ್ರ ಆಸೆಯಾಗಿತ್ತು.

ಐದನೇಯ ಆಸೆ, ಸ್ವರ್ಗಕ್ಕೆ ಮೆಟ್ಟಿಲು ಮಾಡಿಸುವುದು ರಾವಣನ ಆಸೆಯಾಗಿತ್ತು. ಇಡೀ ಲೋಕವನ್ನು ತನ್ನ ವಶ ಮಾಡಿಕೊಳ್ಳಬೇಕು ಅನ್ನೋದು ರಾವಣನ ಆಸೆಯಾಗಿತ್ತು. ಭೂಲೋಕ, ಪಾತಾಳ, ಸ್ವರ್ಗಲೋಕ ಎಲ್ಲವೂ ತನ್ನದಾಗಿಸಿಕೊಳ್ಳಬೇಕು ಅನ್ನೋದು ರಾವಣನ ಆಸೆಯಾಗಿತ್ತು. ಹಾಗಾಗಿ ಅವನು ಸ್ವರ್ಗಲೋಕ ತನ್ನದಾದ ಮೇಲೆ ಸ್ವರ್ಗಕ್ಕೆ ಬಾಗಿಲು ಮಾಡಿಸಬೇಕು ಅನ್ನೋ ಆಸೆ ಹೊಂದಿದ್ದ.

ಲಂಕಾಪತಿ ರಾವಣನ ಪೂರ್ಣವಾಗದ ಆಸೆಗಳಿದು.. ಭಾಗ 1

ಆರನೇಯ ಆಸೆ, ಮದಿರೆಯ ವಾಸನೆಯನ್ನ ಸುವಾಸನೆ ಮಾಡಬೇಕು ಅನ್ನೋ ಆಸೆ ಇತ್ತು. ಯಾಕಂದ್ರೆ ರಾವಣ ಮದಿರಾ ಪ್ರಿಯನಾಗಿದ್ದ. ಅವನು ಅದರಿಂದ ಬರುವ ದುರ್ಗಂಧವನ್ನು ಹೋಗಲಾಡಿಸಬೇಕು. ಕುಡಿದು ಮಾತನಾಡಿಸಿದಾಗ, ನಮ್ಮಿಂದ ಯಾರೂ ದೂರ ಓಡಬಾರದು ಅನ್ನೋದು ಅವನ ಆಸೆಯಾಗಿತ್ತು.

ಏಳನೇಯ ಆಸೆ, ಸಮುದ್ರದ ಉಪ್ಪು ನೀರನ್ನು, ಸಿಹಿ ನೀರನ್ನಾಗಿ ಮಾಡಬೇಕು ಅನ್ನೋದು ರಾವಣನ ಆಸೆಯಾಗಿತ್ತು. ಆದ್ರೆ ರಾವಣನ 7 ವಿಚಿತ್ರ ಆಸೆಗಳು ಪೂರ್ಣವಾಗುವ ಮುನ್ನವೇ ರಾಮನ ಕೈಯಿಂದ ರಾವಣನ ಸಂಹಾರವಾಯಿತು.

- Advertisement -

Latest Posts

Don't Miss